ನಿರ್ಮಿಲ್ಲೆಂ ನಿರ್ಮೋಣೆಂ ಆ.23ಕ್ಕೆ ತೆರೆಗೆ
ಕೊಂಕಣಿ ಸಿನೆಮಾ ಕ್ಷೇತ್ರದಲ್ಲಿ ಬಹುನಿರೀಕ್ಷೆ ಮೂಡಿಸಿದ ನಿರ್ಮಿಲ್ಲೆಂ ನಿರ್ಮೊಣೆಂ’ ಸಿನಿಮಾ ಆಗಸ್ಟ್ 23 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ. ಹೆನ್ರಿ ಡಿ ಸಿಲ್ವ ನಿರ್ಮಾಪಕತ್ವದಲ್ಲಿ ಮೆಲ್ವಿನ್ ಎಲ್ಪೆಲ್ ಅವರ ನಿರ್ದೇಶನದಲ್ಲಿ ಈ ಸಿನೆಮಾ ತಯಾರಾಗಿದೆ.
ಸುಮಾರು 42 ದಿನಗಳ ಕಾಲ ಒಟ್ಟು ನಾಲ್ಕು ಹಂತಗಳಲ್ಲಿ ಈ ಸಿನೆಮಾವನ್ನು ಬೆಂಗಳೂರು, ಮಂಗಳೂರು, ಕುಂದಾಪುರ, ಕಾರ್ಕಳ ಮುಂತಾದೆಡೆಗಳಲ್ಲಿ ಚಿತ್ರೀಕರಿಸಲಾಗಿದೆ. ಸಿನೆಮಾದ ನಾಯಕರಾಗಿ ಪ್ರತಾಪ್ ಮಿನೇಜಸ್, ಗೋಡ್ವಿನ್, ನಾಯಕಿಯರಾಗಿ ಸೀಮಾ ಬೊತೇಲೋ, ಹೀರಾ ಪಿಂಟೋ ಅವರು ನಟಿಸುತ್ತಿದ್ದಾರೆ.
ಮೀನಾಕ್ಷಿ ಮಾರ್ಟಿನ್, ಹ್ಯಾಂಬರ್ಟ್ ಗೋವಾ, ರೋನಿ ಸುರತ್ಕಲ್, ಚಾರ್ಲ್ಸ್ ಗೋಮ್ಸ್, ವಿನ್ನಿ ಫೆರ್ನಾಂಡಿಸ್, ನೋಬರ್ಟ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸಂತೋಷ್, ಮಿಲನ್ ಮರ್ಕಂಜ, ಜೆರಾಲ್ಡ್ ಮತ್ತು ರಾಯನ್ ಅವರು ಸಹಾಯಕ ನಿರ್ದೇಶಕರಾಗಿ ದುಡಿದಿದ್ದಾರೆ. ಚಿತ್ರಕಥೆಯನ್ನು ನೋಬರ್ಟ್ ಜಾನ್ ಅವರು ಬರೆದಿದ್ದಾರೆ. ಅವರು ಸಹ ನಿರ್ದೇಶಕರೂ ಆಗಿದ್ದಾರೆ.
ಕೆಮರಾದಲ್ಲಿ ಮಂಜುನಾಥ್ ಅವರು ದುಡಿದಿದ್ದಾರೆ. ರೆಂಬಿಬಸ್ ಮತ್ತು ಆರ್. ಪಾಪನ್ ಜೋಸ್ವಿನ್ ಅವರ ಸಾಹಿತ್ಯ ಚಿತ್ರಕ್ಕಿದೆ. ಪ್ರೀತಿಸುವ ಹೃದಯಗಳ ತಳಮಳಗಳ ಕುರಿತಾಗಿ ಚಿತ್ರದ ಕಥೆ ಸಾಗುತ್ತಿದೆ.