ಉದ್ಯಾವರ: ಪ್ರೇಮ ವೈಫಲ್ಯಕ್ಕೆ ನೊಂದ ಯುವಕ ಮತಾಂತರ ?

ಉಡುಪಿ:  ಉದ್ಯಾವರ  ರಿಕ್ಷಾ ಚಾಲಕನೋರ್ವ  ಹಿಂದೂ ದೇವರು, ದೈವಗಳ ಅವಹೇಳನ ಮಾಡಿದ ವಿಡಿಯೋ ವೈರಲ್ ಆಗಿದ್ದು, ಹಿಂದೂ ಸಂಘಟನೆಗಳ ನೂರಾರು ಕಾರ್ಯಕರ್ತರು ಯುವಕನ ಮನೆಗೆ ಮುತ್ತಿಗೆ ಹಾಕಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಉದ್ಯಾವರ  ನಿವಾಸಿ  ಪ್ರದೀಪ್(28) ಕಳೆದ ಕೆಲವು ಸಮಯಗಳಿಂದ ಪ್ರೇಮ ವೈಫಲ್ಯದಿಂದ  ಮಾನಸಿಕ ಖಿನ್ನತೆಗೆ ಒಳಗಾಗಿದ್ದ.ಈತನನ್ನು  ಮನೆಯವರು ವೈದ್ಯರಲ್ಲಿ ಚಿಕಿತ್ಸೆ  ಹಾಗೂ  ಕೌನ್ಸಿಲಿಂಗ್‌ಗೆ ಒಳಪಡಿಸಿದ್ದರು. ತಿಂಗಳುಗಳ ಕಾಲ ಚಿಕಿತ್ಸೆ ಪಡೆದರೂ ಇತನಲ್ಲಿ ಬದಲಾವಣೆಯಾಗಿರಲಿಲ್ಲ ಬಳಿಕ ದೈವ-ದೇವರುಗಳ ಪೂಜೆ ಪುನಸ್ಕಾರದಿಂದ ಸಾವಿರಾರು ರೂಪಾಯಿ ವ್ಯಯಿಸಿದ್ದ ಪ್ರದೀಪ್‌ನ ಮೊದಲಿನಂತೆ ಆಗಿರಲಿಲ್ಲ. 

ಆದ್ದರಿಂದ ಪ್ರದೀಪನ  ನೆರೆಮನೆಯ  ಸ್ನೇಹಿತನೋರ್ವ  ಮುಲ್ಕಿಯ ಕಾರ್ನಾಡಿನ ಡಿವೈನ್ ಕಾಲ್ ಸೆಂಟರ್ ಪ್ರಾರ್ಥನಾ  ಮಂದಿರಕ್ಕೆ ಕರೆದು ಕೊಂಡು ಹೋಗಿದ್ದರು .ಹಲವಾರು ಸಮಸ್ಯೆಗಳಿಂದ ನೊಂದಿದ್ದ ರಿಕ್ಷಾ ಚಾಲಕ ಪ್ರದೀಪ್ ಕಾರ್ನಾಡಿನ ಈ ಪ್ರಾರ್ಥನಾ ಮಂದಿರಕ್ಕೆ ಹೋದ ನಂತರ ತನಗೆ ಮನಃಶಾಂತಿ ಸಿಕ್ಕಿದೆ ಎಂದು ಹೇಳಿಕೊಳ್ಳುತ್ತಿದ್ದ .

ನಾನು ಹಿಂದೂ ಧರ್ಮ ನಂಬಿದವ,  ದೇವರು ಭೂತಾರಾಧನೆಯಲ್ಲಿ ನನ್ನ ಯಾವುದೇ ಸಮಸ್ಯೆಗೆ ಪರಿಹಾರ  ಸಿಗಲಿಲ್ಲ ಎಂದು ಹೇಳಿಕೊಳ್ಳುತ್ತಿದ್ದ.  ಪ್ರಾರ್ಥನ ಮಂದಿರಕ್ಕೆ ಹೋಗಿ ತಾನು ಖುಷಿಯಲ್ಲಿದ್ದ ಬಗ್ಗೆ  ಪ್ರಾರ್ಥನಾ ಮಂದಿರಕ್ಕೆ ಬಂದ ಜನರಿಗೆ ಹೇಳುತ್ತಿದ್ದ.ರಿಕ್ಷಾ ಚಾಲಕನ ಈ ರೀತಿಯ ಪ್ರಚಾರ ಭಾಷಣವನ್ನು ಡಿವೈನ್ ಕಾಲ್ ಸೆಂಟರ್ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟತ್ತು.

ಸದ್ಯ ಈ ವಿಡಿಯೋ ವೈರಲ್ ಆಗಿದೆ. ರಿಕ್ಷಾ ಚಾಲಕ ಪ್ರದೀಪ್ ಹಿಂದೂ ದೇವರ ಅವಹೇಳನ ಮಾಡಿದ ಬಗ್ಗೆ ಇಂದು ಮಾಹಿತಿ ಪಡೆದ ವಿಶ್ವಹಿಂದು ಪರಿಷತ್ ಬಜರಂಗದಳದ ಕಾರ್ಯಕರ್ತರು ಆತನ ಮನೆಗೆ  ಹೋಗಿ  ವಿಚಾರಿಸಿದಾಗ ತಾನು ಯಾವುದೇ ಮತಾಂತರವಾಗಿಲ್ಲ ,  ತನ್ನ ನೆರೆಮನೆಯವರು ಕರೆದುಕೊಂಡು ಹೋಗಿರುವುದಾಗಿ  ತಿಳಿಸಿದ್ದ.ಹಿಂದೂ ದೇವರ ಬಗ್ಗೆ ಅವಹೇಳನವಾಗಿ ಮಾತನಾಡಿದ ಈತನ ವರ್ತನೆ ವಿರುದ್ಧ ಹಿಂದೂ ಸಂಘಟನೆಗಳು ಆತನನ್ನು ತರಾಟೆಗೆ ತೆಗೆದುಕೊಂಡು ಕ್ಷಮಾಪಣೆ ಕೇಳುವ ವಿಡಿಯೋ ಮಾಡಿದ್ದಾರೆ.

ತನ್ನ ತಪ್ಪಿನ ಅರಿವಾಗಿ ಪ್ರದೀಪ್ ಮುಲ್ಕಿಯ ಪ್ರಾರ್ಥನಾ ಮಂದಿರ ಮತ್ತು ಪ್ರಾರ್ಥನಾ ಮಂದಿಕ್ಕೆ ಕರೆದುಕೊಂಡು ಹೋದ ನೆರೆಮನೆಯವರ  ವಿರುದ್ಧ ಕಾಪು ಠಾಣೆಯಲ್ಲಿ  ದೂರು ದಾಖಲಿಸಿದ್ದಾನೆ.

Leave a Reply

Your email address will not be published. Required fields are marked *

error: Content is protected !!