ಮೋದಿ ‘ಮನ್ ಕಿ ಬಾತ್’ಗೆ ಠಕ್ಕರ್:ಇಂದು ಕಾಂಗ್ರೆಸ್ ನಿಂದ ‘ದೇಶ್ ಕಿ ಬಾತ್’

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ರೇಡಿಯೊ ಕಾರ್ಯಕ್ರಮ ಮನ್ ಕಿ ಬಾತ್ ಗೆ ಪ್ರತಿಯಾಗಿ ಕಾಂಗ್ರೆಸ್ ದೇಶ್ ಕಿ ಬಾತ್ ಕಾರ್ಯಕ್ರಮವನ್ನು ಇಂದಿನಿಂದ ನಡೆಸಲಿದ್ದು ಸೋಷಿಯಲ್ ಮೀಡಿಯಾಗಳ ಮೂಲಕ ನೇರ ಪ್ರಸಾರ ಮಾಡಲು ಉದ್ದೇಶಿಸಿದೆ.


ಅದರ ಮೊದಲ ಅವತರಣಿಕೆ ಇಂದು ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದ್ದು ಪಕ್ಷದ ವಕ್ತಾರ ಪವನ್ ಖೆರಾ ನಡೆಸಿಕೊಡಲಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಕಾಂಗ್ರೆಸ್ ನ ಸೋಷಿಯಲ್ ಮೀಡಿಯಾ ಮುಖ್ಯಸ್ಥ ರೋಹನ್ ಗುಪ್ತಾ, ದೇಶದ ಸಾಮಾನ್ಯ ಜನತೆಯ ಸಮಸ್ಯೆಗಳನ್ನು ಮತ್ತು ಸರ್ಕಾರದ ವೈಫಲ್ಯಗಳನ್ನು, ಈಡೇರಿಸದಿರುವ ಭರವಸೆಗಳನ್ನು ಮತ್ತು ಪ್ರಮುಖ ಸಾರ್ವಜನಿಕ ಸಮಸ್ಯೆಗಳನ್ನು ದೇಶ್ ಕಿ ಬಾತ್ ನಲ್ಲಿ ಚರ್ಚೆ ನಡೆಸಲಾಗುವುದು ಎಂದಿದ್ದಾರೆ.


ಪಕ್ಷದ ಹಿರಿಯ ನಾಯಕ, ಇತ್ತೀಚಿನ ವಿಧಾನಸಭಾ ಚುನಾವಣೆ ಫಲಿತಾಂಶದಿಂದ ಜನರ ತೀರ್ಪು ಏನೆಂಬುದು ಸ್ಪಷ್ಟವಾಗಿದೆ. ಜನರ ಸಮಸ್ಯೆಗಳನ್ನು ಬಗೆಹರಿಸಬೇಕು. ಜವಾಬ್ದಾರಿಯುತ ವಿರೋಧಪಕ್ಷವಾಗಿ ಕಾಂಗ್ರೆಸ್ ದೇಶದ ಜನರು ಎದುರಿಸುತ್ತಿರುವ ವಾಸ್ತವ ಸಮಸ್ಯೆಗಳನ್ನು ದೇಶ್ ಕಿ ಬಾತ್ ನಲ್ಲಿ ಚರ್ಚಿಸಲಿದೆ. ಆದರೆ ಮಾಧ್ಯಮಗಳು ಈ ವಿಷಯಗಳನ್ನು ಜನರಿಗೆ ತಲುಪಿಸಬೇಕು.

ಮಾಧ್ಯಮಗಳು ಸರಿಯಾಗಿ ಕಾಂಗ್ರೆಸ್ ಗೆ ಸಂಬಂಧಪಟ್ಟ ವಿಚಾರಗಳನ್ನು ಪ್ರಸಾರ ಮಾಡುತ್ತಿಲ್ಲ ಎಂದು ಸಹ ಹೇಳಿದರು.

1 thought on “ಮೋದಿ ‘ಮನ್ ಕಿ ಬಾತ್’ಗೆ ಠಕ್ಕರ್:ಇಂದು ಕಾಂಗ್ರೆಸ್ ನಿಂದ ‘ದೇಶ್ ಕಿ ಬಾತ್’

  1. That’s good initiative.. meet common man n solve his basic needs should be the mantr of Congress.. Get to work, be on war foot to succeed..

Leave a Reply

Your email address will not be published. Required fields are marked *

error: Content is protected !!