ಮಿಲಾಗ್ರಿಸ್ ಕಾಲೇಜು : ‘ನೃತ್ಯಗಾಥಾ’ ಪ್ರದರ್ಶನ
ಮಿಲಾಗ್ರಿಸ್ ಕಾಲೇಜಿನ ಲಲಿತಕಲಾ ವಿಭಾಗದ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಆಗಸ್ಟ್ 1 ರಂದು ಕಾಲೇಜಿನ ಸಿಲ್ವರ್ ಜುಬಿಲಿ ಹಾಲ್ನಲ್ಲಿ ನಡೆಯಿತು.ಕಾರ್ಯಕ್ರಮವನ್ನು ನೃತ್ಯನಿಕೇತನ ಕೊಡವೂರು (ರಿ) ಇದರ ನಿರ್ದೇಶಕರುಗಳಾದ ವಿದ್ವಾನ್ ಸುಧೀರ್ ಕೊಡವೂರು ಮತ್ತು ವಿಧೂಶಿ ಮಾನಸಿ ಸುಧೀರ್ರವರು ಉದ್ಘಾಟಿಸಿದರು.
ಲಲಿತ ಕಲೆ ಎನ್ನುವುದು ಪ್ರತಿಯೊಬ್ಬನ ಜೀವನದ ಅವಿಭಾಜ್ಯ ಅಂಗ. ವಿದ್ಯಾರ್ಥಿಗಳಿಗೆ ಅದು ಪಠ್ಯೇತರ ಚಟುವಟಿಕೆಯಾಗಿ, ಪಠ್ಯ ಚಟುವಟಿಕೆಗಳಿಗೆ ಹಾನಿಯುಂಟು ಮಾಡದು. ವಿದ್ಯಾರ್ಥಿಗಳು, ಪರಿಶ್ರ್ರಮ ಹಾಗೂ ಏಕಾಗ್ರತೆಯಿಂದ ತಮ್ಮನ್ನೂ ಲಲಿತಕಲೆಗಳಲ್ಲಿ ತೊಡಗಿಸಿಕೊಂಡಲ್ಲಿ ಓದಿನಲ್ಲಿಯೂ ಉತ್ಕೃಷ್ಟ ಸಾಧನೆಯನ್ನು ತೋರಬಹುದು ಎಂದು ವಿದ್ವಾನ್ ಸುಧೀರ್ ಕೊಡವೂರು ಇವರು ವಿಶ್ವಾಸ ವ್ಯಕ್ತಪಡಿಸಿದರು.
ಉದ್ಘಾಟನೆಯ ನಂತರ ನೃತ್ಯನಿಕೇತನ ಕೊಡವೂರು (ರಿ) ಇವರು ಪ್ರಸ್ತುತಪಡಿಸಿದ, ವಿದೂಷಿ ಅನಘಶ್ರೀ ಇವರಿಂದ ಏಕವ್ಯತ್ತಿ ರಂಗಪ್ರಯೋಗ ‘ನೃತ್ಯಗಾಥಾ’ ಪ್ರದರ್ಶಿಸಲ್ಪಟ್ಟಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ ವಿನ್ಸೆಂಟ್ ಆಳ್ವ, ಲಲಿತ ಕಲಾ ವಿಭಾಗದ ನಿರ್ದೇಶಕರುಗಳಾದ ಶ್ರೀ ಸಂದೀಪ್ ಶೆಟ್ಟಿ ಹಾಗೂ ಶ್ರೀಮತಿ ಅನುಪಮಾ ಜೋಗಿ, ವಿದ್ಯಾರ್ಥಿ ಸಂಯೋಜಕರಾದ ಶೆರ್ವಿನ್ ಒಲಿವರ್ ಡಿಸೋಜ ಮತ್ತು ರೆನ್ಸಿಟಾ ಡಿಸೋಜ, ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ತೃತೀಯ ಬಿ.ಕಾಂ. ನ ರೋಶ್ನಿ ಕಾರ್ಯಕ್ರಮ ನಿರೂಪಿಸಿದರು.