ಉದ್ಯಾವರ : ಬಾಲ ಗಣೇಶೋತ್ಸವ ಬೆಳ್ಳಿ ಹಬ್ಬದ ಆಮಂತ್ರಣ ಪತ್ರಿಕೆ ಬಿಡುಗಡೆ

ಉದ್ಯಾವರ : ಫ್ರೆಂಡ್ಸ್ ಗಾರ್ಡನ್ (ರಿ) ಸಾರ್ವಜನಿಕ ಬಾಲ ಗಣೇಶೋತ್ಸವ ಸಮಿತಿ ಆರೂರುತೋಟ ಸಂಪಿಗೆನಗರ ಉದ್ಯಾವರ ಇದರ ಸಾರ್ವಜನಿಕ ಬಾಲ ಗಣೇಶೋತ್ಸವ ಸಮಿತಿಯ ರಜತ ಮಹೋತ್ಸವ ಸಂಭ್ರಮದ ಆಮಂತ್ರಣ ಪತ್ರಿಕೆಯನ್ನು ಉದ್ಯಾವರ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಅರ್ಚಕರಾದ ರಂಗನಾಥ ಭಟ್ ರವರ ನೇತೃತ್ವದಲ್ಲಿ ಪೂಜಿಸಿ, ದೇವರಿಗೆ ಅರ್ಪಿಸಿ, ರಜತ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಯೋಗೀಶ್ ಎಸ್ ಕೋಟ್ಯಾನ್ ಮತ್ತು ಫ್ರೆಂಡ್ಸ್ ಗಾರ್ಡನ್ ಅಧ್ಯಕ್ಷರಾದ ಪ್ರದೀಪ್ ಸುವರ್ಣ ರವರು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ದಿನೇಶ್ ಜತ್ತನ್ನ, ಕಿಶೋರ್ ಕುಮಾರ್, ಪ್ರಭಾಕರ ಗಾಣಿಗ, ಜಯರಾಮ್ ಜಿ, ರಮಾನಂದ ಶೇರಿಗಾರ್, ಮುರಳಿಧರ ಸಾಲ್ಯಾನ್, ಸಂಜೀವ ಶೇರಿಗಾರ್, ಮಾಧವ, ರತ್ನಾಕರ ಆಚಾರ್ಯ, ಮೊಹಮ್ಮದ್ ಇರ್ಫಾನ್ ಮತ್ತಿತರರು ಉಪಸ್ಥಿತರಿದ್ದರು.

ಕಳೆದ ಇಪ್ಪತ್ತು ನಾಲ್ಕು ವರ್ಷಗಳಿಂದ ಉದ್ಯಾವರ ಗ್ರಾಮದಲ್ಲಿ ಕಲೆ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶೇಷ ಕೊಡುಗೆ ನೀಡುತ್ತಿರುವ ಫ್ರೆಂಡ್ಸ್ ಗಾರ್ಡನ್ ಬಾಲ ಗಣೇಶೋತ್ಸವ ಸಮಿತಿಯು ರಜತ ಮಹೋತ್ಸವ ಸಂಭ್ರಮವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದ್ದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

 

ಸೆಪ್ಟೆಂಬರ್ 2, ಸೋಮವಾರ ಸಂಜೆ 8 ಗಂಟೆಗೆ “ಹಸಿರೇ ಉಸಿರು” ಪರಿಸರ ಜಾಗೃತಿಯ ಮೂಲಕ ರಜತ ಮಹೋತ್ಸವ ಸಮಾರಂಭವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ. ವೈ. ಎನ್. ಶೆಟ್ಟಿ  ವಿಶಿಷ್ಟ ರೀತಿಯಲ್ಲಿ ಉದ್ಘಾಟನೆ ಗೊಳಿಸಲಿದ್ದಾರೆ. ಧಾರ್ಮಿಕ ರಾಜಕೀಯ ಸಾಮಾಜಿಕ ಮುಖಂಡರು ಸಮಾರಂಭದಲ್ಲಿ ಉಪಸ್ಥಿತರಿರುವರು.

ರಜತ ಮಹೋತ್ಸವದ ಸಮಿತಿಯ ನೇತೃತ್ವವನ್ನು ಯೋಗೀಶ್ ಎಸ್ ಕೋಟ್ಯಾನ್ ವಹಿಸಿದ್ದು ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದೆ. ಸ್ವಾಗತ ಸಮಿತಿ , ಧಾರ್ಮಿಕ ಸೇವಾ ಸಮಿತಿ, ಸಾಂಸ್ಕೃತಿಕ ಸೇವಾ ಸಮಿತಿ, ಸಭಾ ಕಾರ್ಯಕ್ರಮ ನಿರ್ವಹಣೆ,  ಅನ್ನಸಂತರ್ಪಣಾ ಸಮಿತಿ, ಪ್ರಸಾದ ವಿತರಣೆ , ವಿಸರ್ಜನಾ ಮೆರವಣಿಗೆ ಸಮಿತಿ, ಜಲಸ್ತಂಭನ ಸಮಿತಿಗಳನ್ನು ರಚಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!