ಶಿರ್ವ : ಮಾನಸ ಶಾಲೆಯ ರಕ್ಷಕ – ಶಿಕ್ಷಕ ಸಂಘದ ಮಹಾಸಭೆ
ಶಿರ್ವ : 2019 – 20 ನೇ ಸಾಲಿನ ರಕ್ಷಕ – ಶಿಕ್ಷಕ ಸಂಘದ ಸಭೆಯು ಜು . 20 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಮಾನಸಿಕ ತಜ್ಞರಾದ ಧನಲಕ್ಷ್ಮೀ ಹೆಚ್ ಎಸ್ ಸಂಪನ್ಮೂಲ ವ್ಯಕ್ತಿಯಾಗಿ ವಿಶೇಷ ಮಕ್ಕಳ ಮಾನಸಿಕ ಆರೋಗ್ಯದ ಕುರಿತು ಹೆತ್ತವರಿಗೆ ಮಾಹಿತಿ ನೀಡಿದರು. ರಕ್ಷಕ – ಶಿಕ್ಷಕ ಸಂಘದ ಕಾರ್ಯದರ್ಶಿ ಹಾಗೂ ಪ್ರಾಂಶುಪಾಲರಾದ ಸಿ.ಅನ್ಸಿಲ್ಲಾ ಫೆರ್ನಾಂಡಿಸ್ರವರು 2019 – 20 ಶೈಕ್ಷಣಿಕ ಕಾರ್ಯಚಟುವಟಿಕೆಯ ಕುರಿತು ಮಾಹಿತಿ ನೀಡಿದರು ಹಾಗೂ ಶಿಕ್ಷಕಿ ಕು. ಅಶ್ವಿನಿ ವಸತಿ ನಿಲಯದ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕಿ ಪ್ರಭಾ ವರದಿ ವಾಚಿಸಿದರು. 2018 – 19 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ಎಂಟು ವಿದ್ಯಾರ್ಥಿಯನ್ನು ಅಭಿನಂದಿಸಲಾಯಿತು.
ಆಡಳಿತಾಧಿಕಾರಿಯಾದ ಜೋಸೆಫ್ ನೋರೊನ್ನಾರವರು ಶಾಲೆಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಪೋಷಕರ ಸಹಕಾರ ಯಾಚಿಸಿದರು. ಸಂಸ್ಥೆಯ ಅಧ್ಯಕ್ಷರು, ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಡಳಿತ ಮಂಡಳಿಯ ಸದಸ್ಯರಾದ ಐಡಾ ಕರ್ನೇಲಿಯೋರವರು ಸಂಘದ 2019 – 20 ಮತ್ತು 2020 – 21 ನೇ ಸಾಲಿನ ಪದಾಧಿಕಾರಿಗಳ ಚುನಾವಣೆ ನಡೆಯಿತು. ವೇದಿಕೆಯಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಕು. ರೆಮಿಡಿಯಾ ಡಿಸೋಜ ಹಾಗೂ ಶ್ರೀ. ಸೈಮನ್ ಡಿಸೋಜರವರು ಉಪಸ್ಥಿತರಿದ್ದರು.
ಮಾನಸ ರಕ್ಷಕ – ಶಿಕ್ಷಕ ಸಂಘದ ಪದಾಧಿಕಾರಿಗಳು, ಪೋಷಕರು ಹಾಗೂ ಮಾಹೆ ಯೂನಿವರ್ಸಿಟಿಯ ಕು. ಸವನಿ, ಡಾ. ವಿದ್ಯಾಸಾಗರ್ ಮತ್ತು ಕು. ಫ್ಲೋರೆನ್ಸ್ ಉಪಸ್ಥಿತರಿದ್ದರು.
ಮಾನಸ ಸಂಸ್ಥೆಯ ಅಧ್ಯಕ್ಷರು ಸ್ವಾಗತಿಸಿ, ಶಿಕ್ಷಕಿ ಹೇಮಲತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.