ಮಾನಸ ವಿಶೇಷ ಶಾಲೆ ಪವಿತ್ರ ಸ್ಥಳ : ಉದ್ಯಮಿ ಅಬ್ದುಲ್ ಜಲೀಲ್ ಸಾಹೇಬ್ 

ಮಾನಸ ವಿಶೇಷ ಶಾಲೆಗೆ ಭೇಟಿ ಕೊಡುವುದು ಪವಿತ್ರವಾದ ಕೆಲಸ. ನಾವು ಧಾರ್ಮಿಕ ಮತ್ತು ಪವಿತ್ರ  ಸ್ಥಳಗಳಿಗೆ ಕೊಡುವಂತಹ ಪವಿತ್ರತೆಯನ್ನು ಮಾನಸ ವಿಶೇಷ ಶಾಲೆಯಲ್ಲಿಯೂ ಕಾಣಬಹುದು. ವಿಶೇಷ ಮಕ್ಕಳಿಗೆ ಶಿಕ್ಷಣವನ್ನು ಕೊಡುವಂತಹ ಶಿಕ್ಷಕರು ನಿಜಕ್ಕೂ ಪುಣ್ಯವಂತರು. ಅವರು ಅಭಿನಂದನೆಗೆ ಅರ್ಹರು ಎಂದು ದಾನಿ ಮತ್ತು ಖ್ಯಾತ ಉದ್ಯಮಿ ಹಾಜಿ ಅಬ್ದುಲ್ ಜಲೀಲ್ ಸಾಹೇಬ್ ಹೇಳಿದರು.
ಶಿರ್ವ ಸಮೀಪದ ಪಾಂಬೂರು ನಲ್ಲಿರುವ ಮಾನಸ ವಿಶೇಷ ಮಕ್ಕಳ ಶಾಲೆಯಲ್ಲಿ ತನ್ನ ಅಳಿಯ ನೀರಜ್ ಭಾಟಿಯಾ ಅವರ ಹುಟ್ಟುಹಬ್ಬವನ್ನು ವಿಶೇಷ ಮಕ್ಕಳೊಂದಿಗೆ ಆಚರಿಸಿ, ಶಾಲಾ ಆಡಳಿತ ಮಂಡಳಿಯ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ವಿಶೇಷ ಮಕ್ಕಳ ಜವಾಬ್ದಾರಿಯನ್ನು ಹೊತ್ತುಕೊಂಡು ಕಾರ್ಯನಿರ್ವಹಿಸುತ್ತಿರುವ ಮತ್ತು ಶಿಕ್ಷಣವನ್ನು ನೀಡುತ್ತಿರುವ ಮಾನಸ ಆಡಳಿತ ಮಂಡಳಿಯ ನಿರ್ವಹಣೆಯನ್ನು ಮೆಚ್ಚಿ, ಮುಂದಿನ ದಿನಗಳಲ್ಲಿ ತನ್ನಿಂದ ಆಗುವಷ್ಟು ಸಹಾಯ ನೀಡುತ್ತೇನೆ ಎಂದು ಶಾಲಾ ಆಡಳಿತ ಮಂಡಳಿಗೆ ಭರವಸೆ ನೀಡಿದರು.

ಸ್ಥಾಪಕ ಟ್ರಸ್ಟಿ ಡಾ. ಥಾಮಸ್ ಕ್ವಾಡ್ರಸ್ ಮಾತನಾಡುತ್ತಾ, ಚಿಕ್ಕನಿಂದಲೂ ನಾವು ಆಪ್ತರು, ಮಾತ್ರವಲ್ಲದೆ ಶಿಕ್ಷಣವನ್ನು ಜೊತೆಯಾಗಿ ಪಡೆದುಕೊಂಡವರು. ಸದಾ ಬಡವರ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸುವ ಅಬ್ದುಲ್ ಜಲೀಲ್ ಸಾಹೇಬ್ ಅವರು ವಿಶೇಷ ಮಕ್ಕಳ ಶಾಲೆಗೆ ಭೇಟಿ ಕೊಟ್ಟದ್ದು ನಿಜಕ್ಕೂ ಸಂತಸ ತಂದಿದೆ ಎಂದರು.
ಅಧ್ಯಕ್ಷ ಹೆನ್ರಿ ಮಿನೇಜಸ್, ಆಡಳಿತ ಆಡಳಿತಾಧಿಕಾರಿ ಜೋಸೆಫ್ ನೋರನ್ನ , ಪ್ರಾಂಶುಪಾಲೆ ಸಿ. ಅನ್ಸಿಲ್ಲ
ಶಾಲಾಡಳಿತ ಮಂಡಳಿಯ ಪರವಾಗಿ ಉದ್ಯಮಿ ದಾನಿ ಹಾಜಿ ಅಬ್ದುಲ್ ಜಲೀಲ್ ಸಾಹೇಬರನ್ನು ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಿಯಾಜ್ ಪಳ್ಳಿ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಬ್ದುಲ್ ಜಲೀಲ್ ಸಾಹೇಬ್ ರವರ ಅಳಿಯ ನೀರಜ್ ಪಾಟೀಲರವರ ಹುಟ್ಟುಹಬ್ಬವನ್ನು ವಿಶೇಷ ಮಕ್ಕಳೊಂದಿಗೆ ಆಚರಿಸಲಾಯಿತು. ವಿಶೇಷ ಮಕ್ಕಳು ನೃತ್ಯ ಮತ್ತು ಸಂಗೀತದ ಮೂಲಕ ತಮ್ಮ ಪ್ರತಿಭೆಯನ್ನು ತೋರ್ಪಡಿಸಿದರು.
ಈ ಸಂದರ್ಭದಲ್ಲಿ ಹಾಜಿ ಅಬ್ದುಲ್ ಜಲೀಲ್ ಸಾಹೇಬ್ ರವರ ಪತ್ನಿ ದಿಲ್ಶಾದ್ ಬೇಗಂ, ಮಗಳು ಹಪ್ಸಾ ಜಲೀಲ್, ಅಳಿಯ ನೀರಜ್ ಭಾಟಿಯಾ ಉಪಸ್ಥಿತರಿದ್ದರು.
ಉದ್ಯಾವರದ ಹಾಲಿಮಾ ಸಾಬ್ಜು ಮತ್ತು ಹಪ್ಸಾ ಆಡಿಟೋರಿಯಂನ ಮಾಲಕರಾಗಿರುವ ಹಾಜಿ ಅಬ್ದುಲ್ ಜಲೀಲ್ ಸಾಹೇಬ್ ರವರು ಉದ್ಯಮಿಯಾಗಿದ್ದು, ಹಲವಾರು ಸಂಘ ಸಂಸ್ಥೆಗಳಿಗೆ ತನ್ನ ಪ್ರೋತ್ಸಾಹವನ್ನು ನೀಡುತ್ತಿದ್ದು, ಉದ್ಯಾವರ ಭಾಗದ ಹಲವಾರು ಶಾಲೆಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಮಾಡುತ್ತಿದ್ದಾರೆ. ಶಾಂತ ಸ್ವಭಾವದ ಇವರು ನೂರಾರು ಬಡ ಕುಟುಂಬಗಳಿಗೆ ಸಹಾಯ ಮಾಡುತ್ತಿದ್ದು, ವೈದ್ಯಕೀಯ ನೆರವನ್ನು ನೀಡುತ್ತಿದ್ದಾರೆ. ತನ್ನ ಅಳಿಯನ ಹುಟ್ಟು ಹಬ್ಬವನ್ನು ವಿಶೇಷ ಮಕ್ಕಳೊಂದಿಗೆ ಆಚರಿಸಿ ತನ್ನ ಸರಳತೆಯನ್ನು ತೋರ್ಪಡಿಸಿದ ಹಾಜಿ ಅಬ್ದುಲ್ ಜಲೀಲ್ ಸಾಹೇಬರವರ ಕುಟುಂಬವನ್ನು ಮಾನಸ ವಿಶೇಷ ಶಾಲೆಯ ಆಡಳಿತ ಮಂಡಳಿ ಮೆಚ್ಚುಗೆಯನ್ನು ವ್ಯಕ್ತಪಡಿಸಿತ್ತು.
ಸ್ಥಾಪಕ ಟ್ರಸ್ಟಿ ಡಾ. ಥಾಮಸ್ ಕ್ವಾಡ್ರಸ್ ಸ್ವಾಗತಿಸಿದರೆ, ಅಧ್ಯಕ್ಷ ಹೆನ್ರಿ ಮಿನೇಜಸ್ ವಂದಿಸಿದರು. ಶಿಕ್ಷಕಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!