ಮಣಿಪುರ ಚರ್ಚ್: ಸ್ಮಶಾನ ಧ್ವಂಸಗೊಳಿಸಿದ ಕಿಡಿಗೇಡಿ
ಉಡುಪಿ: ಮಣಿಪುರ ಸಿಎಸ್ಐ ಕ್ರಿಸ್ತ ಮಹಿಮಾ ದೇವಾಲಯದ ಸ್ಮಶಾನವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ ಘಟನೆ ಇಂದು ಸಂಜೆ ನಡೆದಿದೆ.
ಇಂದು ಸಂಜೆ ಆಗಮಿಸಿದ ದುಷ್ಕರ್ಮಿ ಮಣಿಪುರ ದೇವಾಲಯದಲ್ಲಿರುವ ಸ್ಮಶಾನದಲ್ಲಿರುವ ಶಿಲುಬೆಗಳನ್ನು ಕೆಡವಿ ಹಾಕಿ ಹಾನಿ ಗೊಳಿಸಿದ್ದಾನೆ. ಈ ಘಟನೆಯ ಬಗ್ಗೆ ಇಂಡಿಯನ್ ಕ್ರಿಶ್ಚಿಯನ್ ಹ್ಯೂಮನ್ ರೈಟ್ಸ್ ಕಾಪು ಠಾಣೆಗೆ ದೂರು ನೀಡಿದೆ.
ತಕ್ಷಣ ಕಾರ್ಯಪ್ರವೃತ್ತರಾದ ಕಾಪು ಪೊಲೀಸರು ಆರೋಪಿ ನಾಗರಾಜ್ನನ್ನು ಬಂಧಿಸಿ ದ್ದಾರೆ ಎಂದು ತಿಳಿದು ಬಂದಿದೆ.
ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ