ಮಣಿಪಾಲ್ ಆರೋಗ್ಯ ಕಾರ್ಡ್ ನೋಂದಣಿ ಸಪ್ಟೆಂಬರ್ವರೆಗೆ ವಿಸ್ತರಣೆ
ಕಾರ್ಕಳ: ಮಣಿಪಾಲ ಆರೋಗ್ಯ ಕಾರ್ಡ್ 2019 ನೋಂದಣಿಯು 2019ರ ಸಪ್ಟೆಂಬರ್ರವರೆಗೆ ವಿಸ್ತರಣೆ ಮಾಡಲಾಗಿದೆ. ಇದರ ಕಾಲಾವಧಿಯನ್ನು ಎರಡು ವರ್ಷವಾಗಿದ್ದು, ನೆರೆ ರಾಜ್ಯ ಗೋವಾದಿಂದ ಬೇಡಿಕೆ ಬಂದಿರುವ ಹಿನ್ನಲೆಯಲ್ಲಿ ಆ ರಾಜ್ಯಕ್ಕೂ ವಿಸ್ತರಿಸಲಾಗಿದೆ ಎಂದು ಕಾರ್ಕಳ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ತಿಳಿಸಿದರು.
ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಮಣಿಪಾಲದ ಸಾಮಾಜಿಕ ಕಳಕಳಿಯ ಅಂಗವಾಗಿ 2000ರಲ್ಲಿ ಆರಂಭಗೊಂಡ ಮಣಿಪಾಲ ಆರೋಗ್ಯ ಕಾರ್ಡಿನ ಮುಖ್ಯ ಉದ್ದೇಶ ಎಲ್ಲರಿಗೂ ಗುಣಮಟ್ಟದ ಚಿಕಿತ್ಸೆ ಕೈಗೆಟುಕುವ ದರದಲ್ಲಿ ಸಿಗಬೇಕು ಎಂಬುದಾಗಿದೆ. ಇದು ಎಲ್ಲಾ ಬಗೆಯ ಆರೋಗ್ಯ ಸೇವೆಗೆ ರಿಯಾಯಿತಿ ಒದಗಿಸುತ್ತದೆ.
ರಿಯಾಯಿತಿ ಸಿಗುವ ಸೌಲಭ್ಯಗಳಲ್ಲಿ ಕೆಲವೆಂದರೆ ವರ್ಷದಲ್ಲಿಎಷ್ಟೇ ಬಾರಿ ವೈದ್ಯರ ಜೊತೆ ಸಮಾಲೋಚನೆ, ಪ್ರಯೋಗಾಲಯಪರೀಕ್ಷೆಗಳು, ಸಿಟಿ /ಎಂಆರ್ಐ /ಅಲ್ಟ್ರಾಸೌಂಡ್, ಹೊರರೋಗಿವಿಧಾನಗಳು, ದಾಖಲಾತಿಶುಲ್ಕ, ಹಾಸಿಗೆಮತ್ತುನರ್ಸಿಂಗ್ಸೇವೆ, ಸಾಮಾನ್ಯ ವಾರ್ಡಿನಲ್ಲಿ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆ, ಮಧುಮೇಹಪಾದ ತಪಾಸಣೆ. ಒಂದು ಸಣ್ಣ ಮೊತ್ತವನ್ನು ಪಾವತಿಸಿ ಸದಸ್ಯರಾಗಿ ಎಲ್ಲಾ ಬಗೆಯ ಸೌಲಭ್ಯಗಳನ್ನು ಪಡೆಯಬಹುದು.
ಪ್ರಯೋಗಾಲಯ ಪರೀಕ್ಷೆಗೆ ಶೇ. 30 ರಿಯಾಯಿತಿ, ಸಿಟಿ, ಎಂಆರ್ಐ, ಅಲ್ಟ್ರಾಸೌಂಡ್ಗೆ ಶೇ. 20 ರಿಯಾಯಿತಿ, ಹೊರರೋಗಿ ವಿಧಾನಗಳಲ್ಲಿ ಶೇ. 20 ರಿಯಾಯಿತಿ. ಸಾಮಾನ್ಯವಾರ್ಡಿನಲ್ಲಿ ಒಳರೋಗಿಯಾದಲ್ಲಿ ಉಪಯೋಗವಾಗುವ ವಸ್ತುಗಳನ್ನು ಹೊರತುಪಡಿಸಿ ಶೇ.25 ರಿಯಾಯಿತಿ, ಔಷಧಾಲಯಗಳಲ್ಲಿಶೇ.12ರವರೆಗೆ ರಿಯಾಯಿತಿ ಇರುತ್ತದೆ. ಮಣಿಪಾಲ ಆರೋಗ್ಯ ಕಾರ್ಡುನ್ನು ಒಂದು ಅಥವಾ ಎರಡು ವರ್ಷದ ಅವಧಿಗೆ ಎಷ್ಟು ಬಾರಿಯಾದರೂ ಉಪಯೋಗಿಸಬಹುದು. ವೈದ್ಯರಸಮಾಲೋಚನೆ ಶೇ. 50 ರಿಯಾಯಿತಿ ಇರುತ್ತದೆ ಎಂಬ ಮಾಹಿತಿ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಡಾ. ಟಿಎಂಎ ಪೈ ಆಸ್ಪತ್ರೆ ಕಾರ್ಕಳದ ಮುಖ್ಯ ವೈದ್ಯಾಧಿಕಾರಿ ಡಾ ಕೀರ್ತಿನಾಥ ಬಲ್ಲಾಳ್, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮೋಹನ್ ಶೆಟದ್ಟಿ, ಉಪವ್ಯವಸ್ಥಾಪಕ ಮತ್ತು ಮಾರುಕಟ್ಟೆ ನಿರ್ವಾಹಕ ಶ್ರೀನಿವಾಸ ಭಾಗವತ್, ನಾರಾಯಣ ನಾಯಕ್,ಲತಾ ಶೆಟ್ಟಿ, ಉದಯ್, ರತ್ನಾಕರ ಪ್ರಭು, ರವಿರಾಜ, ಪ್ರಮಿಳಾ ಉಪಸ್ಥಿತರಿದ್ದರು.