ಉಡುಪಿ ಜಿಲ್ಲಾಧಿಕಾರಿಗಳಿಗೆ ರಾಷ್ಟೀಯ ಹಿಂದೂ ಅಂದೋಲನದ ಮನವಿ

ಹಿಂದೂ ಜನಜಾಗೃತಿ ಸಮಿತಿ , ಶ್ರೀ ರಾಮ ಸೇನೆ ಹಾಗೂ ಇತರ ಧರ್ಮಪ್ರೇಮಿಗಳ ಸಹಭಾಗದಲ್ಲಿ ಉಡುಪಿಯಲ್ಲಿ ರಾಷ್ಟೀಯ ಹಿಂದೂ ಅಂದೋಲನವನ್ನು 27 ಆಗಸ್ಟ್ ರಂದು ನಡೆದಿತ್ತು.

ಈ ಸಂದರ್ಭದಲ್ಲಿ ಕಾಶ್ಮೀರದಲ್ಲಿ ಕಾಶ್ಮೀರಿ ಹಿಂದೂಗಳ ಪುನರ್ವಸತಿ ಮಾಡಿ ರೋಹಿಂಗ್ಯಾ ಮುಸಲ್ಮಾನರನ್ನು ದೇಶದ ಹೊರಗೆ ಓಡಿಸಲು ಟಿಪ್ಪು ಎಕ್ಸಪ್ರೆಸ್ ರೈಲಿನ ಹೆಸರನ್ನು ಬದಲಿಸಿ ಶ್ರೀಕೃಷ್ಣರಾಜ ಒಡೆಯರ್ ಎಕ್ಸಪ್ರೆಸ್ ಎಂದು ಮರುನಾಮಕರಣ ಮಾಡಬೇಕೆಂದು ‘ಜಯ ಶ್ರೀರಾಮ’, ಹೇಳದ ಕಾರಣ ಹಿಂಸೆಯಾಯಿತು’, ಎಂದು ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ದೇಶಾದ್ಯಂತವಿರುವ ಎಲ್ಲ ಚರ್ಚ್ ಗಳನ್ನು ಸರಕಾರಿಕರಣಗೊಳಿಸಬೇಕು ಇಲ್ಲವಾದಲ್ಲಿ ಎಲ್ಲ ಹಿಂದೂ ಮಂದಿರಗಳ ಸರಕಾರಿಕರಣವನ್ನು ರದ್ದು ಪಡಿಸಬೇಕು!

ಆಂಧ್ರಪ್ರದೇಶ ಸರಕಾರವು ಕ್ರಿಶ್ಚಿಯನ್ ಫಾದರ, ಮುಸ್ಲಿಂ ಇಮಾಮ ಮತ್ತು ಮೌಲಾನಾಗಳ ಮತದ ಲಾಭವನ್ನು ಪಡೆಯಲು ಮಾಸಿಕ ವೇತನ ನೀಡಲು ನಿರ್ಣಯಿಸಿದೆ. ಈ ನಿರ್ಣಯವನ್ನು ತಕ್ಷಣವೇ ರದ್ದುಗೊಳಿಸಬೇಕು .

ಈ ಎಲ್ಲಾ ವಿಷಯಗಳ ಮೇಲೆ ಕ್ರಮಕೈಗೊಳ್ಳಲು ಮನವಿಯನ್ನು ಉಡುಪಿಯ ಜಿಲ್ಲಾಧಿಕಾರಿಗಳಾದ ಶ್ರೀ ಜಿ. ಜಗದೀಶ ರವರಿಗೆ ಧರ್ಮಪ್ರೇಮಿಗಳಾದ ಶ್ರೀ ಅನಂತರಾಮ ಭಟ್ಟ್ ರವರು ನೀಡಿದರು. ಈ ಸಂದರ್ಭದಲ್ಲಿ ಸಮಿತಿಯ ಶ್ರೀ ವಿಜಯ ಕುಮಾರ, ಶ್ರೀ ನವೀನ ಕುಮಾರ, ಶ್ರೀ ಗುರುರಾಜ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!