ಮಂಗಳೂರು:ವಿಶ್ವ ಆರೋಗ್ಯ ಸಂಸ್ಥೆ ಹೆಸರಲ್ಲಿ ವಂಚನೆ ಇಬ್ಬರು ಅರೆಸ್ಟ್
ಮಂಗಳೂರು: ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳ ಸೋಗಿನಲ್ಲಿ ಮಂಗಳೂರು ಪ್ರವೇಸಿಸಿದ್ದ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳನ್ನು ಪೋಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಓರ್ವ ಕಾಶ್ಮೀರಿ ವ್ಯಕ್ತಿಯಾದರೆ ಇನ್ನೊಬ್ಬ ಪಂಜಾಬ್ ಮೂಲದವನೆನ್ನಲಾಗಿದೆ.
ಬಂಧಿತರನ್ನು ಪಂಜಾಬಿನ ಬಲ್ವೀಂದರ್ ಸಿಂಗ್ (48) ಹಾಗೂ ಕಾಶ್ಮೀರದ ಬಸೀತ್ ಶಾ ಎಂದು ಗುರುತಿಸಲಾಗಿದೆ. ನಗರದ ಪಿವಿಎಸ್ ವೃತ್ತ ಸಮೀಪ ಪಂಜಾಬ್ ನೊಂದಣಿ ಹೊಂದಿದ್ದ ಕಾರನ್ನು ವಶಕ್ಕೆ ಪಡೆದು ವಿಚಾರಣೆ ಅನ್ಡೆಸಿದ ವೇಳೆ ಈ ವಂಚನೆ ಬೆಳಕು ಕಂಡಿದೆ.
ಪತ್ರಿಕಾಗೋಷ್ಟಿಯಲ್ಲಿ ಈ ಬಗೆಗೆ ಮಾಹಿತಿ ನಿಡಿದ ಮಂಗಳುರು ನಗರ ಪೋಲೀಸ್ ಕಮಿಷನರ್ ಪಿ.ಎಸ್. ಹರ್ಷ “ಆ.17ರಂದು ಖಚಿತ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ್ದು ಬರ್ಕೆ ಠಾಣೆ ಪೋಲೀಸರು ಕಾಶ್ಮೀರದ ಗಂದರ್ಭಾಲ್ ಜಿಲ್ಲೆಯ ಗಂಜೀಪುರ ನಿವಾಸಿ ಬಸೀತ್ ಶಾ ಹಾಗೂ ಆತನ ಕಾರು ಚಾಲಕ ಬಲ್ವಿಂದರ್ ಸಿಂಗ್ ಅವರನ್ನು ಬಂಧಿಸಿದ್ದಾರೆ. ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಮರುವಶಕ್ಕೆ ಪಡೆಯಲಾಗಿದೆ.
ಬಂಧಿತರು ಕಾರಿನ ಮೇಲೆ ವಿಶ್ವ ಆರೋಗ್ಯ ಸಂಸ್ಥೆ ಎಂದು ಮುದ್ರಿಸಿದ್ದು ಅದೇ ಹೆಸರಲ್ಲಿ ನಕಲಿ ಐಡಿ ಕಾರ್ಡ್ ಹಾಗೂ ಇತರೆ ದಾಖಲೆಗಳನ್ನು ಹೊಂದಿದ್ದರು
ಬಲ್ವಿಂದರ್ ಸಿಂಗ್ ಹೆಸರಲ್ಲಿದ್ದ ಕಾರನ್ನು ಬಸೀತ್ ಶಾ ಎರಡು ವರ್ಷಗಳಿಂದ ದೇಶದಾದ್ಯಂತ ಸುತ್ತಾಡಲು ಬಳಸುತ್ತಿದ್ದ. ಅಲ್ಲದೆ ಬಲ್ವಿಂದರ್ ಗೆ ಮಾಸಿಕ ಇಪ್ಪತ್ತು ಸಾವಿರ ನೀಡುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಗಳಿಂದ ದೃಢಪಟ್ಟಿದೆ.
ಇವರು ಹಲವಾರು ರಾಜ್ಯಗಳಲ್ಲಿ ಯುವಕರಿಗೆ ವಂಚಿಸಿದ್ದಾರೆ. ಮ್ಯಾಟ್ರಿಮೊನಿಯಲ್ ವೆಬ್ ತಾಣಗಳ ಮೂಲಕ ಯುವತಿಯರನ್ನೂ ವಂಚಿಸಿದ್ದಾರೆ ಸದ್ಯ ಆರೋಪಿಗಳ ತೀವ್ರ ವಿಚಾರಣೆ ನಡೆಯುತ್ತಿದ್ದಂತೆ ಇವರ ಕುರಿತಂತೆ ಕೇಂದ್ರೀಯ ತನಿಖಾ ಸಂಸ್ಥೆಗಳಿಗೆ ಸಹ ವಿಚಾರ ತಿಳಿಸಲಾಗಿದೆ ಎಂದು ಪೋಲೀಸ್ ಅಧಿಕಾರಿಗಳು ಹೇಳಿದ್ದಾರೆ.