ಫಾ.ಮಹೇಶ್ ಸಾವಿನ ಗೊಂದಲ ಸೃಷ್ಟಿಸುವವರ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹ

ಉಡುಪಿ: ಅಕಾಲಿಕವಾಗಿ ಸಾವಿಗೆ ಶರಣಾದ ಶಿರ್ವ ಡೊನ್ ಬೊಸ್ಕೊ ಅವರ ಸಾವಿನ ನೈಜ ಕಾರಣಗಳನ್ನು ಕಂಡು ಹಿಡಿದು ಭಕ್ತರಲ್ಲಿ ಇರುವ ಗೊಂದಲಗಳಿಗೆ ಶೀಘ್ರ ತೆರೆ ಎಳೆಯುವಂತೆ ಪೊಲೀಸ್ ಇಲಾಖೆಯನ್ನು ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಆಗ್ರಹಿಸಿದೆ.

ಶಿರ್ವ ಇಗರ್ಜಿಯ ಸಹಾಯಕ ಧರ್ಮಗುರು ಹಾಗೂ ಡೊನ್ ಬೊಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಮಹೇಶ್ ಡಿಸೋಜಾ ಅವರ ಸಾವಿನ ತನಿಖೆ ಪ್ರಗತಿಯಲ್ಲಿರುವಾಗ ಅವರ ಸಾವಿನ ಹಿಂದಿನ ನೈಜ ಕಾರಣಗಳನ್ನು ಕಂಡು ಹಿಡಿಯಲು ಎಲ್ಲಾ ಕಾನೂನಾತ್ಮಕ ಕ್ರಮಗಳಿಗೆ ಕೆಥೊಲಿಕ್ ಸಭಾ ಸಹಕಾರ ಹಾಗೂ ಬೆಂಬಲವಿದ್ದು ಪೊಲೀಸ್ ಇಲಾಖೆ ಭಕ್ತರಲ್ಲಿ ಇರುವ ಗೊಂದಲಿಗಳಿಗೆ ಶೀಘ್ರ ತೆರೆ ಎಳೆಯಬೇಕು.

ಇದೇ ವೇಳೆ ಆಧಾರರಹಿತ ವರದಿಗಳನ್ನು ತಿದ್ದಲಾದ ವೀಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಗೊಂದಲವನ್ನು ಸೃಷ್ಟಿಸುವವರ ವಿರುದ್ದ ಕಾನೂನಾತ್ಮಕ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಪೊಲೀಸ್ ಇಲಾಖೆ ಸೈಬರ್ ಇಲಾಖೆಯನ್ನು ಆಗ್ರಹಿಸಿದ್ದು, ಸಾವಿನ ಹಿಂದಿನ ಯಾವುದೇ ಸಾಕ್ಷ್ಯಾಧರಗಳಿದ್ದವರು ಈ ಕೇಸಿನ ತನಿಖಾಧಿಕಾರಿಗಳಿಗೆ ಸಲ್ಲಿಸುವಂತೆ ಕೆಥೊಲಿಕ್ ಸಭಾ ವಿನಂತಿಸಿದೆ.

ದಿ.ಫಾ ಮಹೇಶ್ ಡಿಸೋಜಾರ ಅಸಹಜ ಸಾವಿನ ಹಿಂದಿನ ವಿಷಯಗಳ ಗೊಂದಲಗಳನ್ನು ದುರುಪಯೋಗಪಡಿಸುವವರ ವಿರುದ್ದ, ಧರ್ಮಕೇಂದ್ರ ಹಾಗೂ ಧರ್ಮಕ್ಷೇತ್ರದ ಧಾರ್ಮಿಕ ಮುಖಂಡರ ವಿರುದ್ದ ಆಧಾರ ರಹಿತ ಅವಹೇಳನಕಾರಿ ಕೃತ್ಯಗಳನ್ನು ಕೆಥೊಲಿಕ್ ಸಭಾ ವಿರೋಧಿಸುವುದರೊಂದಿಗೆ ಖಂಡಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

3 thoughts on “ಫಾ.ಮಹೇಶ್ ಸಾವಿನ ಗೊಂದಲ ಸೃಷ್ಟಿಸುವವರ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹ

  1. ಕಥೋಲಿಕ್ ‌ಸಭಾ ಉಡುಪಿ ಪಾದರ್ ಮಹೇಶ್ ರವರಿಗೆ ನ್ಯಾಯ ಕೋಡಿಸುವಲ್ಲಿ ವಿಫಲವಾಗಿದೆ. ಈಗ ಎಚ್ಚರಿಕೆ ಕೋಡುವ ಕಥೋಲಿಕ್ ಸಭಾ ಪಾಧರ್ ಮಹೇಶ್ ತೀರಿ ಹೋಗಿ 22ದಿನ ಕಳೆದರು ಯಾರೊಬ್ಬರೂ ಮಾತಾನಾಡದೆ ಇದ್ದದ್ದು ಯಾಕೆ. ನಾನು ಕೇಳುವುದು ಪಾಧರ್ ಮಹೇಶ್ ರವರಿಗೆ ನ್ಯಾಯ ಸಿಗಬೇಕು ಅಷ್ಟೆ.
    ಅದಲ್ಲದೆ ನನ್ನ ಬೇಡಿಕೆ(ಇಗಜಿ೯) ಪಾಧರ್, ಬಿಶೋಫ್,ಸಮುದಾಯದ ಬಗ್ಗೆ ಅಲ್ಲ. ಒಂದು ವೇಳೆ ಇಂತಹ ಕೆಲಸಕ್ಕೆ ಯಾರು ಕೈ ಹಾಕಿದರೆ ನಾನು ಖಂಡಿಸುತ್ತೇನೆ. ಪಾಧರ್ ಮಹೇಶ್ ಇವರಿಗೆ ನ್ಯಾಯ ಸಿಗಬೇಕು

Leave a Reply

Your email address will not be published. Required fields are marked *

error: Content is protected !!