ಲಯನ್ಸ್ ಜಿಲ್ಲೆಯ ನೂತನ ಗವರ್ನರಾಗಿ ಲಯನ್ ವಿ ಜಿ ಶೆಟ್ಟಿ ಆಯ್ಕೆ
ಉಡುಪಿ – ಲಯನ್ಸ್ ಜಿಲ್ಲೆ317ಸಿ ಯಾ 2019-20 ರ ಸಾಲಿನ ಗವರ್ನರಾಗಿ ಲಯನ್ ವಿ ಜಿ ಶೆಟ್ಟಿ ಆಯ್ಕೆ, ಜುಲೈ ೨೫ ರಂದು ಅಮ್ಮಣಿ ರಾಮನ ಶೆಟ್ಟಿ ಸಭಾಭವನದಲ್ಲಿ ನಡೆಯುವ ಪದಪ್ರಧಾನ ಕಾರ್ಯಕ್ರಮದಲ್ಲಿ ನೂತನ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಲಯನ್ ಬ್ಯಾರಿ.ಜೆ.ಪಾಲ್ಮರ್ ರವರು ಮುಖ್ಯ ಅತಿಥಿಯಾಗಿ, ಅಂತಾರಾಷ್ಟ್ರೀಯ ಲಯನ್ಸ್ ಫೌಂಡೇಶನಿನ ಟ್ರಸ್ಟಿಯಾದ ಲಯನ್ ವಿಜಯ ಕುಮಾರ್ ರಾಜು ವೇಗಸ್ನಾ ಪದಗ್ರಹಣ ಅಧಿಕಾರಿಯಾಗಿ ಈ ಪಾಲ್ಗೊಳಲಿದ್ದಾರೆ,
ಲಯನ್ ವಿ ಜೆ ಶೆಟ್ಟಿ ಇಟಲಿ ಯಾ ಮಿಲಾನ್ ನಲ್ಲಿ ನಡೆದ ೧೦೩ನೇ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪದಪ್ರಧಾನಗೊಂಡಿದ್ದರೆ…. ಈ ಬಾರಿ 25 ಶಾಲೆಗಳಿಗೆ ನೀರು ಶುದ್ದೀಕರಣ ಘಟಕವನ್ನ ಕೊಡುಗೆಯಾಗಿ ನೀಡುವ ಯೋಜನೆಯನ್ನ, ಮಹಿಳೆಯರಿಗೆ 100 ಹೊಲಿಗೆ ಯಂತ್ರ ,ಬಡವರಿಗೆ 10 ಮನೆಯನ್ನ ನಿರ್ಮಿಸಿ ಕೊಡುವ ಯೋಜನೆಯಿದೆ , ಹಾಗು ಈ ಬಾರಿ ಯಾವ ಹಾರ ತುರಾಯಿಗಳನ್ನ ಸ್ವೀಕರಿಸುವುದನ್ನು ನಿಲ್ಲಿಸಿ ಸಮಾಜ ಸೇವೆಯೊಂದನ್ನೇ ಗುರಿಯಾಗಿಸಿ ಒಂದು ವರ್ಷ ಕಾರ್ಯನಿರ್ವಹಿಸುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಲಯನ್ ವಿ ಜಿ ಶೆಟ್ಟಿಯವರು ತಿಳಿಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಮಧುಸೂದನ್ ಹೆಗ್ಡೆ, ನೇರಿ ಕರ್ನೇಲಿಯೋ, ಎಸ್.ಟಿ ಕರ್ಕೇರ, ಜಾರ್ಜ್ ಸ್ಯಾಮುವೆಲ್ ಉಪಸ್ಥಿತರಿದ್ದರು…