ದೇಶದ ಮತ್ತು ಜನರ ಕೊಂಡಿಯಾಗಿದೆ ಎಲ್‌ಐಸಿ:ತಮ್ಮಯ್ಯ ನಾಯ್ಕ್
ಉಡುಪಿ: ದೇಶ ಎಷ್ಟೇ ಜಾಗತೀಕರಣಗೊಂಡರು ಭಾರತೀಯ ಜೀವ ವಿಮಾ ನಿಗಮ ( ಎಲ್‌ಐಸಿ ) ಸಂಸ್ಥೆ ಜನರ ಸೇವೆಗಾಗಿ ಹುಟ್ಟಿಕೊಂಡಿದೆ ,ಇದು ದೇಶದ ಮತ್ತು ಜನರ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಎಲ್‌ಐಸಿಯ 63 ನೇ ವರ್ಷಾಚರಣೆ ಕಾರ್ಯಕ್ರಮವನ್ನು ಹಿರಿಯ ಪಾಲಿಸಿದರಾ ತಮ್ಮಯ್ಯ ನಾಯ್ಕ್ ಉದ್ಘಾಟಿಸಿದ ಮಾತನಾಡಿದರು .
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಖಾ ವ್ಯವಸ್ಥಾಪಕ ಕೆ. ರಾಧಾಕೃಷ್ಣ ಹೆಗ್ಡೆ ಮಾತನಾಡಿ 5 ಕೋಟಿ ಮೂಲ ಬಂಡವಾಳದಿಂದ ಪ್ರಾರಂಭವಾದ ಸಂಸ್ಥೆ 32 ಲಕ್ಷ ಕೋಟಿ ಬಂಡವಾಳ ಹೊಂದಿದೆ. ಮೂವತ್ತು ಕೋಟಿ ಪಾಲಿಸಿದಾರರು, 2048
ಶಾಖೆ ಹೊಂದಿದ ಏಕೈಕ ಜೀವವಿಮಾ ನಿಗಮ.
ದೇಶದ ರೈಲ್ವೆ, ವಿದ್ಯುತ್, ರಸ್ತೆ, ಅಣೆಕಟ್ಟು ಸಹಿತ ಭಾರತದ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ಈ ಹಣವನ್ನು ವಿನಿಯೋಗಿಸುತ್ತಿದೆ .ಮಾತ್ರವಲ್ಲದೆ ಭಾರತದ ಪಂಚವಾರ್ಷಿಕ ಯೋಜನೆಗೆ ಕೈಜೋಡಿಸಿರುವ ಹೆಮ್ಮೆಯ ಸಂಸ್ಥೆ ಪಾಲಿಸಿದಾರರಿಗೆ ಕ್ಲಪ್ತ ಸಮಯದಲ್ಲಿ ವಿಮಾ ಮೊತ್ತವನ್ನು ಹಿಂದಿರುಗಿಸುವ ಸಂಸ್ಥೆಯಾಗಿದೆ ಎಂದರು.
ಸಮಾರಂಭದಲ್ಲಿ ಹಿರಿಯ ಪಾಲಿಸಿದರಾ ಗಣೇಶ್ ಜಗನ್ನಾಥ್ ,ಶಾಖೆಯ ಸುಮನ್ ಉಪಾಧ್ಯಾಯ, ಕೆಎಂಸಿ ಕ್ಯಾನ್ಸರ್ ಚಿಕಿತ್ಸಾ ವಿಭಾಗದ ವರ್ಷ ಎಂ ಶೆಟ್ಟಿ , ಶೆರ್ಲಿ ಲೂವಿಸ್ ಉಪಸ್ಥಿತರಿದ್ದರು.
ಶಾಖೆಯ ಚಿತ್ರಲೇಖ ಸ್ವಾಗತಿಸಿದರೆ ಆನಂದ್ ಕಾರ್ಯಕ್ರಮ ನಿರ್ವಹಿಸಿ , ಉಮೇಶ ಧನ್ಯವಾದವಿತ್ತರು.
ಉಡುಪಿ ಎಲ್‌ಐಸಿ ಶಾಖಾ ಕಚೇರಿಯಲ್ಲಿ 63 ನೇ ವರ್ಷಚಾರಣೆಯ ಅಂಗವಾಗಿ ಒಂದು ವಾರಗಳ ಕಾಲ ಗ್ರಾಹಕರಿಗೆ ಮತ್ತು ಸಿಬ್ಬಂದಿಗಳಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.