ಉಡುಪಿ: ಚೌತಿ ಹಬ್ಬಕ್ಕೆ ಝಡ್ ಪ್ಲಸ್ ಸೆಕ್ಯೂರಿಟಿಯಲ್ಲಿ ಬಂದ ಪ್ರಧಾನಿ ನರೇಂದ್ರ ಮೋದಿ!


ಇದೇನಿದು ಯಾವುದೇ ಪತ್ರಿಕೆ ,ದೃಶ್ಯ ಮಾಧ್ಯಮದಲ್ಲಿ ದೇಶದ ಪ್ರಧಾನಿ ಬರುವ ಮಾಹಿತಿ ಇಲ್ಲದೆ ದಿಢೀರ್ ಆಗಮಿಸಿದ್ದಾರೆಂದು ಹುಬ್ಬೇರಿಸಬೇಡಿ ಇದು ಪ್ರಧಾನಿ ಹೋಲು ವ್ಯಕ್ತಿ ಕಾರ್ಕಳದ ಸದಾನಂದ ನಾಯಕ್ ನಗರದ ಹೊರ ವಲಯದ ದೆಂದೂರ್ ಕಟ್ಟೆಯ ಸಾರ್ವಜನಿಕ ಗಣೇಶೋತ್ಸವದ ಸಭಾ ಕಾರ್ಯಕ್ರಮಕ್ಕೆ ದೇಶ ಪ್ರಧಾನಿ ಯಾವ ರೀತಿ ಬರುತ್ತಾರೆ ಅದೇ ರೀತಿ ಸೈರನ್ ,ನೂರಾರು ಬೆಂಗಾವಲು ವಾಹನದ ಭ್ರದ್ರತೆಯಲ್ಲಿ ವೇದಿಕೆಗೆ ಬರುವ ಅಣುಕು ಪ್ರದರ್ಶನ ಮಾಡಿ, ಬಂದಿದ್ದ ಗಣೇಶನ ಭಕ್ತರಿಗೆ ಆಶ್ಚರ್ಯ ಉಂಟಾಗುವಂತೆ ಮಾಡಿರುವುದು ಸಂಘಟಕರು.

ವಿವಿಐಪಿ ಬರುವ ಮೊದಲು ಪೊಲೀಸ್ ಎಸ್ಕಾರ್ಟ್ ವಾಹನ ಬಂತು, ಜಾಮರ್, ಮೆಟಲ್ ಡಿಟೆಕ್ಟರ್ ಜೊತೆ ಸೈರನ್ ಸೌಂಡ್ ಮಾಡಿಕೊಂಡು ಬಂದಿದೆ. ಒಂದರ ಹಿಂದೆ ಇನ್ನೊಂದು ಸಾಲು ಸಾಲು ಕಾರುಗಳು. ನೋಡ ನೋಡುತ್ತಿದ್ದಂತೆ ಕಾರಿಂದ ಇಳಿದು ಪ್ರಧಾನಿ ನರೇಂದ್ರ ಮೋದಿ ಅವರಂತೆ ಹೋಲುವ ವ್ಯಕ್ತಿಯೊಬ್ಬರು ವೇದಿಕೆಗೆ ಹೋಗಿದ್ದಾರೆ.

ಝೆಡ್ ಪ್ಲಸ್ ಭದ್ರತೆ ನಿಯೋಜನೆಯಲ್ಲಿ, ಫಾರ್ಚೂನರ್ ಕಾರಿನಲ್ಲಿ ಬಂದವರು ಸದಾನಂದ ನಾಯಕ್ ಆಗಿದ್ದರು. ಇವರು ಉಡುಪಿಯ ಮೋದಿ. ಗಂಭೀರವಾಗಿ ಕಾರಿಂದ ಇಳಿದ ಸದಾನಂದ ನಾಯಕ್ ಥೇಟ್ ಮೋದಿಯಂತೆ ಪೋಸ್ ಕೊಟ್ಟು, ದೇವರಿಗೆ ಪೂಜೆ ಸಲ್ಲಿಸಿದರು. ಬಳಿಕ ಜನರತ್ತ ಕೈ ಬೀಸುತ್ತಾ ವಾಪಾಸ್ ಆಗಿದ್ದಾರೆ.

ಗಣೇಶೋತ್ಸವದ ಮೆರುಗು ಹೆಚ್ಚಿಸಲು ಸ್ಥಳೀಯ ಯುವಕರು ಮೋದಿಯನ್ನು ಹೋಲುವ ವ್ಯಕ್ತಿಯನ್ನು ಕರೆತಂದರು. ನಮ್ಮೂರಿಗೆ ಬಂದಿದ್ದು ಮೋದಿಯೇ ಎಂದು ಹೇಳಿಕೊಂಡು ಕೆಲವರು ಓಡಾಡುತ್ತಿದ್ದಾರೆ. ಕಳೆದ ಬಾರಿ ಟ್ಯಾಬ್ಲೋದಲ್ಲಿ ಮಿಂಚಿದ್ದ ಸದಾನಂದ ನಾಯಕ್ ರಸ್ತೆಯಲ್ಲಿ ಮೋದಿಯಂತೆ ಓಡಾಡಿದ್ದಾರೆ. ಸದ್ಯ ಉಡುಪಿಯ ಮೋದಿ ಗಣೇಶೋತ್ಸವದ ಸಮಾರಂಭಕ್ಕೆ ಬಂದು ಹೋದ ವಿಡಿಯೋ ವೈರಲ್ ಆಗುತ್ತಿದೆ.

Leave a Reply

Your email address will not be published. Required fields are marked *

error: Content is protected !!