ಕೃಷಿಕರು ಲಾಭದಾಯಕದ ಕಡೆ ಹೆಜ್ಜೆ ಇಡುವಂತಾಗಲಿ : ವಿ ಸುನಿಲ್ ಕುಮಾರ್
ಕಾರ್ಕಳ : ನಮ್ಮ ಜಿಲ್ಲೆಯ ಮಣ್ಣಿನ ಗುಣ, ಹವಾಮಾನ ಹಾಗೂ ಪರಿಸರಕ್ಕೆ ಹೊಂದಿಕೊಂಡು ಕೃಷಿಯತ್ತ ಒಲವು ತೋರಿಸಿದಾಗ ಹೆಚ್ಚು ಲಾಭದಾಯಕ ವಾಗಲು ಸಾದ್ಯ .ಒಂದು ವ್ಯಾಪಾರವನ್ನು ಕೇಂದ್ರವಾಗಿರಿಸುಕೊಂಡು ಅದರ ಜತೆಗೆ ಇನ್ನೊಂದು ಉಪಕಸುಬು ಮಾಡಿದಾಗ ಇನ್ನಷ್ಟು ಲಾಭದಾಯಕವಾಗಲಿದೆ ಆ ನಿಟ್ಟಿನಲ್ಲಿ ಕೃಷಿಕರು ಲಾಭದಾಯಕದ ಕಡೆಗೆ ಹೆಜ್ಜೆ ಇಡುವಂತಾಗಬೇಕು ಎಂದು ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ಹೇಳಿದ್ದಾರೆ.
ಅವರು ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾತ್ ಕಾರ್ಕಳ ತೋಟಗಾರಿಕಾ ಪಿತಾಮಹ ಡಾ.ಎಂ.ಎಚ್ ಮರಿಗೌಡ ಜನ್ಮ ದಿನಾಚರಣೆ ಅಂಗವಾಗಿ ಶನಿವಾರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತೋಟಗಾರಿಕೆಯೊಂದಿಗೆ ಲಾಭದಾಯಕ ಉಪಕಸುಬುಗಳ ಕುರಿತು ವಿಚಾರ ಸಂಕಿರಣ ಹಾಗೂ ಕಾರ್ಕಳ ತಾಲೂಕು ಜೇನು ಕೃಷಿ ಸಮಾವೇಶ ವನ್ನು ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರಕಾರದಿಂದ ಕೃಷಿ ಸಮ್ಮಾನ್ ಯೋಜನೆಯಡಿಯಲ್ಲಿ ರೈತರ ಖಾತೆಗಳಿಗೆ 6 ಸಾವಿರ ರೂ ನೀಡುತ್ತಿದ್ದು ನಮ್ಮ ತಾಲೂಕಿನಲ್ಲಿ 29ಸಾವಿರ ಜನ ರೈತರು ಇದನ್ನು ಸದುಪಯೋಗ ಪಡೆದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ರೈತರ ಜತೆ ಸರಕಾರವೂ ಅವರ ಬೆಂಬಲಕ್ಕೆ ನಿಂತಿದೆ. ನಮ್ಮಲ್ಲಿ ಇತ್ತೀಚಿನ ದಿನಗಳಲ್ಲಿ ನೀರಿನ ಸಮಸ್ಯೆ ಉದ್ಭವವಾಗಿದ್ದು, ಅದಕ್ಕಾಗಿ ಗ್ರಾಮೀಣ ಜನತೆ , ರೈತರು ಜಾಗ್ರತರಾಗ ಬೇಕು.
ಅಂರ್ತಜಲ ಪ್ರಮಾಣ ಕುಸಿದ ವಾಗಿರುವುದರಿಂದ ನೀರಿನ ಸಂರಕ್ಷಣೆ ಅಗತ್ಯವಾಗಿದೆ.ಅದಕ್ಕಾಗಿ ರೈತ ಕೃಷಿಕ ಹಾಗೂ ಸಾಮನ್ಯ ಜನರು ನೀರು ಸಂರಕ್ಷಣೆ ಬಗ್ಗೆ ಅಲೋಚಿಸುವ ಜತೆಗೆ ಅತನ ಕರ್ತವ್ಯ ವನ್ನು ಮರೆಯಬಾರದು. ಈಗಾಗಲೇ ಕಾರ್ಕಳ ತಾಲೂಕನ್ನು ಬರ ಪೀಡಿತ ಪಟ್ಟಿಗೆ ಸೇರ್ಪಡೆಯಾಗಿದೆ. ನಾವೆಲ್ಲಾರೂ ನಮ್ಮ ಪರಿಸರದ ಒಳಿತಿಗಾಗಿ ಯೋಜನೆಗಳನ್ನು ಹಾಕಿಕೊಂಡಲ್ಲಿ ನಮ್ಮ ಬದುಕು ಪರಿಸರ ಚೆನ್ನಾಗಿ ಇರುಲು ಸಾದ್ಯ ಎಂದರು.
ತಾಪಂ ಅಧ್ಯಕ್ಷೆ ಮಾಲಿನಿ ಜೆ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವರ್ಷದಿಂದ ವರ್ಷಕ್ಕೆ ನಮ್ಮ ತಾಲ್ಲೂಕಿನಲ್ಲಿ ಜೇನು ಸಾಕಾಣಿಕೆ ಸಂಖ್ಯೆ ಹೆಚ್ಚುತ್ತಿದೆ. ಯಾವುದೇ ಕೃಷಿ ಬೆಳೆಗೆ ಸಂಬಂದಿಸಿದಂತೆ ಅದರ ಸಂಪೂರ್ಣ ಮಾಹಿತಿ ಹೊಂದಿದಾಗ ಮಾತ್ರ ಲಾಭದಾಯಕ ವಾಗಲು ಸಾದ್ಯ.ಇಂತಹ ಕಾರ್ಯಕ್ರಮಗಳು ನಡೆದಾಗ ರೈತರಿಗೆ ಉಪಯುಕ್ತವಾದ ಮಾಹಿತಿ ಸಿಗಲಿದೆ. ಅದ್ದರಿಂದ ಮಾಹಿತಿಯ ಕಾರ್ಯಾಗಾರದಲ್ಲಿ ಹೆಚ್ಚು ಕೃಷಿಕರು ರೈತರು ಬಾಗವಹಿಸಿ ಸದುಪಯೋಗ ಪಡಿಸಿಕೊಳ್ಳಿ ಎಂದರು.
ಉಡುಪಿ ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ್.ಎಸ್ ಕೊಟ್ಯಾನ್ ಮತನಾಡಿ, ಕೃಷಿಕರು ಮೂಲ ಕಸಬು ಜತೆ ಇನ್ನಿತರ ಕೃಷಿಗೆ ಸಂಬಂಧಿಸಿದ ಉಪಕಸುಬು ಕಡೆ ಒಲವು ತೋರಿಸಿದಾಗ ಲಾಭದಾಯಕ ಉದ್ಯೋಗ ವಾಗಲು ಸಾದ್ಯ. ಅದ್ದರಿಂದ ಎಲ್ಲಾ ರೈತ ಕೃಷಿಕರು ಇಂತಹ ಯೋಜನೆಗಳನ್ನು ಸದುಪಯೋಗಪಡಿಸಿ ಎಂದರು.
ಪ್ರಸ್ತಾವಿಕವಾಗಿ ಮಾತನಾಡಿದ ತೋಟಗಾರಿಕಾ ಅಧಿಕಾರಿ ಶ್ರೀನಿವಾಸ್ ವೈ????ನಿಕ ಪದ್ದತಿ ಅಳವಡಿಕೆ, ನೀರು ಮಣ್ಣು ಸಂರಕ್ಷಣೆ ಮಾಡುವುದರ ಮೂಲಕ, ಅಂರ್ತ ಬೆಳೆ ವಿಧಾನವನ್ನು ಅಳವಡಿಸಿದ್ದಲ್ಲಿ ಕೃಷಿಯನ್ನು ಲಾಭದಾಯಕ ಉದ್ಯೋಗವನ್ನಾಗಿಪಡಿಸಬಹುದಾಗಿ ಎಂದರು. ಜೇನು ಕೃಷಿಯ ಬಗ್ಗೆ ಅದರಿಂದಾಗುವ ಲಾಭದ ಕುರಿತು ಮಾಹಿತಿ ನೀಡಿದರು.
ಉಡುಪಿ ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ್ ಎಸ್ ಕೋಟ್ಯಾನ್, ಜಿಲ್ಲಾ ಪಂಚಾಯತ್ ಸದಸ್ಯರಾದ ರೇಶ್ಮಾ ಶೆಟ್ಟಿ, ಸುಮಿತ್ ಶೆಟ್ಟಿ ದಿವ್ಯಾ ಗೀರಿಶ್ ಅಮೀನ್, ಜೋತ್ಯಿ ಹರೀಶ್ ಪೂಜಾರಿ, ತಾಲೂಕು ಪಂಚಾಯತ್ ಉಪಾಧ್ಯಕ್ಷ ಗೋಪಾಲ್ ಮೂಲ್ಯ, ಅಂತೋನಿ ಡಿ ಸೋಜಾ ಉಪಸ್ಥಿತರಿದ್ದರು .ಸಂಪನ್ಮೂಲ ವ್ಯಕ್ತಿಗಳಾಗಿ ಬ್ರಹ್ಮವಾರ ಕೃಷಿಯ ಕೇಂದ್ರದ ಮುಖ್ಯಸ್ಥ ಹಾಗೂ ಡಾ.ಎಸ್.ವಿ ಪಾಟೇಲ್ , ಡಾ ದನಂಜಯ್ ಭಾಗವಹಿಸಿದರು.