ಪ್ರಮೋದ್ ಮಧ್ವರಾಜ್ ಕಾಂಗ್ರೆಸ್‌ನಲ್ಲಿಲ್ಲ : ವೀರಪ್ಪ ಮೊಯ್ಲಿ

ಉಡುಪಿ: ಸದ್ಯಕ್ಕೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಿರಿಯ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ಹೇಳಿದ್ದಾರೆ. ಹಲವು ದಿನಗಳ ಕಾಲ ಉಡುಪಿ ಜನರಲ್ಲಿದ್ದ ಗೊಂದಲಕ್ಕೆ ವೀರಪ್ಪ ಮೊಯ್ಲಿ ತೆರೆ ಎಳೆದಿದ್ದಾರೆ. ಶನಿವಾರ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರೆಶ್ನೆಗೆ ಉತ್ತರಿಸಿದ ಅವರು, ಜೆಡಿಎಸ್ ಪಕ್ಷದಲ್ಲಿ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧಿಸಿದ್ದರು. ಬಳಿಕ ಅವರು ಪಕ್ಷಕ್ಕೆ ಮರಳಿಲ್ಲ ಎಂದು ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ನೀವು ಪ್ರಮೋದ್ ಅವರನ್ನೇ ಕೇಳಿ ಎಂದರು.  ಕೇಂದ್ರ, ರಾಜ್ಯ ಸರ್ಕಾರದ ವೈಫಲ್ಯಗಳನ್ನು ಕಾಂಗ್ರೆಸ್ ದೈರ್ಯದಿಂದ ಎದುರಿಸಿ ಪ್ರತಿಭಟಿಸಲಿದೆ. ಜನರ ನಡುವೆ ಕಾಂಗ್ರೆಸ್ ಹೋಗಲಿದೆ. ತಳಮಟ್ಟದಿಂದ ಕಾಂಗ್ರೆಸ್ ಪಕ್ಷ ಸಂಘಟನೆ ಪರಿಣಾಮಕಾರಿಯಾಗಿ ನಡೆಯಲಿದೆ ಎಂದು ತಿಳಿಸಿದರು.

ಆತ್ಮಕತೆ, ಕಾದಂಬರಿ  ಬರೆಯುತಿದ್ದೇನೆ
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಆತ್ಮಕತೆ ಮತ್ತು ಕಾದಂಬರಿಯನ್ನು ಬರೆಯುತ್ತಿರುವುದಾಗಿ ತಿಳಿಸಿದರು. ರಾಜಕೀಯ ಚಟುವಟಿಕೆ ನಡುವೆ ಸಾಹಿತ್ಯಕ್ಕೂ ಒಂದಿಷ್ಟು ಸಮಯ ಬಿಡುವು ಮಾಡಿಕೊಳ್ಳುತ್ತೇನೆ. 500-600 ಪುಟದ ಆತ್ಮಕತೆ ಮುಂದಿನ ಮೂರು ತಿಂಗಳಲ್ಲಿ ಹೊರ ಬರಲಿದೆ. ಮತ್ತು ಸಾಮಾಜಿಕ, ಜೈವಿಕ ವಿಚಾರದಲ್ಲಿ ಕಾದಂಬರಿಯನ್ನು ಬರೆಯುತ್ತಿದ್ದು,  ಈ ಬಗ್ಗೆ ಮುಂದಿನ ದಿನಗಳಲ್ಲಿ ವಿವರಣೆ ನೀಡಲಿದ್ದೇನೆ ಎಂದರು.

Leave a Reply

Your email address will not be published. Required fields are marked *

error: Content is protected !!