ನಾಯಕತ್ವ ಎಂಬುದು ಎಷ್ಟು ಸಂಖ್ಯೆಯ ಹಿಂಬಾಲಕರಿದ್ದಾರೆ ಎನ್ನುವುದರ ಮೇಲೆ ಅವಲಂಬಿತವಾಗಿಲ್ಲ : ಡಾ. ಆಲ್ವಿನ್‌ ಡೇಸಾ

ಉಡುಪಿ: ನಾಯಕತ್ವ ಎಂಬುದು ಎಷ್ಟು ಸಂಖ್ಯೆಯ ಹಿಂಬಾಲಕರಿದ್ದಾರೆ ಎನ್ನುವುದರ ಮೇಲೆ ಅವಲಂಬಿತವಾಗಿಲ್ಲ. ಬದಲಿಗೆ ಎಷ್ಟು ಸಂಖ್ಯೆಯ ನಾಯಕರನ್ನು ಓರ್ವ ನಾಯಕ ಬೆಳೆಸಿದ್ದಾನೆ
ಎನ್ನುವುದರ ಮೇಲೆ ನಿಂತಿದೆ ಎಂದು ಮಂಗಳೂರು ಸಂತ ಅಲೋಶಿಯಸ್‌ ಕಾಲೇಜಿನ ಆಂಗ್ಲಭಾಷಾ ವಿಭಾಗದ ಸಹಪ್ರಾಧ್ಯಾಪಕ ಡಾ. ಆಲ್ವಿನ್‌ ಡೇಸಾ ಹೇಳಿದರು.

ಕಲ್ಯಾಣಪುರ ಮಿಲಾಗ್ರಿಸ್‌ ಕಾಲೇಜಿನ 2019–20ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಈಚೆಗೆ ಉದ್ಘಾಟಿಸಿ ಮಾತನಾಡಿದರು.

ಪ್ರಾಂಶುಪಾಲ ಡಾ. ವಿನ್ಸೆಂಟ್‌ ಆಳ್ವ ವಿದ್ಯಾರ್ಥಿ ಸಂಘದ ನಾಯಕರಿಗೆ ಪ್ರಮಾಣವಚನಬೋಧಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ವಾರ್ಷಿಕ ಮ್ಯಾಗಜಿನ್‌ ಅನ್ನು ಬಿಡುಗಡೆಗೊಳಿಸಲಾಯಿತು.

ಕಾಲೇಜಿನ ಸಂಚಾಲಕ ಡಾ. ಲಾರೆನ್ಸ್‌ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಸಂಘದ ಸಹನಿರ್ದೇಶಕಿ ಚಂದ್ರಿಕಾ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ನಿರ್ದೇಶಕ ಡಾ. ಹೆರಾಲ್ಡ್‌ ಮೊನಿಸ್‌ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಸುರಕ್ಷಿತಾ ವಂದಿಸಿದರು. ಬ್ರೆಂಡಾ ಹಾಗೂ ಜಸ್ಟಿನ್‌ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!