ಕುಕ್ಕಿಕಟ್ಟೆ: ಸಿಡಿಲಿನಿಂದ ರಕ್ಷಿಸಿದ ನಾಗದೇವರು!
ಉಡುಪಿ: ಇಂದು ಸಂಜೆ ಕುಕ್ಕಿಕಟ್ಟೆ ಮಂಚಿ ಮೂಲಸ್ಥಾನ ರಸ್ತೆಗೆ ಸಿಡಿಲು ಬಡಿದು ಸಂಭವಿಸಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿದೆ ನಾಗ ದೇವರು!
ತುಳುನಾಡಿನಲ್ಲಿ ನಾಗದೇವರನ್ನು ಆರಾಧಿಸುವ ಜನರನ್ನು ರಕ್ಷಣೆ ಮಾಡುವುದೇ ನಾಗದೇವರು ಎಂಬ ನಂಬಿಕೆ ತುಳುವರದ್ದು. ಇದು ನಿಜವಾಗಿದೆ ಇಂದಿನ ಘಟನೆಯಿಂದ.
ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ಜಿಟಿ ಜಿಟಿ ಮಳೆ ಸುರಿಯುತ್ತಿತ್ತು ಆ ಸಂದರ್ಭ ಬೃಹತ್ ಶಬ್ದದೊಂದಿಗೆ ಭೂಮಿ ಕಂಪಿಸಿದ ರೀತಿ ಸಿಡಿಲು ಧರೆಗೆ ಅಪ್ಪಲಿಸಿಯೇ ಬಿಟ್ಟಿತ್ತು. ಆದರೆ ಈ ಸಿಡಿಲು ಮಾತ್ರ ಅಪ್ಪಲಿಸಿದ್ದು ಇಲ್ಲಿನ ರಸ್ತೆಗೆ. ಇದರಿಂದ ರಸ್ತೆಯ ಡಾಮಾರ್ ಕಿತ್ತು ಹೋಗಿ,ಪಕ್ಕದ 2 ವಿದ್ಯುತ್ ಕಂಬ,ನಾಗಬನದ ಬಾವಿ ಮತ್ತು ಆವರಣಗೋಡೆ ಕುಸಿದು ಹೋಗಿದೆ.
ಒಂದು ವೇಳೆ ನಾಗದೇವರ ಕೃಪೆ ಇಲ್ಲದೆ ಇರುತ್ತಿದ್ದರೆ ಸುಮಾರು 10 ಕ್ಕೂ ಹೆಚ್ಚು ಮನೆಗೆ, ಇಲ್ಲಿನ ನಿವಾಸಿಗೆ ಸಿಡಿಲು ಬಡಿದು ಮನೆ,ಜೀವ ಹಾನಿ ಸಂಭವಿಸುತ್ತಿತೆಂದು ಇಲ್ಲಿನ ನಿವಾಸಿಗಳು ಮಾತನಾಡಿಕೊಳ್ಳುತ್ತಿದ್ದರು. ನಮ್ಮನ್ನೆಲ್ಲ ನಾಗದೇವರೆ ರಕ್ಷಿಸಿದ್ದು ಎಂದು ದೇವರಿಗೆ ಕೈಮುಗಿದು ಹೋಗುತ್ತಿದ್ದರು ಸ್ಥಳೀಯರು.