ಕೆಪಿಸಿಸಿ ಅನಿವಾಸಿ ವಿಭಾಗದ ಸೌದಿ ಅರೇಬಿಯಾ ಅಧ್ಯಕ್ಷರಾಗಿ ಶಕೀಲ್

ಬೆಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅನಿವಾಸಿ ಭಾರತೀಯರ ವಿಭಾಗದ ಸೌದಿ ಅರೇಬಿಯಾ ಅಧ್ಯಕ್ಷರಾಗಿ ದೇರಳಕಟ್ಟೆ ಮಂಗಳೂರಿನ ಪ್ರಸ್ತುತ ಸೌದಿ ಅರೇಬಿಯಾದ ಉದ್ಯಮಿ ಅಬ್ದುಲ್ ಶಕೀಲ್ ಆಯ್ಕೆಯಾಗಿದ್ದಾರೆ.


ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅನಿವಾಸಿ ಭಾರತೀಯರ ವಿಭಾಗದ ಚೇರ್ಮನ್ ಡಾ. ಆರತಿಕೃಷ್ಣ, ಅಬ್ದುಲ್ ಶಕೀಲ್ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. ಉಡುಪಿ, ಮಂಗಳೂರು, ದುಬೈ  ಸಹಿತ ಸೌದಿ ಅರೇಬಿಯಾದಲ್ಲೂ ತನ್ನ ಉದ್ಯಮವನ್ನು ನಡೆಸುತ್ತಿರುವ ಇವರು, ಕಾಂಗ್ರೆಸ್ ಪಕ್ಷದ ವಿವಿಧ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿದ್ದರು.

ಕಳೆದ ಜನವರಿಯಲ್ಲಿ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿಯವರ ದುಬೈ ಕಾರ್ಯಕ್ರಮದ ಯಶಸ್ವಿಯಲ್ಲಿ ಡಾ. ಆರತಿ ಕೃಷ್ಣ ಅವರ ಜೊತೆ ಕೆಲಸವನ್ನು ಮಾಡಿದ್ದರು. ದುಬೈ ಮತ್ತು ಸೌದಿ ಅರೇಬಿಯಾದಲ್ಲಿ ಕಾಂಗ್ರೆಸ್ ಪರ ವಿವಿಧ ಸಭೆಗಳನ್ನು ನಡೆಸಿ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪರ ಪ್ರಚಾರವನ್ನು ಮಾಡಿದ್ದರು.

1 thought on “ಕೆಪಿಸಿಸಿ ಅನಿವಾಸಿ ವಿಭಾಗದ ಸೌದಿ ಅರೇಬಿಯಾ ಅಧ್ಯಕ್ಷರಾಗಿ ಶಕೀಲ್

Leave a Reply

Your email address will not be published. Required fields are marked *

error: Content is protected !!