ಕೋಟ:ಮದುವೆ ನಿಶ್ಚಯವಾದ ಯುವತಿ ಪರಾರಿ
ಕೋಟ: ಮದುವೆ ನಿಶ್ಚಿತಾರ್ಥ ಯುವತಿಯೊರ್ವಳು ತಂದೆ ತಾಯಿ ಮನೆಯಲ್ಲಿ ಇರುವಾಗಲೇ ನಾಪತ್ತೆಯಾದ ಘಟನೆ ತೆಕ್ಕೆಟ್ಟೆ ಬಳಿ ನಡೆದಿದೆ. ಸಾಧಿಕ್ ಎಂಬವರ ಮಗಳು ರಫತ್(26) ಎಂಬಾಕೆ ನಾಪತ್ತೆಯಾದವಳು. ಕಳೆದ 15 ದಿನಗಳ ಹಿಂದೆ ಯುವತಿಗೆ ಮದುವೆ ಬಗ್ಗೆ ಮಾತುಕಥೆಯಾಗಿತ್ತು.
ಗುರುವಾರ ಸಾಧಿಕ್ ಸಾಹೇಬ್ ಮತ್ತು ಅವರ ಹೆಂಡತಿ ಮನೆಯಲ್ಲಿ ಟಿವಿ ನೋಡುತ್ತಿದ್ದಾಗ ಮಗಳು ರಫತ್ ಕಪ್ಪು ಬಣ್ಣದ ಬುರ್ಖಾ ಹಾಗೂ ಕೆಂಪುಬಣ್ಣದ ಚೂಡಿದಾರ ಧರಿಸಿ ಯಾರಿಗೂ ಹೇಳದೇ ಮನೆಯಿಂದ ಹೋಗಿದ್ದು, ರಾತ್ರಿ ಯಾದರೂ ಮನೆಗೆ ಬಾರದೇ ಇದ್ದದನ್ನು ನೋಡಿ ಸಾಧಿಕ್ ಸಾಹೇಬ್ ರವರು ಎಲ್ಲಾ ಹುಡುಕಾಡಿ, ಸಂಬಂಧಿಕರಲ್ಲಿಯೂ ವಿಚಾರ ಮಾಡಲಾಗಿ ರಫತ್ ಪತ್ತೆಯಾಗಿರುವುದಿಲ್ಲವಾದ್ದರಿಂದ ಯುವತಿ ತಂದೆ ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.