ಉಸ್ತುವಾರಿ ಖಾತೆ ಹಂಚಿಕೆ: ಉಡುಪಿ-ಬೊಮ್ಮಾಯಿ,ದ.ಕ-ಕೋಟ ಪೂಜಾರಿ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ತಿಂಗಳ ನಂತರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿದ್ದಾರೆ.

ಖಾತೆ ಹಂಚಿಕೆ ಬಳಿಕ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಮತ್ತು ಸಚಿವ ಸ್ಥಾನ ಪಡೆದುಕೊಂಡ ಸಚಿವರಲ್ಲೂ ಹಲವರು ಗೊಂದಲ ಹೊಂದಿದ್ದರಿಂದ ಸಿಎಂ ಯಡಿಯೂರಪ್ಪ ಅವರು ಜಿಲ್ಲಾ ಉಸ್ತುವಾರಿ ಸಚಿವರ ನೇಮಕವನ್ನು ಮುಂದೂಡುತ್ತಾ ಬಂದಿದ್ದರು. ಇಂದು ಸಂಜೆ ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿ, ಪಟ್ಟಿ ಬಿಡುಗಡೆ ಮಾಡಿದ್ದಾರೆ.

ಬಿಜೆಪಿ ಸರ್ಕಾರದ ಜಿಲ್ಲಾ ಉಸ್ತುವಾರಿ ಸಚಿವರಗಳ ವಿವರ ಇಲ್ಲಿದೆ
ಬಿಎಸ್​. ಯಡಿಯೂರಪ್ಪ: ಬೆಂಗಳೂರು ನಗರ ಜಿಲ್ಲೆ
ಗೋವಿಂದ ಕಾರಜೋಳ: ಬಾಗಲಕೋಟೆ/ಕಲಬುರಗಿ
ಡಾ.ಅಶ್ವತ್ಥನಾರಾಯಣ: ರಾಮನಗರ/ಚಿಕ್ಕಬಳ್ಳಾಪುರ
ಲಕ್ಷ್ಮಣ ಸವದಿ: ಬಳ್ಳಾರಿ/ಕೊಪ್ಪಳ
ಕೆ.ಎಸ್​.ಈಶ್ವರಪ್ಪ: ಶಿವಮೊಗ್ಗ /ದಾವಣಗೆರೆ
ಆರ್​​.ಅಶೋಕ್: ಬೆಂಗಳೂರು ಗ್ರಾಮಾಂತರ/ಮಂಡ್ಯ
ಆರ್​. ನಾಗೇಶ್: ಕೋಲಾರ
ಪ್ರಭು ಚೌವ್ಹಾಣ್: ಬೀದರ್/ಯಾದಗಿರಿ
ಶ್ರೀರಾಮುಲು: ರಾಯಚೂರು/ಚಿತ್ರದುರ್ಗ
ಸುರೇಶ್ ಕುಮಾರ್: ಚಾಮರಾಜನಗರ
ಜಗದೀಶ್ ಶೆಟ್ಟರ್: ಬೆಳಗಾವಿ/ಹುಬ್ಬಳ್ಳಿ /ಧಾರವಾಡ
ಸಿ.ಟಿ.ರವಿ: ಚಿಕ್ಕಮಗಳೂರು
ಕೋಟ ಶ್ರೀನಿವಾಸ ಪೂಜಾರಿ: ದಕ್ಷಿಣ ಕನ್ನಡ
ಬಸವರಾಜ್ ಬೊಮ್ಮಾಯಿ: ಉಡುಪಿ/ಹಾವೇರಿ
ಜೆ.ಸಿ.ಮಾಧುಸ್ವಾಮಿ: ತುಮಕೂರು/ ಹಾಸನ
ಸಿ.ಸಿ.ಪಾಟೀಲ್: ಗದಗ/ ವಿಜಯಪುರ
ಶಶಿಕಲಾ ಜೊಲ್ಲೆ: ಉತ್ತರ ಕನ್ನಡ

Leave a Reply

Your email address will not be published. Required fields are marked *

error: Content is protected !!