ಕೊಪ್ಪಳ: ಧ್ವಜ ಕಂಬಕ್ಕೆ ವಿದ್ಯುತ್ ತಂತಿ ಸ್ಪರ್ಶಿಸಿ ಐವರು ವಿದ್ಯಾರ್ಥಿಗಳ ಸಾವು

ಕೊಪ್ಪಳ: ವಿದ್ಯುತ್ ತಂತಿ ಸ್ಪರ್ಶಿಸಿ ಐವರು ವಿದ್ಯಾರ್ಥಿಗಳು ಭಾನುವಾರ ಬೆಳಗ್ಗೆ ಮೃತಪಟ್ಟಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳದ ದೇವರಾಜು ಅರಸು ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಈ ದುರ್ಘಟನೆ ನಡೆದಿದೆ. ಮೃತ ವಿದ್ಯಾರ್ಥಿಗಳು 14ರಿಂದ 15 ವರ್ಷದವರಾಗಿದ್ದು ವಿದ್ಯಾರ್ಥಿ ನಿಲಯದಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದರು.


ನಡೆದ ಘಟನೆಯೇನು?: ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಗೆ ಧ್ವಜಾರೋಹಣಕ್ಕೆಂದು ವಿದ್ಯಾರ್ಥಿ ನಿಲಯದ ಪಕ್ಕ ಕಬ್ಬಿಣದ ಕಂಬ ಅಳವಡಿಸಿದ್ದರು. ಭಾರೀ ಮಳೆಗೆ ಕಬ್ಬಿಣದ ಕಂಬ ಬಿದ್ದು ವಿದ್ಯುತ್ ತಂತಿಯನ್ನು ಸ್ಪರ್ಶಿಸಿತ್ತು. 


ಅದನ್ನು ಇಂದು ಬೆಳಗ್ಗೆ ತೆರವುಗೊಳಿಸಲು ಮೊದಲು ಒಬ್ಬ ವಿದ್ಯಾರ್ಥಿ ಹೋಗಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಆಘಾತವಾಗಿ ಕುಸಿದುಬಿದ್ದನು. ಅವನನ್ನು ಕಾಪಾಡಲು ಹೋಗಿ ಉಳಿದ ನಾಲ್ಕು ವಿದ್ಯಾರ್ಥಿಗಳು ಹೋದಾಗ ಅವರಿಗೂ ವಿದ್ಯುತ್ ಸ್ಪರ್ಶವಾಗಿ ಆಘಾತವಾಗಿ ಕೂಡಲೇ ಮೃತಪಟ್ಟಿದ್ದಾರೆ.


ಕೊಪ್ಪಳ ನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. 

Leave a Reply

Your email address will not be published. Required fields are marked *

error: Content is protected !!