ಸೆ.1 ರಂದು ಕೊಡವೂರು ಕಂಗಣಬೆಟ್ಟು ದೈವಸ್ಥಾನ ಮುಷ್ಠಿ ಕಾಣಿಕೆ ಸಮರ್ಪಣೆ
ಕೊಡವೂರು ಕಂಗಣಬೆಟ್ಟು ಶ್ರೀ ವಾಸುಕಿ ನಾಗಬ್ರಹ್ಮ ಅಬ್ಬಗದಾರಗ ಸಿರಿಗಳು ಮತ್ತು ಶ್ರೀ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಮುಷ್ಠಿ ಕಾಣಿಕೆ ಸಮರ್ಪಣೆ ಮೂಲಕ ಅಧಿಕೃತ ಚಾಲನೆ ಜೀರ್ಣೋದ್ಧಾರ ಸಮಿತಿಯ ಗೌರವ ಅಧ್ಯಕ್ಷ ಸಂತೋಷ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯಲಿದೆ.
ಭಾನುವಾರ ಸೆಪ್ಟೆಂಬರ್ 1ರಂದು ಬೆಳಿಗ್ಗೆ 10 ಗಂಟೆಗೆ ಗಣ ಹೋಮ, ಮೃತ್ಯುಂಜಯ ಹೋಮ ನಂತರ ಗ್ರಾಮಸ್ಥರಿಂದ ಹಾಗೂ ಭಕ್ತಾದಿಗಳಿಂದ ಮುಷ್ಠಿ ಕಾಣಿಕೆ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಟಿ. ರಾಘವೇಂದ್ರ ರಾವ್ ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ತುಳುನಾಡಿನ ಬಹುತೇಕ ಆಲಡೆಗಳು ಭಕ್ತರ ಕೂಡುವಿಕೆಯಿಂದ ಮತ್ತೆ ಜೀರ್ಣೋದ್ಧಾರಗೊಂಡಿದೆ. ಹಿರಿಯಡ್ಕ ,ಕವತ್ತಾರು, ಬೊಲ್ಯೊಟ್ಟು, ಮರೋಡಿ, ಕಲ್ಲೊಟ್ಟು , ಪಾಂಗಳ ಹೀಗೆ ಅನೇಕ ಆಲಡೆಳೆಗಳು ಇತ್ತೀಚಿನ ವರ್ಷಗಳಲ್ಲಿ ಜೀರ್ಣೋದ್ಧಾರಗೊಂಡಿದೆ. ಈಗ ಇದರ ಸಾಲಿಗೆ ಮತ್ತೊಂದು ಆಲಡೆ ಸೇರ್ಪಡೆಗೊಳ್ಳಲಿದ್ದು, ಅದೇ ಕಂಗೊಟ್ಟು ಆಲಡೆ.
ನಾಗಬ್ರಹ್ಮ ಮತ್ತು ಸಿರಿ ಕುಮಾರ ವೀರಭದ್ರ ಪರಿವಾರ ಶಕ್ತಿಗಳ ಸಂಕಲ್ಪದಂತೆ ಇಲ್ಲಿ ಗ್ರಾಮಸ್ಥರು ಈ ಜೀರ್ಣೋದ್ಧಾರ ಕಾರ್ಯಕ್ಕೆ ಸಂಕಲ್ಪ ಮಾಡಿದ್ದಾರೆ .
ಸುಮಾರು ಎರಡು ಕೋಟಿ ಅಂದಾಜು ವೆಚ್ಚದಲ್ಲಿ ಸಿರಿ ಅಬ್ಬಗದಾರಗ ಮತ್ತು ವೀರಭದ್ರ ದೇವರಿಗೆ ಗುಡಿ, ಪಕ್ಕದಲ್ಲಿ ಬೆರ್ಮರಿಗೆ ಗುಡಿ , ಹಿಂಭಾಗದಲ್ಲಿ ಕ್ಷೇತ್ರಪಾಲ ಮತ್ತು ರಕ್ತೇಶ್ವರಿ ಶಿಲಾ ಮುಂಡಿಗೆಗೆಗಳು ರಚನೆಯಾಗಲಿದೆಂದು ರಾವ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವ ಅಧ್ಯಕ್ಷ ಸಂತೋಷ್ ಶೆಟ್ಟಿ, ಕಾರ್ಯದರ್ಶಿ ದಿನೇಶ್ ಶೆಟ್ಟಿಗಾರ್, ಕೋಶಾಧಿಕಾರಿ ರಮೇಶ್ ಬಂಗೇರ ಉಪಸ್ಥಿತರಿದ್ದರು.