ಕೆ .ಎಂ .ಎಫ್ ಗೆ 6.99 ಕೋಟಿ ನಿವ್ವಳ ಲಾಭ : ಕೆ.ರವಿರಾಜ ಹೆಗ್ಡೆ
ಬಂಟ್ವಾಳ : ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು 816 ಕೋಟಿಯಷ್ಟು ವ್ಯವಹಾರ ನಡೆಸಿ, 6.99 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ರವಿರಾಜ ಹೆಗ್ಡೆ ತಿಳಿಸಿದ್ದಾರೆ.
ಶನಿವಾರ ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಕೆಎಂಎಫ್ ಗೆ ಸಂಯೋಜನೆ ಗೊಂಡಿರುವ ಬಂಟ್ವಾಳ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಈ ವರ್ಷಾಂತ್ಯದಲ್ಲಿ
64 ಲಕ್ಷ ದಷ್ಟು ಹಾಲನ್ನು ಹುಡಿಯಾಗಿ ಮಾರ್ಪಾಡು ಮಾಡುವಷ್ಟು ಮಟ್ಟಕ್ಕೆ ಬೆಳೆದಿದ್ದು,ಹಾಲು ಹಾಗೂ ಹಾಲಿನ ಇತರ ಉತ್ಪಾದನೆಯ ಮೂಲಕ
ಮಾರುಕಟ್ಟೆ ಗೆ ಹೆಚ್ಚಿನ ಒತ್ತನ್ನು ಒಕ್ಕೂಟ ನೀಡಬೇಕಾಗಿದೆ ಎಂದರು.
ಮಹಾಸಭೆಯ ಪೂರ್ವಭಾವಿಯಾಗಿ ತಾಲೂಕು ಸಂಘದ ಜೊತೆ ಸಮಾಲೋಚನೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದ ಅವರು
ಹ್ಯಾಪ್ ಹಾಗೂ ಕ್ಲೀರ ಸಿರಿ ಎಂಬ ಸಾಪ್ಟವೇರ್ ಮೂಲಕ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಒಕ್ಕೂಟವು ವ್ಯವಸ್ಥೆ ಮಾಡುವ ಉದ್ದೇಶವನ್ನು ಹೊಂದಿದ್ದು,ಹಾಲು ಉತ್ಪಾದಕರ ಸಂಘಗಳು ಇದರ ಸದುಪಯೋಗ ಪಡೆಯುವಂತೆ ತಿಳಿಸಿದರು.
ಅಧ್ಯಕ್ಷರ ಮುಂದೆ ದೂರು ; ಉಪಕರಣಗಳ ಗುತ್ತಿಗೆ ವಹಿಸಿದ ಕಂಪೆನಿಯ ಸರಿಯಾಗಿ ಸಹಕರಿಸುತ್ತಿಲ್ಲ ,ನಿಗದಿತ ಅವಧಿಗೆ ಸರ್ವೀಸ್ ನೀಡಲಾಗದೆ ತೊಂದರೆ ಅನುಭವಿಸುವುದು, ಪಶು ಆಹಾರದ ಗುಣಮಟ್ಟದ ಲ್ಲಿ ಅನುಮಾನ ಪರಿಣಾಮ ಹಾಲು ಉತ್ಪಾದನೆ ಕೂಡಾ ಕಡಿಮೆಯಾಗುತ್ತಿದೆ ಯಲ್ಲದೆ ಹೆಚ್ಚಿನ ಹೈನುಗಾರರು ಖಾಸಗಿ ರಾಸು ಆಹಾರವನ್ನು ಉಪಯೋಗ ಮಾಡುತ್ತಿದ್ದಾರೆ ಎಂದು ಕೆಲವರು ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಿಗೆ ದೂರು ನೀಡಿದರು.
ಸಭೆಯಲ್ಲಿ ಪ್ರಸ್ತಾಪವಾದ ಕೆಲ ಸಮಸ್ಯೆಯನ್ನು ಪರಿಹರಿಸಲು ಅಧ್ಯಕ್ಷ ರವಿರಾಜ ಹೆಗ್ಡೆ ಅವರು ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸೂಚಸಿದರು.
ಹಾಗೆಯೇ ಪಶುಗಳಿಗೆ ಅನಾರೋಗ್ಯದ ಸಂದರ್ಭದಲ್ಲಿ ಒಕ್ಕೂಟದ ವೈದ್ಯಾಧಿಕಾರಿಗಳು ಕೈಗೆ ಸಿಗುತ್ತಿಲ್ಲ ಈ ನಿಟ್ಟಿನಲ್ಲಿ ಒಕ್ಕೂಟದಿಂದ ಮೊಬೈಲ್ ಅಸ್ಪತ್ರೆಯನ್ನು ಸ್ಥಾಪಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಇದೇ ವೇಳೆ ಹಾಲು ಉತ್ಪಾದನೆ, ಹಾಲಿನ ಗುಣಮಟ್ಟ, ಹೈನುಗಾರರಿಗೆ ಸವಲತ್ತುಗಳನ್ನು ವಿತರಣೆ ಮಾಡಿರುವಲ್ಲಿ ಪ್ರಥಮ ಹಾಗೂ ದ್ವೀತಿಯ ಸ್ಥಾನ ಪಡೆದ ಸಂಘಗಳನ್ನು ಗುರುತಿಸಿ ಆ ಸಂಘಗಳನ್ನು ಗೌರವಿಸಲಾಯಿತು.
ಉನ್ನತ ಶ್ರೇಣಿಯ ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ಒಕ್ಕೂಟದ ಆದ್ಯಕ್ಷರು ಹಾಗೂ ನಿರ್ದೇಶಕರನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಒಕ್ಕೂಟದ ನಿರ್ದೇಶಕ ರುಗಳಾದ ಸುಚರಿತ ಶೆಟ್ಟಿ, ಸುಭದ್ರಾ ರಾವ್, ವ್ಯವಸ್ಥಾಪಕ ನಿರ್ದೇಶಕ ಡಾ.ಜಿ.ವಿ.ಹೆಗ್ಡೆ, ವ್ಯವಸ್ಥಾಪಕ ಡಾ. ನಿತ್ಯಾನಂದ ಭಕ್ತ ಹಾಗೂ ಒಕ್ಕೂಟದ ಅಧಿಕಾರಿಗಳು ಹಾಜರಿದ್ದರು.
ನಿರ್ದೇಶಕ ಸುಧಾಕರ ರೈ ಸ್ವಾಗತಿಸಿ , ನಿರ್ದೇಶಕಿ ಸವಿತಾ ಶೆಟ್ಟಿ ವಂದಿಸಿದರು.ವಿಸ್ತರಣಾಧಿಕಾರಿ ಎ ಜಗದೀಶ್ ಕಾರ್ಯಕ್ರಮ ನಿರೂಪಿಸಿದರು.