ಪಡುಬಿದ್ರಿ : ವಿದ್ಯಾರ್ಥಿನಿಗೆ ನಿರಂತರ ಲೈಂಗಿಕ ದೌರ್ಜನ್ಯ ಮ್ಯಾಕ್ಸಿ ಕ್ಯಾಬ್ ಚಾಲಕನ ಬಂಧನ

ಪಡುಬಿದ್ರೆ: ಇಲ್ಲಿನ ಪ್ರಾಥಮಿಕ ಶಾಲೆಯ 6ನೇ ತರಗತಿಯ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ನಡೆಸಿದ ಮ್ಯಾಕ್ಸಿ ಕ್ಯಾಬ್ ಚಾಲಕನ ಬಂಧನ. ಇಲ್ಲಿನ ಶಾಲೆಯೊಂದರ  6ನೇ ತರಗತಿಯ ವಿದ್ಯಾರ್ಥಿನಿಯನ್ನು ಫೆಲಿಕ್ಸ್ ಡಿಸೋಜ(55) ದಿನನಿತ್ಯ ತನ್ನ ವಾಹನದಲ್ಲಿ ಕರೆದುಕೊಂಡು ಹೋಗಿ ಮನೆಗೆ ಬಿಡುತ್ತಿದ್ದ . ಚಾಲಕ  ಕಳೆದ ಒಂದು ವರ್ಷದಿಂದ ವಿದ್ಯಾರ್ಥಿನಿಯನ್ನು ಲೈಂಗಿಕವಾಗಿ ಪಿಡೀಸುತ್ತಿದ್ದ.

ಹಲವಾರು ವರ್ಷಗಳಿಂದ ಶಾಲೆಗೆ ಮಕ್ಕಳು ಕರೆದುಕೊಂಡು ಹೋಗಿ ಮನೆಗೆ ಬಿಡುತ್ತಿದ್ದಫೆಲಿಕ್ಸ್  ಡಿಸೋಜ . ಈ ವಿದ್ಯಾರ್ಥಿನಿಯ ಮನೆ ಕೊನೆಯದಾಗಿ ಇಳಿಯುತ್ತಿದ್ದ ಕಾರಣ ಆಕೆಯನ್ನು ನಿರ್ಜನ ಪ್ರದೇಶದಲ್ಲಿ ತನ್ನ ಕ್ಯಾಬ್ ನಿಲ್ಲಿಸಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ. ಇತನ ನಿರಂತರ ದೌರ್ಜನ್ಯಕ್ಕೆ ಬೇಸತ್ತ  ವಿದ್ಯಾರ್ಥಿನಿ ಕೊನೆಗೆ ಪೋಷಕರಿಗೆ ದೂರಿದ ಹಿನ್ನೆಲೆಯಲ್ಲಿ ಅವರು ಉಡುಪಿ ಜಿಲ್ಲಾ ಮಕ್ಕಳ ಕಲ್ಯಾಣ ರಕ್ಷಣಾ ಸಮಿತಿಗೆ ಮ್ಯಾಕ್ಸಿಕ್ಯಾಬ್ ಚಾಲಕನ ವಿರುದ್ಧ ದೂರು ನೀಡಿದರು.
 ಮಕ್ಕಳ ಕಲ್ಯಾಣ ಸಮಿತಿಯ ಅವರ ನಿರ್ದೇಶನದಂತೆ ಉಡುಪಿ ಜಿಲ್ಲಾ ಮಕ್ಕಳ  ರಕ್ಷಣಾ ಕಲ್ಯಾಣ ಘಟಕದ  ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ಯ ಪೋಷಕರೊಂದಿಗೆ
ಪಡುಬಿದ್ರಿ ಠಾಣೆಗೆ ಚಾಲಕನ ವಿರುದ್ಧ ದೂರು ನೀಡಿದರು. ಈ  ದೂರಿನನ್ವಯ ಪಡುಬಿದ್ರಿ ಠಾಣಾಧಿಕಾರಿ ಆರೋಪಿ ಫೆಲಿಕ್ಸ್ ಡಿಸೋಜ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆತನಿಗೆ ಆಗಸ್ಟ್ ೮ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

1 thought on “ಪಡುಬಿದ್ರಿ : ವಿದ್ಯಾರ್ಥಿನಿಗೆ ನಿರಂತರ ಲೈಂಗಿಕ ದೌರ್ಜನ್ಯ ಮ್ಯಾಕ್ಸಿ ಕ್ಯಾಬ್ ಚಾಲಕನ ಬಂಧನ

Leave a Reply

Your email address will not be published. Required fields are marked *

error: Content is protected !!