ಅದಮಾರು ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ
ಉಡುಪಿ: ಮುಂದಿನ ವರ್ಷ ಜನವರಿ 18 ರಿಂದ ಪ್ರಾರಂಭವಾಗುವ ಅದಮಾರು ಮಠದ ಪರ್ಯಾಯ ಮಹೋತ್ಸವದ ಪೂರ್ವಭಾವಿಯಾಗಿ ಮೂರನೇ ಮೂರ್ಹೂತವಾದ ಕಟ್ಟಿಗೆ ಮೂರ್ಹೂತವು ಇಂದು ಬೆಳಿಗ್ಗೆ ಶ್ರೀಕೃಷ್ಣ ಮಠದ ಮಧ್ವಸರೋವರದ ಬಳಿ ಸಂಪನ್ನಗೊಂಡಿತು.
ಶ್ರೀಕೃಷ್ಣ ದೇವರಿಗೆ ನೇವೆದ್ಯ ಹಾಗೂ ಮಠಕ್ಕೆ ಆಗಮಿಸುವ ಭಕ್ತರಿಗೆ ತಯಾರಿಸುವ ಅಡುಗೆ ಮಾಡಲು ಬೇಕಾದ ಕಟ್ಟಿಗೆಯನ್ನು ರಥದ ಮಾದರಿಯಲ್ಲಿ ಸಂಗ್ರಹಿಸಿಡುವುದೇ ಕಟ್ಟಿಗೆ ರಥ, ಬೆಳಿಗ್ಗೆ 8 ಗಂಟೆಗೆ ಸಿಂಹ ಲಗ್ನ ಸುಮೂಹೂರ್ತದಲ್ಲಿಅದಮಾರು ಮಠದ ಪಟ್ಟದ ದೇವರಲ್ಲಿ ಪೂಜೆ ಸಲ್ಲಿಸಿ ನಂತರ ಚಂದ್ರಮೌಳೇಶ್ವರ, ಅನಂತೇಶ್ವರ, ಶ್ರೀಕೃಷ್ಣ, ಮುಖ್ಯಪ್ರಾಣ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಅದಮಾರು ಮಠದಿಂದ ಸುಂದರ ಕರ್ಜೆ ನೇತೃತ್ವದಲ್ಲಿ ತಲೆಯ ಮೇಲೆ ಕಟ್ಟಿಗೆಯನ್ನು ಹೊತ್ತುಕೊಂಡು ರಾಜಾಂಗಣ, ಗೀತಾ ಮಂದಿರವಾಗಿ ಮೆರವಣಿಗೆಯಲ್ಲಿ ಸಾಗಿತು.
ಚೆಂಡೆ ವಾದ್ಯ,ವೇದ ಘೋಷಗಳೊಂದಿಗೆ ಮಹಿಳೆಯರ ಭಜನಾ ತಂಡವು ಮೆರವಣಿಗೆಗೆ ಮೆರುಗುಕೊಟ್ಟಿತು. ಮಧ್ವಸರೋವರದ ಬಳಿಯ ಕಟ್ಟಿಗೆ ರಥ ನಿರ್ಮಿಸು ಸ್ಥಳದಲ್ಲಿ ಕಟ್ಟಿಗೆಯನ್ನು ಪ್ರತಿಷ್ಠಾಪಿಸಿ, ಪೂಜೆ ನೆರವೆರಿಸಲಾಯಿತು.
ಅದಮಾರು ಮಠದ ಆಸ್ಥಾನ ಪುರೋಹಿತರಾದ ಶಿಬರೂರು ವಾಸುದೇವ ಅವರ ನೇತೃತ್ವದಲ್ಲಿ ಕಟ್ಟಿಗೆ ಮೂಹೂರ್ತದ ವಿಧಿವಿಧಾನ ನಡೆಯಿತು.
ಮಠದ ದಿವಾನರಾದ ಲಕ್ಷ್ಮೀನಾರಯಣ ಮುಂಚಿತ್ತಾಯ, ಸಗ್ರಿ ರಾಘವೇಂದ್ರ ಆಚಾರ್ಯ,ಪಾಡಿಗಾರ ಶ್ರೀನಿವಾಸ ತಂತ್ರಿ,ಕಟೀಲ್ ಲಕ್ಷ್ಮೀನಾರಯಣ ಅಸ್ರಣ್ಣ,ರಾಘರಾಮ ಆಚಾರ್ಯ,ವೈ.ಎನ್ ರಾಮಚಂದ್ರ ರಾವ್, ಎನ್.ಎ.ಮಧ್ಯಸ್ಥ, ಮಠದ ವ್ಯವಸ್ಥಾಪಕ ಗೋವಿಂದರಾಜ್ ,ವಿಷ್ಣು ಪಾಡಿಗಾರ್,ರಂಜನ್ ಕಲ್ಕೂರ,ಕೆ.ಉದಯ್ ಕುಮಾರ್ ಶೆಟ್ಟಿ,ಸೋಮಶೇಖರ್ ಭಟ್,ಶ್ರೀಶ ನಾಯಕ್, ನಗರ ಸಭಾ ಸದಸ್ಯರಾದ ಗೀರೀಶ ಅಂಚನ್ ಉಪಸ್ಥಿತರಿದ್ದರು.