ಶಿರ್ವ ರೋಟರಿ ಕ್ಲಬ್‌ನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ

ಜಿಲ್ಲೆಯ ಪ್ರತಿಷ್ಠಿತ ರೋಟರಿ ಕ್ಲಬ್ ಗಳಲ್ಲಿ ಒಂದಾಗಿರುವ ಶಿರ್ವ ರೋಟರಿ ಕ್ಲಬ್ನ ಐವತ್ತನೇ ವರ್ಷದ ಕಾರ್ಯಕಾರಿ ಸಮಿತಿಯ ಪದಗ್ರಹಣ ಕಾರ್ಯಕ್ರಮವು ಬಂಟಕಲ್ಲು ರೋಟರಿ ಸಭಾಭವನದಲ್ಲಿ ಜರಗಿತು.

ಪದಗ್ರಹಣ ಸಮಾರಂಭದ ಅಧಿಕಾರಿಯಾಗಿ ಆಗಮಿಸಿದ ಮಾಜಿ ಸಹಾಯಕ ಗವರ್ನರ್ ರೊ. ಪಿಎಚ್ಎಫ್ ಅಶೋಕ್ ಕುಮಾರ್ ಬಿ ರವರು, ನೂತನ ಅಧ್ಯಕ್ಷ ರೊ. ಸುನೀಲ್ ಕಬ್ರಾಲ್ ಮತ್ತು ತಂಡಕ್ಕೆ ಪದಗ್ರಹಣ ನೆರವೇರಿಸಿ, ಶುಭ ಹಾರೈಸಿದರು.

ವಲಯ 5 ರ ಸಹಾಯಕ ಗವರ್ನರ್ ರೊ. ಗಣೇಶ ಆಚಾರ್ಯ ನೂತನ ಸದಸ್ಯರನ್ನು ಕ್ಲಬ್ಬಿಗೆ ಸೇರ್ಪಡೆಗೊಳಿಸಿದರು. ವಲಯ 5 ರ ವಲಯ ಸೇನಾನಿ ರೊ. ಚಂದ್ರಶೇಖರ ಸಾಲ್ಯಾನ್ ಕ್ಲಬ್ಬಿನ ಪತ್ರಿಕೆ ‘ಮಲ್ಲಿಕಾರ್ಜುನ’ ವನ್ನು ಬಿಡುಗಡೆಗೊಳಿಸಿದರು.

ಶಿರ್ವದ ಪ್ರತಿಷ್ಠಿತ ಶೋಭಾ ಬೇಕರಿಯಲ್ಲಿ ಪ್ಲಾಸ್ಟಿಕ್ ನಿಷೇಧವನ್ನು ಅನುಷ್ಠಾನಕ್ಕೆ ತಂದ ಬೇಕರಿ ಮಾಲಕ ಭಾಸ್ಕರ ಕೋಟ್ಯಾನ್ ಅವರನ್ನು ಮುಖ್ಯ ಅತಿಥಿಗಳು ಸನ್ಮಾನಿಸಿದರು.  
ಸಹ ಸಂಸ್ಥೆಯಾದ ಇಂಟರಾಕ್ಟ್ ಕ್ಲಬ್ಬಿನ ಮಕ್ಕಳಿಗೆ ಈ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಯಿತು.

 50 ನೇ ವರ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ರೊ. ಸುನೀಲ್ ಕಬ್ರಾಲ್ ರವರು ಮಾತನಾಡಿ ತನ್ನನ್ನು ಆಯ್ಕೆ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿ, ಪ್ರಸ್ತುತ ವರ್ಷ ಕಾರ್ಯಕ್ರಮಕ್ಕೆ ಸಹಕಾರ ಕೋರಿದರು.

ನಿಕಟಪೂರ್ವ ಅಧ್ಯಕ್ಷರಾದ ರು ದಯಾನಂದ ಶೆಟ್ಟಿ ಸ್ವಾಗತಿಸಿ, ತನ್ನ ಅವಧಿಯಲ್ಲಿ ತನ್ನ ಕಾರ್ಯಕಾರಿ ಸಮಿತಿ ಸಾಧಿಸಿದ ಸಾಧನೆಗಳನ್ನು ಮೆಲುಕು ಹಾಕಿಕೊಂಡು, ಸಹಕರಿಸಿದ ಎಲ್ಲರಿಗೂ ಕೃತಜ್ಞತೆ  ಸಲ್ಲಿಸಿದರು. ನಿಕಟ ಪೂರ್ವ ಕಾರ್ಯದರ್ಶಿ ರೊ. ಹೊನ್ನಯ್ಯ ಶೆಟ್ಟಿಗಾರ್ ಕಳೆದ ವರ್ಷದ ವರದಿಯನ್ನು ವಾಚಿಸಿದರು. ನೂತನ ಕಾರ್ಯದರ್ಶಿ ವಿಷ್ಣುಮೂರ್ತಿ ಸರಳಾಯ ವಂದಿಸಿದರು. ರೊ. ಸುಧಾಕರ್ ಶೆಣೈ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!