ಕಾರ್ಕಳ: ಫಸ್ಟ್ ನೈಟ್ಗೆ ಮದುಮಗನಿಗೇ ಬಿತ್ತು ಸೀಲ್!
ಉಡುಪಿ: ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ನವ ವಿವಾಹಿತ ಜೋಡಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.
ಮದುಮಗ ನಾಲ್ಕು ಗೋಡೆಯ ನಡುವೆ ಲಾಕ್ ಆಗಿರುವ ಘಟನೆ ಕಾರ್ಕಳ ತಾಲೂಕಿನಲ್ಲಿ ನಡೆದಿದೆ.
ಇಲ್ಲಿನ ಬೋಳ ಗ್ರಾಮದ ನವ ವಿವಾಹಿತ ಮತ್ತು ಮದುವೆಯಲ್ಲಿ ಭಾಗವಹಿಸಿದ್ದ ೨೬ ಮಂದಿಗೆ ಹೋಂ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಜಿಲ್ಲೆಯ ಗಡಿ ಸಂಪೂರ್ಣ ಬಂದ್ ಮಾಡಿದ್ದರೂ ಒಳದಾರಿಯಿಂದ ಪೊಲೀಸ್ ಕಣ್ಣು ತಪ್ಪಿಸಿ ಮಂಗಳೂರಿನಿಂದ ಜನರು ಉಡುಪಿಗೆ ಬರುತ್ತಿದ್ದಾರೆ.
ಮಂಗಳೂರನಲ್ಲಿ ಖಾಸಗಿ ಉದ್ಯೋಗಿಯಾಗಿರುವ ಮದುಮಗ, ಕಾಪುವಿನ ಕುತ್ಯಾರಿನಲ್ಲಿ ಮದುವೆಯಾಗಿದ್ದರು. ಮದುವೆ ಮುಗಿಸಿ ಸಂಜೆ ಮನೆಗೆ ಬಂದ ವಿವಾಹಿತನಿಗೆ ಕ್ವಾರಂಟೈನ್ ಸೀಲ್ ಹಾಕಿ ೨೮ ದಿನಗಳ ಗೃಹಬಂಧನಕ್ಕೆ ಒಳಪಡಿಸಲಾಗಿದೆ.
ಮದುವೆಯ ಮೊದಲ ರಾತ್ರಿಯೇ ಹೋಮ್ ಕ್ವಾರಂಟೈನ್ ಹಾಕಿದ್ದು, ನವಜೋಡಿಗೆ ನಿರಾಶೆಯಾಗಿದೆ. ಮದುಮಗಳನ್ನ ಮನೆ ತುಂಬಿಸಿಕೊಳ್ಳಬೇಕೆನ್ನೂವಷ್ಟರಲ್ಲಿ ಜಗಲಿಯಲ್ಲಿ ಕಾದುಕುಳಿತಿದ್ದ ಆಶಾ ಕಾರ್ಯಕರ್ತೆಯರು ಕ್ವಾರಂಟೈನ್ ಮಾಡಲು ಸಿದ್ಧರಾಗಿದ್ದು, ಮದುವೆ ಮನೆಯವರ ಆತಂಕಕ್ಕೆ ಕಾರಣವಾಗಿತ್ತು.