ಕಾಪು: ಅಕ್ರಮವಾಗಿ 3 ಲಾರಿಗಳಲ್ಲಿ ಸಾಗಿಸುತ್ತಿದ್ದ 55ಕ್ಕೂ ಹೆಚ್ಚು ಗೋವುಗಳ ರಕ್ಷಣೆ
ಕಾಪು: ಅಕ್ರಮವಾಗಿ ಕೇರಳಕ್ಕೆ ಮೂರು ಲಾರಿ ಸಾಗಿಸುತ್ತಿದ್ದ 55 ಕ್ಕೂ ಹೆಚ್ಚು ಅಕ್ರಮ ಜಾನುವಾರುಗಳನ್ನು ಕಾಪು ಪೊಲೀಸರು ಇಂದು ಪೊಲಿಪು ಬಳಿ ವಶಕ್ಕೆ ಪಡೆದಿದ್ದಾರೆ. ಬೆಳಗ್ಗೆ 9 ಗಂಟೆಗೆ ಕಾಪು ಪೋಲಿಸರಿಗೆ ದೊರೆತ ಖಚಿತ ಮಾಹಿತಿಯ ಅನ್ವಯ ಪೊಲಿಪು ಮಸೀದಿ ಬಳಿ ಕೇರಳ ನೋಂವಣಿಯ 3 ಲಾರಿಗಳನ್ನು ತಡೆದು ಪರಿಶೀಲಿಸಿದಾಗ 55 ಕ್ಕೂ ಹೆಚ್ಚು ಗೋವುಗಳನ್ನು ಕಸಾಯಿಖಾನೆ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಗೋವುಗಳನ್ನು ಹಲಸಿನಕಟ್ಟೆ ಬಳಿ ಲಾರಿಯಿಂದ ಇಳಿಸಲಾಗುತ್ತಿದ್ದು ಸ್ಥಳೀಯರು ಮತ್ತು ಕಾಪು ಪೊಲೀಸರು ಇವುಗಳ ಆರೈಕೆ ಮಾಡುತ್ತಿದ್ದಾರೆ.ಕಾಪು ಪೋಲಿಸ್ ಠಾಣೆಯ ಬಳಿ ನೂರಾರು ಸಾರ್ವಜನಿಕರು ಮತ್ತು ಬಜರಂಗದಳದ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದ್ದು, ಅಕ್ರಮವಾಗಿ ಸಾಗಿಸುವ ಗೋವು ಸಾಗಟಗಾರರಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.