ಕಂಚುಳಿ (ಹೇರಳೇಕಾಯಿ) ಚಟ್ನಿ ಪುಡಿ
ಬೇಕಾಗುವ ಸಾಮಾಗ್ರಿ:- ಉಪ್ಪಿನಲ್ಲಿ ಹಾಕಿದ ಕಂಚುಳಿ 1/4ಕಪ್
ಉದ್ದಿನಬೇಳೆ:-2tsp
ಕೊತ್ತಂಬರಿ ಬೀಜ-2tsp
ಮೆಂತೆ-1/4tsp
ಒಣಮೆಣಸು:-6/7
ತುಪ್ಪ:-2tsp
ತೆಂಗಿನ ತುರಿ:-1/4ಕಪ್
ಮಾಡುವ ವಿಧಾನ:- ಮೊದಲಿಗೆ ಕಂಚುಳಿಯನ್ನು ತುಪ್ಪದಲ್ಲಿ ಚೆನ್ನಾಗಿ ಹುರಿದಿಡಿ ಇನ್ನೊಂದು ಬಾಣಲೆಗೆ ಚೂರು ಎಣ್ಣೆ ಹಾಕಿ ಅದರಲ್ಲಿ ಮೆಣಸು, ಕೊತ್ತಂಬರಿ,ತೆಂಗಿನ ತುರಿ ಉದ್ದಿನಬೇಳೆ ಮೆಂತೆ ಯನ್ನು ಕೆಂಬಣ್ಣ ಬರುವವರೆಗೂ ಹುರಿಯಿರಿ ನಂತರ ಮೊದಲೇ ಹುರಿದಿಟ್ಟ ಕಂಚುಳಿಯನ್ನು ಸೇರಿಸಿ ಮಿಕ್ಸಿಯಲ್ಲಿ ನೀರು ಹಾಕದೇ ರುಬ್ಬಿ ತೆಗೆದರೆ ರುಚಿ. ರುಚಿಯಾದ ಚಟ್ನಿ ರೆಡಿ
ಪವಿತ್ರ ರಾವ್, ಬ್ರಹ್ಮಾವರ