ಕಾಲಚಕ್ರ

ಅದೊಂದು ಸುಂದರ ಸಂಜೆ ನನ್ನ ಶಾಲಾ ಚಟುವಟಿಕೆಯನ್ನು ಮುಗಿಸಿ ಬರುತ್ತಿದ ದಾರಿಯಲ್ಲಿ ತಂದೆಯ ಆಗಮನ. ಅವರು ಸಿಕಿದಾಕ್ಷಣ, ಅವರೊಂದಿಗೆಯೆ ಮನೆಗೆ ತೆರಳಿದೆ. ನನಗೋಸ್ಕರವೇ ಕಾಯುತ್ತಿದ್ದ ನನ್ನ ಅಮ್ಮನ ಮೊಗದ ಸಂತಸ ನೋಡಿ, ಅವರೆಡೆಗೆ ಹೋಗಿ ಕೇಳಿದೆ, “ಅಮ್ಮ, ಕಡೆವರೆಗೂ ಕೂಡ ನನಗಾಗಿ ಹೀಗೆ ಕಾಯುವೆಯ?” ಎಂದು. ಅಮ್ಮ ಮುಗುಳುನಗೆಯಿಂದ ಹೇಳಿದರು, “ಸಮಯ ಬಂದಾಗ ನಿನಗೆ ಅನುಭವಕ್ಕೆ ಬರುತ್ತದೆ”, ಎಂದು.

ಗೊಂದಲಗೊಂಡ ಮನಸ್ಸಿನೊಂದಿಗೆ, ಅಜ್ಜಿ ಇದ್ದಲ್ಲಿ ಹೋದೆ. ಆಗ ಅವರು ಪಕ್ಕದ ಮನೆಯ ಅಜ್ಜಿಯೊಂದಿಗೆ ಮಾತನಾಡುವುದನ್ನು ಕೇಳಿಸಿಕೊಂಡೆ. ಅದ್ಯಾರೋ ಒಬ್ಬ ವ್ಯಕ್ತಿ ತನ್ನ ತಂದೆತಾಯಿಯನ್ನು ನಡುರಸ್ತೆಯಲ್ಲಿ ಬಿಟ್ಟು ಹೋದವನ ಬಗ್ಗೆ ಚರ್ಚೆ ಆಗ ನನ್ನ ಅಜ್ಜಿ ಹೇಳಿದ ಮಾತು, “ಹೋಗ್ಲಿ ಬಿಡ್ರಿ ಮಾಡಿದೋರ ಪಾಪ ಆಡಿದೋರ ಬಾಯಿಗೆ, ನಮಗೆ ಯಾಕೆ ಚಿಂತೆ ಕಾಲ ಬಂದಾಗ ಅವನೇ ಅನಿಭವಿಸುತ್ತಾನೆ” ಎಂದು. ಅಜ್ಜಿಯ ಈ ಮಾತು ನನ್ನ ಮನಸ್ಸಿನ ಗೊಂದಲವನ್ನು ಇನ್ನು ಹೆಚ್ಚಿಸಿತು. ಅದೇ ಸಮಯಕ್ಕೆ ಅಮ್ಮ ಬಿಸಿ-ಬಿಸಿಯಾದ ಬೋಂಡವನ್ನು ತಂದುಕೊಟ್ಟರು. ಕೈಗೆ ಕೊಟ್ಟು, “ಮಗಳೇ ಇನ್ನು ಸ್ವಲ್ಪ ಸಮಯ ಅಷ್ಟೇ ಇನ್ನು ಮುಂದೆ ನೀನು ಇದನ್ನೆಲ್ಲಾ ಕಲಿಯಬೇಕು, ನನ್ನ ಹಾಗೆ ಆದಾಗ, ನಿನ್ನ ಸಮಯ ಶುರುವಾಗುತ್ತದೆ”. ನನ್ನ ಮನಸ್ಸಿನ ಅನೇಕ ಪ್ರಶ್ನೆಗಳ ಪಟ್ಟಿಗೆ ಇದೂ ಕೂಡ ಸೇರಿತು. ಇದರ ಬಗ್ಗೆ ಚಿಂತಿಸುತ್ತಳೆ ಅಮ್ಮನ ಮಡಿಲಲ್ಲಿ ಮಲಗಿದೆ.

ಮರುದಿನ ಬೆಳಕಾಯಿತು ಅದೇ ರೇತಿಯಾದ ದೈನಂದಿನ ಚಟುವಟಿಕೆಗಳನ್ನು ಮಾಡತೊಡಗಿದೆ ಇನ್ನೇನು ಶಾಲೆಗೆ ತೆರಳಬೇಕು ಆಗ ಆ ಪಕ್ಕದ ಮನೆಯ ಅಜ್ಜಿ ಬಂದು, “ಸುಮತಿಯಮ್ಮ ನೆನ್ನೆ ಆ ಹುಡುಗನ ಬಗ್ಗೆ ಮಾತಾಡಿದ್ದೆಲ್ಲ, ಆ ಹುಡುಗನಿಗೆ ಆಕ್ಸಿಡೆಂಟ್ ಆಗಿ ಅಲ್ಲೇ ಸತ್ತೋದನಂತೆ” ಎಂದು ನನ್ನ ಅಜ್ಜಿಯ ಹತ್ತಿರ ಹೇಳಿದರು. ಅದಕ್ಕೆ ಅಜ್ಜಿ ಒಂದೇ ಮಾತಿನಲ್ಲಿ”ಅವನ ಸಮಯ ಬಂದಿತ್ತು ಅನ್ಸುತ್ತೆ, ಅದಕ್ಕೆ ಸತ್ತ ಬಿಡಿ” ಅಂತ ಹೇಳಿದರು.  

 ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದ್ದ ನಾನು, ಶಾಲೆಗೆ ಹೋಗಿ ನನ್ನ ಜಾಗದಲ್ಲಿ ಕುಳಿತುಕೊಂಡೆ ವಿಜ್ಞಾನದ ಶಿಕ್ಷಕಿ ಒಳಗೆ ಬಂದರು ಒಂದು ಪ್ರಾಣಿಯ ಹುಟ್ಟು ಹಾಗು ಸಾವಿನ ನಡುವಿನ ಎಲ್ಲ ರೀತಿಯ ಆಗುಹೋಗುಗಳು, ಬದಲಾವಣೆಗಳನ್ನು ಕಲಿಸುತ್ತಿದ್ದರು. ಆಗ ಅವರು, “ಮಕ್ಕಳೇ ಈ ಪ್ರಾಣಿ ನೋಡಿ, ಹುಟ್ಟಿನಿಂದ ಸಾವಿನವರೆಗೂ ತಾನನು ತಾನು ಜಗತ್ತಿನ ನಿಯಮಗಳಿಗೆ ತೊಡಗಿಸಿಕೊಳ್ಳುತ್ತದೆ ಇದೇ ಈ ಪ್ರಾಣಿಯ ಕಾಲಚಕ್ರ. ಸಮಯ ಹೋದಂತೆ ತಾನು ಹುಟ್ಟಿ, ಜನುಮನೀಡಿ ಮತ್ತೆ ಸಾಯುತ್ತದೆ. ಅದರ ಮರಿಯುಕೂಡ ಇದೇ ರೀತಿಯಾದಂತ ಚಕ್ರವನ್ನು ಪಾಲಿಸುತ್ತದೆ” ಎಂದರು.

ಇದನ್ನು ಕೇಳಿ ನಾನು, “ಹಾಗಾದರೆ ನಮ್ಮ ಹುಟ್ಟು ಸಾವು ಒಂದು ಸಮಯಕ್ಕೆ ಅನುಗುಣವಾಗಿದ್ದ ಕಾಲಚಕ್ರ, ಬೆಳ್ಳಿಗೆ ಅಜ್ಜಿ ಹೇಳಿದಂತ ಆ ಹುಡುಗನ ಸಾವು ಬಹುಷ ಆತನ ಕಾಲಚಕ್ರದ ಅಂತ್ಯವಿರಬಹುದೇನೋ” ಎಂದೆಲ್ಲಾ ಯೋಚಿಸಿದೆ.

ಇಂತಹ ಮನಸ್ಥಿತಿಯಿಂದ, ನನ್ನ ಶಾಲಾ ಜೇವನವನ್ನು ಮುಗಿಸಿ ಕಾಲೇಜಿನತ್ತ ಮುಖಮಾಡಿದೆ.

ಒಂದು ದಿನ ಮನೆಯಲ್ಲಿ ಸ್ವಲ್ಪ ಜಗಳ ಶುರುವಾಯಿತು. ಯಾವತ್ತು ದೊಡ್ಡವರಿಗೆ ಎದುರು ಉತ್ತರ ಕೊಡದ ನಾನು, ಆ ದಿನ ಕಾಲೇಜಿನ ಒತ್ತಡದಲ್ಲಿ ಅಜ್ಜನ ಮೇಲೆ ಸ್ವಲ್ಪ ರೇಗಿದೆ. ಪಾಪ ಹಿರಿಜೀವ, ಅವರಲ್ಲಿಯೂ ತಾಳ್ಮೆ ಕಡಿಮೆ. ಅವರು ಕೂಡ ಸ್ವಲ್ಪ ಸಿಟ್ಟಿನಲ್ಲಿ, “ನಿನಗೆ ಕಾಲೇಜಿಗೆ ಹೋಗುದಂತ ಗತ್ತು ಜಾಸ್ತಿಯಾಗಿದೆ, ಇರಲಿ ಮೇಲಿದೋನು ಸಮಯ ಬಂದಾಗ ಕೆಳಗೆ ಬರಲೇಬೇಕು ಅನುಭವಿಸುತ್ತೀಯ ನೋಡು”, ಎಂದರು. ಹಿರಿಯರು ನನ್ನಲ್ಲಿ ರೇಗಿದರು ಅನ್ನೋದಕ್ಕಿಂತ, ಅವರು ಹೇಳಿದ ಮಾತು ನನ್ನಲ್ಲಿ ಕುತೂಹಲ ಮುಡಿಸಿತು. ಈಗ ಮಾಡಿದ ತಪ್ಪು ಮುಂದೆ ನನಗೆ ಕಂಟಕ ತರುವುದೆ? ಈಗ ಮೆರೆಯುತ್ತಿರುವ ನಾನು ಮುಂದೆ ಕೆಳಗೆ ಬೀಳುತೇನೆ ಎಂದರೆ ಇದರ ಅರ್ಥವೇನು? ಇಂತಹ ಹತ್ತು ಹಲವಾರು ಪ್ರಶ್ನೆಗಳನ್ನು ತಲೆಯಲ್ಲಿ ಇರಿಸಿ, ನನ್ನ ತಂದೆಯ ಬಳಿ ಹೋಗಿ ನಡೆದದ್ದೆಲ್ಲವನ್ನು ಅವರಲ್ಲಿ ಹೇಳಿದೆ.

ಆಗ ಅವರು ಹೇಳಿದರು, “ಮಗಳೇ ಜೇವನ ಎಂಬುದು ಆಗುಹೋಗುಗಳ ನಿಯಮಗಳ ಆಧಾರಿತ ಒಂದು ಸಮಾಯ ಪಟ್ಟಿ ಅಷ್ಟೇ ಅದು ನಮ್ಮನ್ನು ಹೇಗೆ ಹೋಗಬೇಕೂ ಹಾಗೆ ಕರೆದೊಯುತ್ತದೆ ಅನ್ನುವುದಕ್ಕಿಂತ, ನಮ್ಮ ಜೇವನದಲ್ಲಿ ಆಗುವ ಎಲ್ಲಾಅನುಭವಗಳ, ಅಥವ ಮಾಡುವಂತ ಪಾಪ ಪುಣ್ಯ ಕೆಲಸಗಳ ಅನುಗುಣವಾಗಿ ನಮ್ಮಲ್ಲಿ ಬದಲಾವಣೆಯನ್ನು ತರುತ್ತದೆ. ಒಬ್ಬ ಪುಣ್ಯಾತ್ಮ ಅಹಂಕಾರದಿಂದ ಮೆರೆಯುತಿದ್ದಾನೆ ಎಂದು ತಿಳಿದಿದ್ದರೆ, ಮುಂದೊಂದು ದಿನ ಅವನಿಗೆ ಪ್ರಾಯಶ್ಚಿತ್ತ ಕಟ್ಟಿಟ್ಟ ಬುತ್ತಿ. ಹೇಗೆ ಒಂದು ಚಕ್ರದಲ್ಲಿ ಮೇಲಿನ ತುದಿ ಕೆಳಗೆ, ಕೆಳಗಿನ ತುದಿ ಮೇಲೆ ಸಮಯದ ಆಧಾರದ ಮೇಲೆ ಉರುಳುವಂತೆ ಇಂದು ದುಷ್ಟರಿಗೆ ಸಮಯವಾದರೆ ಒಳ್ಳೆಯವರೆಗೆ ಇದು ಸಮಯವಲ್ಲ, ತಾಳ್ಮೆಯಿಂದ ಕಾದುಕುಳಿತಲ್ಲಿ ಚಕ್ರವು ಉರುಳಿ  ಒಳ್ಳೆಯವರ ಸಮಯ ಬೆಳಕಿಗೆ ಬರಲೇಬೇಕು.  ಅಂದು ಆ ಹುಡುಗನ ಸಮಯ, ತಾಯಿತಂದೆಯನ್ನು ರಸ್ತೆಯಲ್ಲಿ ಬಿಸಾಡಿದ. ಅದು ಆದ ನಂತರ ಅವನ ಸಮಯ ಬಂದಾಗ, ತಾನೆ ಕಾಲಚಕ್ರದ ತುದಿಗೆ ಬಲಿಯಾದ ಅಷ್ಟೇ. ನೀನು ಇದನ್ನೆಲ್ಲ ಚಿಂತಿಸಬೇಡ ಅಜ್ಜನಲ್ಲಿ ಕ್ಷಮೆಕೇಳಿ ಹೋಗು ಅಭ್ಯಾಸ ಮಾಡು” ಎಂದರೂ.

ಹೇಳಿದ ಒಂದೊಂದು ಮಾತನ್ನುತಲೆಯಲ್ಲಿಟ್ಟುಕೊಂಡೆ ಕಾಲೇಜೆಗೆ ತೆರಳಿದೆ ಕನ್ನಡ ಭಾಷೆಯ ಪಾಠ ಅದನ್ನು ಕೇಳುತಿರುವಾಗಲೇ ನನ್ನನ್ನು ಇನ್ನೋರ್ವ ಶಿಕ್ಷಕಿ ಕರೆದರು, ಕರೆದು ಒಂದು ಸ್ಪರ್ಧೆಯಿದೆ ನೀನು ಕೂಡ ಭಾಗವಹಿಸು ಎಂದು ಹೇಳಿದರು. ನಾನು ಹೋಗಿ ಅಲ್ಲಿ ಭಾಗವಹಿಸಿ ಬಂದೆ, ನನ್ನ ಮೇಲಿನ ಆತ್ಮವಿಶ್ವಾಶದಿಂದ ನನಗೂ ಒಂದು ಬಹುಮಾನವಿರಬಹುದು ಎಂಬ ಕಲ್ಪನೆ. ಆದರೆ ಅಲ್ಲಿ ಪ್ರಶಸ್ತಿ ವಿತರಣೆಯಾಗುವಾಗ ನನ್ನ ಹೆಸರಿಲ್ಲ! ಬೇರೆಯವರಿಗಿಂತ ಚೆನ್ನಾಗಿ  ಭಾಗವಹಿಸಿದ್ದೆ ಎಂದು ಹೇಳಿದ ಎಲ್ಲರ ಮಧ್ಯೆ, ಶ್ಕ್ಷಕಿಯೊಬ್ಬರು ನನ್ನ ಬೇಸರವನ್ನು ಕಂಡು, “ನೋಡು ನಿನ್ನ ಪ್ರಯತ್ನ ನೀನು ಮಾಡಿದ್ದೀಯ, ಅವರ ನಿರ್ಧಾರ ತಪ್ಪು ಹೌದು, ಆದರೆ ಅದನ್ನು ವಿರೋದಿಸಲು ನಿನ್ನ ಯಾರು? ಮುಂದೆ ಅವರ ಸಮಯ ಬಂದಾಗ ಅವರೇ ಅನುಭವಿಸುತ್ತಾರೆ, ನೀನು ಉತ್ತಮ ಸ್ಥಾನಕ್ಕೆ ಹೋದಾಗ ಅವರೇ ಪಶ್ಚಾತಾಪ ಪಡುತ್ತಾರೆ ಬಿಡು” ಎಂದು ಹೇಳಿದರು. ಈ ಮಾತುಗಳನ್ನು ಕೇಳಿದಾಕ್ಷಣ, ನನಗೆ ನನ್ನ ತಂದೆಯ ವಚನಗಳು ನೆನಪು ಬಂದಿತು. ನನ್ನ ತಂದೆ ಹಾಗು ಶಿಕ್ಷಕಿ ಇಬ್ಬರು ಕೂಡ ಹೇಳಿದ ಅರ್ಥ ಒಂದೇ ಆದರೆ ಮುಖ ಬೇರೆ ಬೇರೆ.    

ಆ ಸ್ಪರ್ಧೆಯ ಘಟನೆ ನೆಡೆದ ಕೇವಲ ಎರಡೇ ತಿಂಗಳಲ್ಲಿ ನನಗೆ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂದಿತು. ಆ ಕ್ಷಣದ ಸಂತಸ ಹಿಂದಿನ ನನ್ನ ಸೋಲಿಗಿಂತ ಹತ್ತು ಪಟ್ಟು ಜಾಸ್ತಿ ಭಾರವಾಗಿತ್ತು, ಕಾರಣ ನನ್ನ ತಾಳ್ಮೆ, ನನ್ನ ಕಾಲದ ಆಗಮನದ ತಾಳ್ಮೆ.

ಒಂದು ಕಾಲದಲ್ಲಿ ಬೇರೆಯವರ ಮುಂದೆ ಅವಮಾನ ಮಾಡಿದಂತ ಆ ಜನರ ಮುಂದೆಯೇ ನಾನು ತಲೆಯೆತ್ತಿ ನಿಲ್ಲುವುದರ ಹಿಂದೆ ಒಂದು ಶಕ್ತಿ ಇದೇ, ಅದೇ ಕಾಲಚಕ್ರದ ಅಗಾಧವಾದ ಪ್ರಬಲ ಶಕ್ತಿ. ಚಿಕ್ಕಂದಿನಿಂದಲೂ ಬರೀ ಸೋಲುಗಳನ್ನೇ ನೋಡುತ್ತಿದ್ದಂತ ನಾನು  ಜೀವನದಲ್ಲಿ ಒಂದೊಂದೇ ಹೆಜ್ಜೆ ಮುಂದೆ ಬರತೊಡಗಿದೆ. ಪ್ರಾಯಶಃ ಅಂದು ನನ್ನ ವಿಜ್ಜಾನದ ಶಿಕ್ಷಕಿ ಹೇಳಿದ್ದು ಕೂಡ ಸತ್ಯ ನಮ್ಮ ಹುಟ್ಟು ಸಾವಿನ ಮಧ್ಯದ ಜೇವನ ಚಕ್ರದಲ್ಲಿ ಇಂತಹ ಏಳು ಭೀಲುವಿನ ಮಧ್ಯದ ಜೇವನದ ಸಮಯವೇ “ಕಾಲಚಕ್ರ”.

ಅವರವರೂ ಮಾಡಿದ ಕರ್ಮಾ ಪಾಪ ಕೃತ್ಯಗಳನ್ನು ಅವರು ಅನುಭವಿಸದೆ ಸಾಯುವುದಿಲ್ಲ. ಒಮ್ಮೆ ಪೆಟ್ಟು ತಿಂದವ ಮುಂದೆ ಮೆರೆಯಲೇ ಬೇಕು, ಒಮ್ಮೆ ಮೆರೆದವ ಮುಂದೆ ಅವನ ಕರ್ಮಕ್ಕೆ ಆಗುಣವಾಗಿ ಅನುಭವಿಸಲೇಬೇಕು ಇಂತಹ ಸಾಧನೆಗಳ ಮದ್ಯೆಯೂ ನನ್ನದೊಂದು ಕೊರಗು ಅದೇ ಹಾ! ಅಜ್ಜನಿಗೆ ಎದುರು ಮಾತನಾದೆನಲ್ಲ ಎಂದು. ಕೊರಗು ಇದ್ದಲ್ಲಿ ಜೀವನವೆಲ್ಲ ಎಂತಹ ಸಂತಸವಿದ್ದರೂ ಅದು ಶೂನ್ಯ ಅಂದಿನ ಅವರ ಆ ಮಾತು, ಎಂದು ನಿಜವಾಗಿ ನಾನು ಅನುಭವಿಸುತ್ತಿದ್ದೇನೆ, ನಾನು ಕೂಡ  ಕಾಲಚಕ್ರದ ಬಲಿಯೇ ಸರಿ.

ನನಗೆ ವಯಸ್ಸು ಇಪ್ಪತ್ತೆರಡು, ನನ್ನ ಇನ್ನು ಬಹಳಷ್ಟು ಕಾಲಚಕ್ರ ಉರುಳಿಸಬೇಕಿದೆ. ಆದರೆ ಇದು ನನ್ನ ಇಲ್ಲಿಯವರೆಗಿನ ಸಣ್ಣ ಕಥೆ ನನ್ನ ಮನದಾಳದ ಕಥೆ. ಇರುವಷ್ಟು ದಿನ ಒಳ್ಳೆಯದನ್ನೇ ಮಾಡಿ ನಿಮ್ಮ ಹಾದಿಯೆಲ್ಲ ಒಳ್ಳೆಯದೇ ಬಿಂಬಿಸುತ್ತದೆ ಜೇವನ ಖುಷಿಯಾಗಿರುತ್ತದೆ. ಇದೇ ನನ್ನ ಕಾಲಚಕ್ರದ ಪುಟ್ಟ ಮಾದರಿ.      

                  -ಮೇಘ ಎಸ್ ಸಾಮಗ

Leave a Reply

Your email address will not be published. Required fields are marked *

error: Content is protected !!