ಕಡೆಕಾರು ಚೈತನ್ಯ ಸೋಶಿಯಲ್ ವೆಲ್ಫೇರ ಫೌಂಡೇಶನ್: ದೀಪಾವಳಿ ಆಚರಣೆ
ಕಡೆಕಾರು – ” ಬೆಳಕಿನಿಂದ ಕೂಡಿದ ಕಣ್ಣಿನಿಂದ ನೋಡಿದಾಗ ಮಾತ್ರ ಪ್ರಪಂಚದ ಒಳ್ಳೆಯತನ ಕಾಣುತ್ತದೆ ಆದ್ದರಿಂದ ಪ್ರಪಂಚದ ಎಲ್ಲರ ಬದುಕಿಗೆ ಕ್ಷೇಮವಾಗಲಿ” ಎಂಬುದಾಗಿ ಎನ್. ಆರ್. ದಾಮೋದರ ಶರ್ಮಾ ರವರು ಕಡೆಕಾರು ಚೈತನ್ಯ ಸೋಶಿಯಲ್ ವೆಲ್ಫೇರ ಫೌಂಡೇಶನ್ ಮತ್ತು ಲಯನ್ಸ್ ಕ್ಲಬ್ ಉಡುಪಿ ರಾಯಲ್ ವತಿಯಿಂದ ಕಡೆಕಾರಿನಲ್ಲಿ ಬೆಳಕಿನ ಹಬ್ಬ ದೀಪಾವಳಿ ಆಚರಣೆ ಸಂದರ್ಭದಲ್ಲಿ ಶುಭ ಹಾರೈಸಿದರು . ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ ಬಾಬು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ದೀಪಾವಳಿಯ ಕಾರ್ಯಕ್ರಮವನ್ನು ಹಮ್ಮಿಕೊಂಡದ್ದಕ್ಕಾಗಿ ಶ್ಲಾಘಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರು ಮಾತನಾಡಿ ಎಂಬ ಹಾರೈಕೆಯೊಂದಿಗೆ ನಾವು ದೀಪವನ್ನು ಹಚ್ಚೋಣ ಎಂದರು.
ಈ ಸಂದರ್ಭದಲ್ಲಿ ಸಮಾಜಕ್ಕೆ ತಮ್ಮ ಕೊಡುಗೆಯನ್ನು ನೀಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾಜ ಸೇವಕಿ ನಿರುಪಮಾ ಪ್ರಸಾದ ಶೆಟ್ಟಿ , ವನಜಾ ಜಯಕರ್, ವೈದ್ಯ ಡಾ. ಎ. ರವೀಂದ್ರನಾಥ ಶೆಟ್ಟಿ ಮತ್ತು ಪರಿಸರವಾದಿ ಜೋಸೆಫ್ ಜಿ. ಎಮ್. ರೆಬೆಲ್ಲೋ ಅವರಿಗೆ ಸೇವಾ ಚೈತನ್ಯ – 2019, ರಂಗ ಹಾಗೂ ಕಿರುತೆರೆ ನಟ ಪ್ರದೀಪ್ ಚಂದ್ರ ಕುತ್ಪಾಡಿ ಅವರಿಗೆ ಕಲಾ ಚೈತನ್ಯ-2019 ಮತ್ತು ಈಜು ಪಟು ಗಂಗಾಧರ ಜಿ. ಕಡೆಕಾರು ಅವರಿಗೆ ಕ್ರೀಡಾ ಚೈತನ್ಯ – 2019 ಸನ್ಮಾನದೊಂದಿಗೆ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಕಡೆಕಾರು ಗ್ರಾಮ ಪಂಚಾಯತ್ ಅಧ್ಯಕ್ಷ ರಘುನಾಥ್ ಕೋಟ್ಯಾನ್, ಕಾತಿ9ಕ ಸಮೂಹ ಸಂಸ್ಥೆಯ ಹರಿಯಪ್ಪ ಕೋಟ್ಯಾನ್, ಜಯಕರ ಶೆಟ್ಟಿ ಇಂದ್ರಾಳಿ, ಸಂಜೀವ ಟಿ. ಕರ್ಕೇರಾ, ಜೇಸನ್ ಡಯಾಸ್, ಮೊಹಮ್ಮದ್ ಮೌಲ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ದಿವಾಕರ ಕುಂದರ್, ಎನ್. ಎಮ್. ಹೆಗ್ಡೆ, ವಿಶ್ವನಾಥ್ ಶೆಟ್ಟಿ, ನೇರಿ ಕರ್ನೇಲಿಯೋ, ಸತೀಶ್ ಶೆಟ್ಟಿ, ಗೋಪಾಲ್ ಕೆ, ಲಯನ್ಸ್ ಕ್ಲಬ್ ಉಡುಪಿ ರಾಯಲ್ ಅಧ್ಯಕ್ಷ ದಯಾನಂದ ಕೋಟ್ಯಾನ್, ಕಾರ್ಯದರ್ಶಿ ಡಾ. ಸಂತೋಷ ಕುಮಾರ್ ಬೈಲೂರು, ಡಾ. ಅಶೋಕ್ ಎಚ್, ಕಿಶೋರ್ ಕೆ, ಸವಿತಾ ಮೆಂಡನ್, ಸುರೇಕಾ ಶೆಟ್ಟಿ,ಜತಿನ್ ಕಡೆಕಾರ್, ಚೇತನ್ ಸುವರ್ಣ, ಯತೀಶ್, ಸದಾಶಿವ ಪೂಜಾರಿ, ರಾಕೇಶ್, ರಾಜೇಶ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.
ಚೈತನ್ಯ ಫೌಂಡೇಶನ್ ನ ಪ್ರವರ್ತಕ ರಾದ ಸುನೀಲ್ ಸಾಲ್ಯಾನ ಕಡೆಕಾರ್ ಸ್ವಾಗತಿಸಿದರು, ದಿನೇಶ್ ಕೆ. ಪ್ರಾರ್ಥನೆ ಗೈದರು, ವಿನ್ಸೆಂಟ್ ಡಿಸೋಜ ವಂದಿಸಿದರು, ಜಯರಾಮ ಆಚಾರ್ಯ ಕೆ. ಕಾರ್ಯಕ್ರಮ ನಿರೂಪಿಸಿದರು.