ಬಿಜೆಪಿಗೆ ಜೆಜೆಪಿ ಬೆಂಬಲ: ಹರ್ಯಾಣದಲ್ಲೂ ಅರಳಲಿದೆ ಕಮಲ?

ಹರ್ಯಾಣ ; ಅತಂತ್ರ ವಿಧಾನಸಭೆ ಫಲಿತಾಂಶ ಪ್ರಕಟವಾಗಿದ್ದ ಹರ್ಯಾಣದಲ್ಲಿ ಯಾರು ಸರ್ಕಾರ ರಚನೆ ಮಾಡುತ್ತಾರೆ ಎಂಬ ಕುತೂಹಲಕ್ಕೆ ಬಹುತೇಕ ಉತ್ತರ ಸಿಕ್ಕಿದೆ. 

90 ವಿಧಾನಸಭಾ ಸದಸ್ಯಬಲ ಹೊಂದಿದ್ದ ಹರ್ಯಾಣದ ವಿಧಾನಸಭೆಯಲ್ಲಿ 40 ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಅಧಿಕಾರ ಹಿಡಿಯುವುದಕ್ಕೆ ಅಗತ್ಯವಿದ್ದ 45 ಶಾಸಕರ ಸಂಖ್ಯಾಬಲಕ್ಕೆ ಕೊರತೆ ಎದುರಾಗಿ ಯಾರೇ ಸರ್ಕಾರ ರಚನೆ ಮಾಡಬೇಕಾದರೂ ಪಕ್ಷೇತರರು ಅಥವಾ ಹರ್ಯಾಣದ ಪ್ರಾದೇಶಿಕ ಪಕ್ಷ ಜೆಜೆಪಿಯ ಸಹಕಾರ ಅಗತ್ಯವಾಗಿದೆ. 

ಜೆಜೆಪಿಯ ನಾಯಕ ದುಷ್ಯಂತ್ ಚೌಟಾಲ ಆರಂಭದಲ್ಲಿ ತಮ್ಮನ್ನು ಸಿಎಂ ಮಾಡುವ ಪಕ್ಷಕ್ಕೆ ನಾನು ಬೆಂಬಲ ನೀಡುತ್ತೇನೆ ಎಂದು ಹೇಳಿಕೆ ನೀಡಿದ್ದರು. ಈ ನಡುವೆ ಬಿಜೆಪಿ ಹರ್ಯಾಣದಲ್ಲಿ ಸರ್ಕಾರ ರಚನೆಗೆ ಸಿಕ್ಕ ಯಾವುದೇ ಅವಕಾಶವನ್ನೂ ಬಿಡದೇ ರಾಜಕೀಯ ತಂತ್ರ ಹೆಣೆಯುತ್ತಿದೆ. ಈಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ, ಇತ್ತೀಚಿನ ವರದಿಯ ಪ್ರಕಾರ, ಸರ್ಕಾರ ರಚನೆಗೆ ಜೆಜೆಪಿ ಬಿಜೆಪಿಗೆ ಬೆಂಬಲ ನೀಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ನಡುವೆ ಹರ್ಯಾಣದ ಹಾಲಿ ಸಿಎಂ ಮನೋಹರ್ ಲಾಲ್ ಖಟ್ಟರ್ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡಲಿದ್ದಾರೆ ಎಂಬುದು ಸದ್ಯದ  ಸುದ್ದಿ

Leave a Reply

Your email address will not be published. Required fields are marked *

error: Content is protected !!