ಸರ್ಕಾರ ಉಳಿಸಲು ಕೊಡಗಿನತ್ತ ಜೆಡಿಎಸ್ ಶಾಸಕರು ಪಯಣ..?

ರಾಜ್ಯ ರಾಜಕೀಯದಲ್ಲಿ ನಿಲ್ಲದ ರೆಸಾರ್ಟ್‌ ರಾಜಕಾರಣ   ಜೆಡಿಎಸ್ ಎಲ್ಲಾ  ಶಾಸಕರು  ಕೊಡಗು ರೆಸಾರ್ಟ್‌ಗೆ ಶಿಫ್ಟ್ ಆಗುವ‌ ಸಾಧ್ಯತೆಯಿದೆ ,ಅದಕ್ಕಾಗಿ ಕೊಡಗಿನ 3 ಪ್ರಮುಖ ರೆಸಾರ್ಟ್‌ಗಳನ್ನು ಬುಕ್‌ ಮಾಡಲಾಗಿದೆ

ಕೊಡಗಿನ ರೆಸಾರ್ಟ್‌ನಲ್ಲಿ ಶಾಸಕರನ್ನು ಇಡಲು ಸಿಎಂ‌ ಕುಮಾರ್ ಸ್ವಾಮಿ ಪ್ಲಾನ್ ಮಾಡಿದ್ದು ಇಲ್ಲಿನ  2 – 3 ರೆಸಾರ್ಟ್‌ಗಳಲ್ಲಿ ಶಾಸಕರ ಸೇಫ್ಟಿ ಬಗ್ಗೆ ಖುದ್ದು ಮಾಹಿತಿ ಪಡೆದ ಸಿಎಂ ಎಚ್ಡಿಕೆ. ಕುಶಾಲನಗರ ಸಮೀಪದ 7ನೇ ಹೊಸಕೋಟೆ ಪ್ಯಾಡಿಂಗ್‌ಟನ್ ರೆಸಾರ್ಟ್ ವಿರಾಜಪೇಟೆ ಸಮೀಪದ ಬಿಟ್ಟಂಗಾಲದ ಅಂಬಟ್ಟಿ ರೆಸಾರ್ಟ್

ಮಡಿಕೇರಿ ಸಮೀಪದ ಸಿಂಕೋನದ ಇಬ್ಬನಿ ರೆಸಾರ್ಟ್  ರೆಸಾರ್ಟ್‌ಗಳಲ್ಲಿ ಶಾಸಕರ ಸೇಫ್ಟಿ ಬಗ್ಗೆ ಮಾಹಿತಿ ಪಡೆದ ಸಿಎಂ . ನಿನ್ನೆ ರಾತ್ರಿಯೇ ರೆಸಾರ್ಟ್‌ಗೆ ಬರಬೇಕಿದ್ದ ಪಿರಿಯಾಪಟ್ಟಣ ಶಾಸಕ ಮಾಧ್ಯಮದವರ ಗಮನ ಬೇರೆಡೆ ಸೆಳೆದು ಪ್ಯಾಡಿಂಗ್‌ಟನ್ ರೆಸಾರ್ಟ್ ಸೇರಲು ಪ್ಲಾನ್ಗೌಪ್ಯವಾಗಿ ಪ್ಯಾಡಿಂಗ್‌ಟನ್   ರೆಸಾರ್ಟ್‌ನಲ್ಲೂ  7 ರೂಮ್ಕಾದಿರಿಸಲಾಗಿದೆ. ಆದ್ದರಿಂದಪ್ಯಾಡಿಂಗ್‌ಟನ್ ರೆಸಾರ್ಟ್‌ಗೆ  ಜೆಡಿಎಸ್ ಶಾಸಕರು ಶಿಪ್ಟ್ ಬಹುತೇಕ ಫಿಕ್ಸ್ ಆಗುತ್ತಾರೆ ಎನ್ನಲಾಗಿದೆ.ಇಂದು ಸಂಜೆಗೆ ರೆಸಾರ್ಟ್‌ಗೆ ಸೇರಲಿರುವ ಜೆಡಿಎಸ್ ಶಾಸಕರು

ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಯಾವುದೇ ತೊಂದರೆ ಆಗ ಬಾರದೆಂಬ ಕಾರಣಕ್ಕೆ  ಇನ್ನೂ 2 ರೆಸಾರ್ಟ್‌ಗಳನ್ನು ಇರಿಸಿಕೊಂಡಿರುವ ಕೊಳ್ಳಲು  ಸಿಎಂ ಪ್ಲಾನ್ ಮಾಡಿದ್ದಾರೆ.
ಸಿಎಂ, ಮಾಜಿ ಸಿಎಂ ಇತ್ತೀಚೆಗೆ ಬಂದು ಹೋಗಿದ್ದ ಇಬ್ನಿ ರೆಸಾರ್ಟ್ ಖಾಸಗೀತನಕ್ಕೆ ಹೆಚ್ಚು ಆಧ್ಯತೆ ಇರೋ ಇಬ್ನಿ ರೆಸಾರ್ಟ್, ಅಂಬಟ್ಟಿ ರೆಸಾರ್ಟ್  ಬಗ್ಗೆಯ ಮಾಹಿತಿ ಪಡೆದರು ಎಂದು ತಿಳಿದು ಬಂದಿದೆ.  ಸದ್ಯ 2 – 3 ಆಯ್ಕೆ ಇಟ್ಟುಕೊಂಡು ಸಂಜೆ ಬೆಂಗಳೂರಿಂದ ಹೊರಡಲಿರೋ ಟೀಮ್ರಾತ್ರಿ ಒಳಗೆ ಕೊಡಗಿನ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಆಗಮನ ಸಾಧ್ಯತೆ.

ಕೊಡಗಿನ ಸ್ಥಳೀಯ ಜೆಡಿಎಸ್ ಮುಖಂಡರು, ಪೊಲೀಸರಿಗೂ ಇವರೆಗೂ ಯಾವುದೇ  ಮಾಹಿತಿ ಇಲ್ಲ . ಹಿಂದೆ ರಾಜ್ಯ, ಬಿಬಿಎಂಪಿ ಹಾಗೂ ನೆರೆಯ ರಾಜ್ಯದ ರೆಸಾರ್ಟ್ ರಾಜಕಾರಣಕ್ಕೆ ಸಾಕ್ಷಿಯಾಗಿದ್ದ ಕೊಡಗು ಮತ್ತೆ ರೆರ್ಸಾಟ್ ರಾಜಕಾರಣಕ್ಕೆ ಸುದ್ದಿಯಾಗುತ್ತಿದೆ.

ಕೊಡಗು ಜೊತೆಗೆ ಕೊಡಗು ಮಾರ್ಗವಾಗಿ ಕೇರಳ ಅಥವಾ ಉಡುಪಿಯ ಕಾಪುವಿನ‌ಮೂಳೂರು ರೆಸಾರ್ಟ್‌ ಕೂಡ ಆಯ್ಕೆಯಲ್ಲಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!