ಜೆಸಿಐ ಸಂಸ್ಥೆ ಯುವ ಜನತೆಗೆ ಮಾರ್ಗದರ್ಶನ ನೀಡುತ್ತೆ:ನಾವಡ
ಕುಂದಾಪುರ- ” ಜೆಸಿಐ ಅನ್ನುವ ಸಂಸ್ಥೆ ಅನೇಕ ಯುವ ಜನತೆಗೆ ಮಾರ್ಗದರ್ಶನ ನೀಡುವ ಸಂಸ್ಥೆ ಈ ಸಂಸ್ಥೆಗೆ ಯುವಜನತೆಗಳು ಬಂದು ತಮ್ಮ ವ್ಯಕ್ತಿತ್ವ ವಿಕಸನ ಗೊಳಿಸಿಕೊಳ್ಳಬೇಕು” ಎಂಬುದಾಗಿ ಜೆಸಿಐ ಇಂಡಿಯಾದ ಪೂರ್ವ ರಾಷ್ಟ್ರೀಯ ಉಪಧ್ಯಾಕ್ಷರಾದ ಜೇಸಿ ಸೆನೆಟರ್ ಸದಾನಂದ ನಾವಡರು ಕರೆ ನೀಡಿದರು, ಜೆಸಿಐ ಕುಂದಾಪುರದ ಜೇಸಿ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದ ಅವರು “ಜೆಸಿಐ ಕುಂದಾಪುರ ಈ ಬಾರಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿರುವ ಜೆಸಿಐ ಕುಂದಾಪುರದ ಅಧ್ಯಕ್ಷರ ಕೆಲಸ ಶ್ಲಾಘನೀಯ” ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ದಿನಕರ ಶೆಟ್ಟಿ , ಸಿಂಡಿಕೇಟ್ ಬ್ಯಾಂಕ್ ನ ಪ್ರಬಂಧಕರಾದ ಶಂಕೆರ್ ಕುಂದಾಪುರ, ಲೆಕ್ಕ ಪರಿಶೋಧಕರಾದ ಶಂಕರ್ ನಾಯ್ಕ್, ಜೆಸಿಐ ಕುಂದಾಪುರದ ಪೂರ್ವಾಧ್ಯಕ್ಷರಾದ ಡಾ|ಜಗದೀಶ್ ಜೋಗಿ ಉಪಸ್ಥಿತರಿದ್ದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಕುಂದಾಪುರದ ಅಧ್ಯಕ್ಷರಾದ ಜೇಸಿ ಸೆನೆಟರ್ ಅಶೋಕ್ ತೆಕಟ್ಟೆ ವಹಿಸಿದ್ದರು.
ಕಾರ್ಯಕ್ರಮದ ವೇದಿಕೆಯಲ್ಲಿ ನಿಕಟ ಪೂರ್ವ ಅಧ್ಯಕ್ಷ ಜೇಸಿ ಶ್ರೀನಾಥ್ ಗಾಣಿಗ, ಸಭಾಪತಿ ಜೇಸಿ ರಾಕೇಶ್ ಶೆಟ್ಟಿ, ಮೊದಲ ದಿನದ ಕಾರ್ಯಕ್ರಮ ಸಂಯೋಜಕರಾದ ಜೇಸಿ ರವೀಶ್ ಶ್ರೀಯಾನ್ , ಜೇಸಿ ರಾಘವೇಂದ್ರ ಹರಪನೆಕೆರೆ, ಜೇಸಿ ಅನಸೂಯ ಕೆದೂರು ಉಪಸ್ಥಿತರಿದ್ದರು. ಕಾರ್ಯದರ್ಶಿ ಜೇಸಿ ದೀಕ್ಷಿತ ಗೋಡೆ ಧನ್ಯವಾದ ಸಮರ್ಪಿಸಿದರು. ಸಲ್ಯೂಟ್ ದಿ ಸೈಲೆಂಟ್ ವರ್ಕರ್ ಎಂಬ ಆಶಯದಡಿಯಲ್ಲಿ ತೆಕಟ್ಟೆಯ ಸವಿ ಸವಿ ನೆನಪು ಎಂಬ ಯುವಕರ ತಂಡದ ಸಮಾಜ ಸೇವೆಯನ್ನ ಗುರುತಿಸಿ ಸನ್ಮಾನಿಸಲಾಯಿತು
ನಂತರ ನಡೆದ ನಗೆ ಮುಂಗಾರು ಹಾಸ್ಯ ಪ್ರಹಸನ ಸ್ಪರ್ಧೆಯಲ್ಲಿ ಕಲಾ ಶಕ್ತಿ ಕಲಾ ತಂಡ ಕಣ್ಣುಕೆರೆ ತೆಕ್ಕಟ್ಟೆ, ಅಭಿನಂದನಾ ತಂಡ ಉಡುಪಿ , ಬೆನಕ ಕಲಾತಂಡ ಬಲ್ಕೂರು ಕಲಾವಿದರು ನಗೆ ಪ್ರಹಸನ ಪ್ರದರ್ಶನ ನೀಡಿದರು.
ಸ 23 ರಿಂದ ಸ 29 ರವರೆಗೆ 7 ದಿನಗಳ ಕಾಲ ಕುಂದಾಪುರದ ರೋಟರಿ ಕಲಾ ಮಂದಿರದಲ್ಲಿ ಜೇಸಿ ಸಪ್ತಾಹವು ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಪ್ರತಿ ದಿನ ರಾತ್ರಿ ಕೋಸ್ಟಲ್ ಸ್ಟಾರ್ ಸಿಂಗರ್ ಕರೋಕೆ ಸಂಗೀತ ಸ್ಪರ್ಧೆ , ಹಾಸ್ಯ ಪ್ರಹಸನ ಸ್ಪರ್ಧೆಯಾದ ನಗೆ ಮುಂಗಾರು , ಸಂಜೆ ಕಾಲೇಜು ವಿದ್ಯಾರ್ಥಿಗಳಿಗೆ ಯುವ ಕಲೋತ್ಸವ, ಸಾರ್ವಜನಿಕರಿಗೆ ಮೆಹಂದಿ, ರಂಗೋಲಿ ಬೆಂಕಿ ರಹಿತ ಅಡುಗೆ ಸ್ಪರ್ಧೆ ನಡೆಯಲಿದೆ .ಹಾಗು ಗ್ರೀನ್ ಸೆಲ್ಫಿ , ರಕ್ತದಾನ ಶಿಬಿರ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.