ಅತ್ಯಾಚಾರ ಪ್ರಕರಣ ತಡೆಯಲು ವಿಫಲವಾದ ಡಿಸಿ,ಎಸ್.ಪಿ ಅಮಾನತು ಮಾಡಿ: ಜಯನ್ ಆಗ್ರಹ
ಉಡುಪಿ: ಬುದ್ದಿವಂತರ ಜಿಲ್ಲೆ ಎಂದು ಹೇಳಿಕೊಳ್ಳುವ ಮಂಗಳೂರಿನಲ್ಲಿ ಮೂವರು ದಲಿತ ವಿದ್ಯಾರ್ಥಿಗಳ ಮೇಲೆ ನಡೆದ ನಿರಂತರ ಅತ್ಯಾಚಾರ ಪ್ರಕರಣದಲ್ಲಿ ಮಂಗಳೂರು ಜಿಲ್ಲಾ ಎಸ್ ಪಿ ಹಾಗೂ ಡಿಸಿ ಅವರೇ ಕಾರಣ ಆದ್ದರಿಂದ ಅವರನ್ನು ತಕ್ಷಣ ಅಮಾನತು ಮಾಡಬೇಕೆಂದು ಅಂಬೇಡ್ಕರ್ ಯುವ ಸೇನೆ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಪ್ರಗತಿಪರ ಚಿಂತಕ ಜಯನ್ ಮಲ್ಪೆ ಆಗ್ರಹಿಸಿದರು.
ಇಂದು ಅಜ್ಜರಕಾಡು ಹುತಾತ್ಮರ ಸ್ಮಾರಕದ ಬಳಿ ಆಯೋಜಿಸಿದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಇವರು ಕಾಮುಖರ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಒಂದೇ ತಿಂಗಳಿನಲ್ಲಿ ಮೂವರು ವಿದ್ಯಾರ್ಥಿಗಳ ಮೇಲೆ ನಡೆದ ದೌರ್ಜನ್ಯ ತಡೆಯಲು ವಿಫಲವಾದ ಎಸ್ ಪಿ ಹಾಗೂ ಡಿಸಿ ಅವರೇ ಇದಕ್ಕೆ ನೇರ ಹೊಣೆ ಆದ್ದರಿಂದ ಸರಕಾರ ಅವರನ್ನು ಅಮಾನತುಗೊಳಿಸಬೇಕು ಎಂದರು.
ಪುತ್ತೂರು ಕಾಲೇಜಿನ ವಿದ್ಯಾರ್ಥಿನಿ ಅತ್ಯಾಚಾರವಾಗುವ ಸಂದರ್ಭ ಅಮುಲು ಪದಾರ್ಥ ಸೇವಿಸಿದ್ದರೂ ಆಕೆ ಸೇವಿಸಿಲ್ಲ ಎಂಬ ಹೇಳಿಕೆ ಕೊಡಿಸಿ ತನಿಖೆ ದಿಕ್ಕು ಬದಲಿಸಿದ ಎಸ್ ಪಿ ವಿರುದ್ದ ದಲಿತ ದೌರ್ಜನ್ಯ ಕೇಸು ದಾಖಲಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ವಿವಿಧ ಬೇಡಿಕೆಗಳು: ದಲಿತ ವಿದ್ಯಾರ್ಥಿಗಳ ಮೇಲಿನ ಅತ್ಯಾಚಾರ ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಸಬೇಕು,ಕಳೆದ ಐದು ವರ್ಷದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಮರು ತನಿಖೆಗೆ ಒಪ್ಪಿಸಬೇಕು, ಸಂತ್ರಸ್ತ ಕುಟುಂಬಕ್ಕೆ ಸರಕಾರಿ ಉದ್ಯೋಗ ನೀಡಬೇಕು, ದಲಿತರ ಮೇಲಿನ ಅತ್ಯಾಚಾರ ,ದೌರ್ಜನ್ಯ ನಡೆಸಿದವರಿಗೆ ತಕ್ಷಣ ಗಲ್ಲು ಶಿಕ್ಷೆ ನೀಡಬೇಕು. ಇತ್ತೀಚೆಗೆ ಕಿನ್ನಿಮೂಲ್ಕಿಯ ಹರೀಶ ಎಂಬ ಯುವಕನ ಸಾವಿನ ತನಿಖೆಯು ನ್ಯಾಯಂಗಕ್ಕೆ ಒಪ್ಪಿಸಬೇಕೆಂಬ ಆಗ್ರಹಪಡಿಸಿದರು.