ಉಡುಪಿ ಶ್ರೀಕೃಷ್ಣಮಠದಲ್ಲಿ ಸಂಭ್ರಮದ ಜನ್ಮಾಷ್ಟಮಿ

ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದರೆ ಉಡುಪಿ ಜನತೆಗೆ ಎಲ್ಲಿಲ್ಲದ ಸಂಭ್ರಮ. ಒಂದೆಡೆ ಶ್ರೀಕೃಷ್ಣಮಠದಲ್ಲಿ ಹೂವಿನ ಅಲಂಕಾರ ಗಳಿಂದ ಕೂಡಿದ ದೇವಸ್ಥಾನ ಇನ್ನೊಂದೆಡೆ ರಾಜಾಂಗಣದಲ್ಲಿ ಪುಟ್ಟಪುಟ್ಟ ಮಕ್ಕಳು ಶ್ರೀಕೃಷ್ಣ ವೇಷಧರಿಸಿ ಬಾಲಲೀಲೆ ತೋರಿಸುವ ದೃಶ್ಯ ಕಣ್ಮನ ಸೆಳೆಯುತ್ತಿದೆ.

ಇಂದು ರಾತ್ರಿ 12 ಗಂಟೆಗೆ ಶ್ರೀಕೃಷ್ಣ ದೇವರಿಗೆ  ಅರ್ಘ್ಯಪ್ರದಾನ ವನ್ನು ಪರ್ಯಾಯ ಶ್ರೀ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ಶ್ರೀಪಾದರು ನೆರವೇರಿಸಲಿದ್ದಾರೆ.ಶ್ರೀಕೃಷ್ಣ ಭೂಮಿಯಲ್ಲಿ ಅವತರಿಸಿ ಈ ಸಮಯದಲ್ಲಿ ಉತ್ತಮ ಮಳೆ, ಬೆಳೆ ಜನರಲ್ಲಿರುವ ಕಷ್ಟವು ಪರಿಹಾರವಾಗಬೇಕು ಎಂದು  ಶ್ರೀಕೃಷ್ಣ ಜನ್ಮಾಷ್ಟಮಿ ಸಂದೇಶವನ್ನು ನಾಡಿನ ಜನತೆಗೆ ನೀಡಿದ್ದಾರೆ.

ನಾಳೆ ನಡೆಯುವ ಮೊಸರುಕುಡಿಕೆಗೆ ರಥಬೀದಿ ಸುತ್ತಲೂ 15 ಗುಜ್ಜಿಗಳನ್ನು ನಿರ್ಮಿಸಿದ್ದು . ಗೊಲ್ಲರು ಇದಕ್ಕೆ ಹಾಕುವ ಮೊಸರಿನ ಕುಡಿಕೆಯನ್ನು ಒಡೆಯುವ ಸಂಪ್ರದಾಯವು ಹಲವಾರು ವರ್ಷಗಳಿಂದ ಶ್ರೀಕೃಷ್ಣಮಠದಲ್ಲಿ ನಡೆದುಕೊಂಡುಬಂದಿದೆ.

ನಾಳೆ ರಥ ರಥಬೀದಿ ಸುತ್ತಲೂ ಮೊಸರುಕುಡಿಕೆ ಸಂಭ್ರಮ ನೋಡಲು ಸಾವಿರಾರು ಜನರು ಆಗಮಿಸುವವರಿದ್ದಾರೆ.

Leave a Reply

Your email address will not be published. Required fields are marked *

error: Content is protected !!