ಜುಲೈ 15 ಕ್ಕೆ ಅರೆಮಾದನಹಳ್ಳಿ ನೂತನ ಶಾಖಾಮಠದ ಉದ್ಘಾಟನೆ
ಉಡುಪಿ: ಜುಲೈ 15 ರಂದು ಕಜ್ಕೆಯಲ್ಲಿ ಶ್ರೀ ವಿಶ್ವಕರ್ಮ ಜಗದ್ಗುರು ಪೀಠ ವಿಶ್ವಬ್ರಾಹ್ಮಣ ಮಹಾ ಸಂಸ್ಥಾನ ಅರೆಮಾದನಹಳ್ಳಿ ಶಾಖಾಮಠ ಉದ್ಘಾಟನೆ, ಜುಲೈ 16 ರಂದು ಶ್ರೀ ಶ್ರೀ ಶಿವ ಸುಜ್ಞಾನ ತೀರ್ಥ ಮಹಾಸ್ವಾಮೀಜಿಯವರ 37 ನೇ ಚಾತುರ್ಮಾಸ್ಯ ಕಾರ್ಯಕ್ರಮಗಳ ಉದ್ಘಾಟನೆ ಕಾರ್ಯಕ್ರಮನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಯೋಗೀಶ ಆಚಾರ್ಯ ಅಲೆವೂರು ತಿಳಿಸಿದ್ದಾರೆ.
ಶ್ರೀ ವಿಶ್ವಕರ್ಮ ಜಗದ್ಗುರು ಪೀಠ ವಿಶ್ವಬ್ರಾಹ್ಮಣ ಮಹಾ ಸಂಸ್ಥಾನ ಅರೆಮಾದನಹಳ್ಳಿ ಇಲ್ಲಿನ ಜಗದ್ಗುರು ಶ್ರೀ ಶ್ರೀ ಶಿವ ಸುಜ್ಞಾನ ತೀರ್ಥ ಮಹಾಸ್ವಾಮೀಜಿಯವರಿಗೆ ಉಡುಪಿ ಜಿಲ್ಲೆಯ ನಾಲ್ಕೂರು ಗ್ರಾಮದ ಕಜ್ಕೆಯ ಕೃಷ್ಣಯ್ಯ ಶೆಟ್ಟಿ ಹಾಗೂ ಶ್ರೀಧರ್ ಕಾಮತ್ ಕುಟುಂಬಸ್ಥರು ದಾನವಾಗಿ ನೀಡಿದ ಜಾಗದಲ್ಲಿ ನಿರ್ಮಾಣಗೊಂಡಿರುವ ಶಾಖಾ ಮಠದ ಉದ್ಘಾಟನೆಯನ್ನು ಶ್ರೀ ಶ್ರೀ ಶಿವ ಸುಜ್ಞಾನ ತೀರ್ಥ ಮಹಾಸ್ವಾಮೀಜಿಯವರು ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ಜುಲೈ ೧೫ ರಂದು ಮದ್ಯಾಹ್ನ 2.30 ಕ್ಕೆ ಕಾಡೂರು ಬಸ್ ನಿಲ್ದಾಣದಿಂದ ಕೊಕ್ಕರ್ಣೆ-ಕೆಂಜೂರು-ಮುದ್ದೂರು ಮಾರ್ಗವಾಗಿ ಹೊರೆಕಾಣಿಕೆ ಜಾಥದೊಂದಿಗೆ ಶ್ರೀ ಮಠಕ್ಕೆ ಸ್ವಾಮೀಜಿಯವರ ಪುರಪ್ರವೇಶದೊಂದಿಗೆ ನೂತನ ಶಾಖಾ ಮಠದ ಉದ್ಘಾಟನೆ, ಧಾರ್ಮಿಕ ಸಭಾ ಕಾರ್ಯಕ್ರಮಗಳು ಗುರುಗಳ ಆಶೀರ್ವಚನ ಕಾರ್ಯಕ್ರಮಗಳು ನಡೆಯಲಿವೆ.
ಶ್ರೀ ಶ್ರೀ ಶಿವ ಸುಜ್ಞಾನ ತೀರ್ಥ ಮಹಾಸ್ವಾಮೀಜಿಯವರ ಶ್ರೀ ವಿಕಾರಿ ನಾಮ ಸಂವತ್ಸರದ 37ನೇ ಚಾತುರ್ಮಾಸ್ಯ ವ್ರತಾನುಷ್ಠಾನ ಇದೇ ಶಾಖಾಮಠದಲ್ಲಿ ಜುಲೈ 16 ರಂದು ಪೂರ್ವಾಹ್ನ ಶ್ರೀ ವ್ಯಾಸಪೂಜಾ , ಶ್ರೀ ಶಂಕರ ಪಂಚಕ ಹಾಗೂ ಶ್ರೀ ಚಕ್ರ ಪೂಜಾ ಕಾರ್ಯಕ್ರಮಗಳೊಂದಿಗೆ ಆರಂಭಗೊಳ್ಳಲಿದೆ. ಜುಲೈ 16 ರಿಂದ ಸೆಪ್ಟೆಂಬರ್ 14 ರವರೆಗೆ ಶಾಖಾಮಠದಲ್ಲಿ ಚಾತುರ್ಮಾಸ್ಯ ವ್ರತಾನುಷ್ಠಾನ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮದಲ್ಲಿ ಸದ್ಭಕ್ತ ಮಹಾಶಯರು ಊರ-ಪರಊರ ಸಮಾಜಭಾಂದವರು ಭಾಗವಹಿಸುವಂತೆ ವಿನಂತಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಯೋಗೀಶ ಆಚಾರ್ಯ ಅಲೆವೂರು ಅಧ್ಯಕ್ಷರು, ಶಾಖಾ ಮಠ ನಿರ್ಮಾಣ ಸಮಿತಿ ಗೌರವಾಧ್ಯಕ್ಷರು ಚಾತುರ್ಮಾಸ್ಯ ವ್ರತ ವ್ಯವಸ್ಥಾಪನಾ ಸಮಿತಿ, ಅಧ್ಯಕ್ಷರಾದ ರಾಘವೇಂದ್ರ ಆಚಾರ್ಯ ಸಾಬರಕಟ್ಟೆ, ಉಪಾಧ್ಯಕ್ಷರಾದ ಶಿಲ್ಪಿ ಶ್ರೀಧರ ಆಚಾರ್ಯ ಬಂಡೀಮಠ, ಕಾರ್ಯದರ್ಶಿಯಾದ ರವಿಚಂದ್ರ ಆಚಾರ್ಯ, ಕೆ. ಜಯರಾಮ ಆಚಾರ್ಯ ಸಾಲಿಗ್ರಾಮ ಉಪಸ್ಥಿತರಿದ್ದರು.