ಎಸ್.ಕೆ.ಎಫ್ ಎಲಿಕ್ಷರ್ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ
ಕಾರ್ಕಳ: ಭಾರತೀಯ ಜೈನ ಮಿಲನ್ ಕಾರ್ಕಳ ದಾನಶಾಲೆ ಶ್ರೀ ಬಾಹುಬಲಿ ಪ್ರವಚನ ಮಂದಿರದಲಿ, ಎಸ್.ಕೆ.ಎಫ್. ಉತ್ಪಾದಿತ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆಯನ್ನ ಮಾಡಲಾಯಿತು. ಜೈನ ಧರ್ಮ ಜೀರ್ಣೋದ್ಧಾರ ಸಂಘದ ಕಾರ್‍ಯದರ್ಶಿ ಎಂ.ಕೆ. ವಿಜಯ ಕುಮಾರ್‌ರವರು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು ಒಳ್ಳೆಯ ನೀರು ದೊರೆಯುವಿಕೆ ಇಲ್ಲದಿರುವುದರಿಂದ, ಜನರು ನೀರಿನ ಬಾಟ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ಮಾಮೂಲಿಯಾಗಿದೆ. ಜೈನರು ಬಹಳ ಪ್ರಾಚೀನಕಾಲದಿಂದಲೂ, ನೀರನ್ನು ಬಟ್ಟೆಯಿಂದ ಸೋಸಿಯೇ ಕುಡಿಯುವ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆಯುವ ಶುಭ ಸಮಾರಂಭಗಳಲ್ಲಿ ಭಾಗವಹಿಸುವ ಜನರಿಗೆ ಶುದ್ಧ ಕುಡಿಯುವ ನೀರು ದೊರೆಯುವಂತಾಗಿದೆ ಎಂದರು.
ಎಸ್.ಕೆ.ಎಫ್. ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕರಾದ ಶ್ರೀ ಜಿ. ರಾಮಕೃಷ್ಣ ಆಚಾರ್ ಮಾತನಾಡಿ ಶುದ್ಧ ಪರಿಸರದ ಜತೆಗೆ ಶುದ್ಧ ಕುಡಿಯುವ ನೀರಿನ ಉದ್ದೇಶದಿಂದ, ಪ್ಲಾಸ್ಟಿಕ್ ಬಾಟ್ಲಿ ನೀರಿನಿಂದ ಜನರಿಗೆ ಮುಕ್ತಿಕೊಡುವ ದಿಸೆಯಿಂದ, ನೀರನ್ನು ಸ್ವಂತ ಮೂಲದಿಂದ ಕುಡಿಯುವ ನೀರನ್ನು ಪಡೆಯುವುದರ ಜತೆಗೆ ಆಹಾರ, ಖಾದ್ಯಗಳನ್ನು ತಯಾರಿಸಿ, ಜನರ ಆರೋಗ್ಯ ಕಾಪಾಡುವಲ್ಲಿ, ಜೈನ ಧರ್ಮ ಜೀರ್ಣೋದ್ಧಾರ ಸಂಘದ ಕೊಡುಗೆಯನ್ನು ಆಚಾರ್‌ರವರು ಪ್ರಶಂಸಿಸಿದರು.
ಬಾರಾಡಿ ಬೀಡು ಡಾ| ಜೀವಂಧರ ಬಲ್ಲಾಳ್, ಶ್ರೀ ಎ. ಮೋಹನ ಪಡಿವಾಳ್, ಕಡ್ತಲ ಸಂಪತ್ ಕುಮಾರ್ ಜೈನ್, ಶಿರ್ಲಾಲಿನ ಅನಂತರಾಜ ಪೂವಣಿ, ಆದಿರಾಜ ಅಜ್ರಿ, ಶ್ರೀಮತಿ ಶಶಿಕಲಾ ಕುಮಾರಯ್ಯ ಹೆಗ್ಡೆ , ಶ್ರೀ ವರ್ದಮಾನ್ ಜೈನ್ ಮತ್ತಿತರರು ಹಾಜರಿದ್ದರು.