ಐಎಂಎ ಹಗರಣ: ನಿಂಬಾಳ್ಕರ್ ನಿವಾಸ ಸೇರಿ 15 ಸ್ಥಳಗಳ ಮೇಲೆ ಸಿಬಿಐ ದಾಳಿ
ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಹಿರಿಯ ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್, ಅಜಯ್ ಹಿಲೋರಿ ನಿವಾಸಗಳು ಸೇರಿದಂತೆ 15 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದೆ. ಐಎಎಸ್, ಐಪಿಎಸ್ ಅಧಿಕಾರಿಗಳ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿಗಳು ನಡೆದಿದೆ.
ಐಎಂಎ ಸಂಸ್ಥೆ ವಿರುದ್ಧ ದೂರು ಬಂದರೂ ಕ್ಲೀನ್ ಚಿಟ್ ನೀಡಿದ್ದ ಐಜಿಪಿ ಹೇಮಂತ್ ನಿಂಬಾಳ್ಕರ್,ಅಂದಿನ ಸಿಐಡಿ ಪೊಲೀಸ್ ಉಪವರಿಷ್ಠಾಧಿಕಾರಿ ಇ.ಬಿ. ಶ್ರೀಧರ್, ಅಂದಿನ ಪೂರ್ವ ವಲಯ ಡಿಸಿಪಿ ಅಜಯ್ ಹಿಲೋರಿ, ಅಂದಿನ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾಧಿಕಾರಿಎಂ. ರಮೇಶ್, ಅಂದಿನ ಕಮರ್ಷಿಯಲ್ ಸ್ಟ್ರೀಟ್ ಠಾಣೆಯ ಉಪನಿರೀಕ್ಷಕ ಗೌರಿ ಶಂಕರ್, ಅಂದಿನ ಬೆಂಗಳೂರು ಉತ್ತರ ಉಪವಿಭಾಗದ ಎಸಿಪಿ ಹಾಗೂ ಕೆಪಿಐಡಿ ಕಾಯ್ದೆಯ ಅಧಿಕಾರಿ ಎಲ್.ಸಿ. ನಾಗರಾಜ್, ಅಂದಿನ ಬೆಂಗಳೂರು ನಗರ ಜಿಲ್ಲೆ ಡಿಸಿಪಿ ಬಿ.ಎಂ. ವಿಜಯಶಂಕರ್, ಬೆಂಗಳೂರು ಉತ್ತರ ಉಪವಿಭಾಗದ ಲೆಕ್ಕಿಗ ಮಂಜುನಾಥ್, ಅಂದಿನ ಬಿಡಿಎ ಮುಖ್ಯ ಎಂಜಿನಿಯರ್ ಪಿ.ಡಿ. ಕುಮಾರ್ ಅವರುಗಳ ನಿವಾಸ ಹಾಗೂ ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆದಿದೆ.
ಐಎಂಎ ಸಂಸ್ಥೆ ಮುಖ್ಯಸ್ಥ, ಹಗರಣಗಳ ಪ್ರಮುಖ ಆರೋಪಿ ಮನ್ಸೂರ್ ಖಾನ್ ನೀಡಿದ್ದ ಹೇಳಿಕೆಗಳ ಆಧಾರದ ಮೇಲೆ ತನಿಖೆ ಮುಂದುವರಿದಿದೆ