ನಾನು ಬಿಳಿ ಬಟ್ಟೆ ಧರಿಸಿದರೆ ವೈದ್ಯ, ತೆಗೆದರೆ ನಾನೂ ಒಬ್ಬ ರೌಡಿ…!
ಉಡುಪಿ: ತನ್ನ ವಿಭಿನ್ನ ಶೈಲಿಯ ಹಾಡುಗಾರಿಕೆಯ ಕಂಠ ಸೀರಿಯ ಮೂಲಕ ಜನರನ್ನು ರಂಜಿಸುತ್ತಿದ್ದ ಕುಂದಾಪುರದ ವೈಕುಂಠ ಸೋಮವಾರ ರಾತ್ರಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ನ.13 ರಂದು ಮಧ್ಯಾಹ್ನ1.30 ಕ್ಕೆ ಜಿಲ್ಲಾಸ್ಪತ್ರೆಗೆ ಸಾಮಾಜಿಕ ಕಾರ್ಯಕರ್ತರು ದಾಖಲಿಸಿದಾಗ ಅಲ್ಲಿನ ವೈದ್ಯ ನಾಗೇಶ್ ಅವರು, ನಿಮಗೆ ಹೊತ್ತು ಗೊತ್ತು ಇಲ್ಲವ, ಎಲ್ಲೆಲ್ಲೋ ರಸ್ತೆ ಬದಿ ಬಿದ್ದ ನಾಯಿಗಳನ್ನು ಇಲ್ಲಿ ತಂದು ಹಾಕುತ್ತೀರಿ. ಇದೇನು ಧರ್ಮಛತ್ರವಾ? ನಾವು ಊಟ ಮಾಡುವುದು ಬೇಡವಾ? ಎಂದು ವೈಕುಂಠನನ್ನು ದಾಖಲಿಸಲು ಬಂದ ಸಾಮಾಜಿಕ ಕಾರ್ಯಕರ್ತರಿಗೆ ಅವಮಾನಿಸಿದರು ಎಂದು ರಂಜಿತ್ ಹೆಂಗವಳ್ಳಿ ದೂರಿದರು.
ನಾವು ಅವರ ವರ್ತನೆ ಕಂಡು, ಅವರನ್ನು ತರಾಟೆ ತೆಗೆದುಕೊಂಡ ಸಂದರ್ಭ, ಅವರ ವಿಡಿಯೋ ಮಾಡುತ್ತಿದ್ದಾಗ ನನ್ನ ಮೊಬೈಲ್ ಕಸಿದು ಅದನ್ನು ನೆಲಕ್ಕೆ ಎಸೆದು ನನ್ನ ಮೊಬೈಲ್ ಹಾಳು ಮಾಡಿರುತ್ತಾರೆ. ಮಾತ್ರವಲ್ಲದೆ, ನಾನು ವೈದ್ಯನ ಬಿಳಿ ಬಟ್ಟೆ ಧರಿಸಿದಾಗ ಡಾಕ್ಟರ್ ಆಗಿರುವೆ, ಅದು ತೆಗೆದರೆ ರೌಡಿಯೂ ಆಗಿರುತ್ತೇನೆಂದು ಬೊಬ್ಬಿರಿದು ಆವಾಜ್ ಹಾಕಿದ್ದಾಗಿ ರಂಜಿತ್ ಮತ್ತು ಜಾಸ್ಮೀನ್ ಪೆರಂಪಳ್ಳಿ ಆರೋಪಿಸಿದ್ದಾರೆ.
ವೈಕುಂಠನಿಗೆ ಸರಿಯಾದ ವೈದ್ಯಕೀಯಾ ನೆರವು ಸಿಗುತ್ತಿದ್ದರೆ, ಆತ ಬದುಕುತಿದ್ದ, ಆಸ್ಪತ್ರೆಯ ವೈದ್ಯರ ನಿರ್ಲಕ್ಯದಿಂದಲೇ ಮೃತ ಪಟ್ಟಿದ್ದಾಗಿ ದಲಿತ ಸಂಘಟನೆಗಳ ಆರೋಪವಾಗಿದೆ.
ಟ್ರೋಲ್ ಪೇಜ್‌ನಲ್ಲಿ ವೈಕುಂಠನ ಹವಾ ಸಕತ್ತ್ ವೈರಲ್ ಆಗಿತ್ತು!
ಕಳೆದ ನಾಲ್ಕು ವರ್ಷಗಳಿಂದ ವಾಟ್ಸಾಪ್, ಫೇಸ್‌ಬುಕ್‌ಗಳಲ್ಲಿ ವೈಕುಂಠ ಅವರು ಹಾಡಿರುವ ಕೆಲವು ಗೀತೆಗಳು ಸಾಕಷ್ಟು ವೈರಲ್ ಆಗಿದ್ದವು. ಆ ಬಳಿಕ ವೈಕುಂಠ ಕುಂದಾಪುರ ಜನತೆಗೆ ಚಿರಪರಿಚಿತರಾಗಿದ್ದರು. ಕುಂದಾಪುರದ ಹಲವು ಟ್ರೋಲ್ ಪೇಜ್‌ಗಳಲ್ಲಿ ವೈಕುಂಠ ಅವರ ಚಿತ್ರಗಳು, ವಿಡಿಯೋ ತುಣುಕುಗಳು ವೈರಲ್ ಆಗಿದ್ದು, ಕುಂದಾಪುರದ ಆಸುಪಾಸಿನಲ್ಲಿ ವೈಕುಂಠ ಅವರನ್ನು ನೋಡಿದಾಕ್ಷಣ ಎಲ್ಲರೂ ಅವರನ್ನು ಸಲುಗೆಯಿಂದ ಕರೆದು ಮಾತಾಡಿಸುತ್ತಿದ್ದರು. ಕೆಲ ಟ್ರೋಲ್ ಪೇಜ್‌ಗಳಲ್ಲಿ ವೈಕುಂಠ ಅವರಿಗೆ ರಾಕ್‌ಸ್ಟಾರ್ ಎಂಬ ಬಿರುದು ನೀಡಲಾಗಿದ್ದು, ಅವರನ್ನು ಹೀರೋ ಎಂಬಂತೆಯೂ ಬಿಂಬಿಸಲಾಗಿತ್ತು.
If anybody find any alchohoisum problem
Call this no
9964280840
Free and effective method to stop drinking maintaining anonymity
No adverse effect
Alchoholics anonymous