ಕುಂದಾಪುರದ ರಾಕ್‌ಸ್ಟಾರ್ ಖ್ಯಾತಿಯ ವೈಕುಂಠ ಇನ್ನಿಲ್ಲ

ಕುಂದಾಪುರ: ತನ್ನ ವಿಭಿನ್ನ ಶೈಲಿಯ ಹಾಡುಗಾರಿಕೆಯ ಕಂಠ ಸೀರಿಯ ಮೂಲಕ ಜನರನ್ನು ರಂಜಿಸುತ್ತಿದ್ದ ಕುಂದಾಪುರದ ವೈಕುಂಠ ತೀವ್ರ ಅಸ್ವಸ್ಥಗೊಂಡು ಸೋಮವಾರ ರಾತ್ರಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಹಂಗಳೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ನೇರಂಬಳ್ಳಿ ನಿವಾಸಿ ವೈಕುಂಠ ಕಳೆದ ನಾಲ್ಕು ದಿನಗಳಿಂದ ಕುಂದಾಪುರದ ಇಂದಿರಾ ಕ್ಯಾಂಟೀನ್ ಹಿಂಭಾಗದಲ್ಲಿರುವ ಪಶು ಆಸ್ಪತ್ರೆಯ ಆವರಣದಲ್ಲಿ ತೀವ್ರ ಅಸ್ವಸ್ಥಗೊಂಡು ಮಲಗಿದ್ದ ಇತನನ್ನು ಸ್ಥಳೀಯ ರಂಜಿತ್ ಹೆಂಗವಳ್ಳಿ, ವಿನಯ್‌ಚಂದ್ರ ಸಾಸ್ತಾನ ಸಹಿತ ಕೆಲವೊಂದು ಸಾಮಾಜಿಕ ಕಾರ್ಯಕರ್ತರು ನ.13 ರಂದು ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು.

ಟ್ರೋಲ್ ಪೇಜ್‌ನಲ್ಲಿ ವೈಕುಂಠನ ಹವಾ ಸಕತ್ತ್ ವೈರಲ್ ಆಗಿತ್ತು!
ಕಳೆದ ನಾಲ್ಕು ವರ್ಷಗಳಿಂದ ವಾಟ್ಸಾಪ್, ಫೇಸ್‌ಬುಕ್‌ಗಳಲ್ಲಿ ವೈಕುಂಠ ಅವರು ಹಾಡಿರುವ ಕೆಲವು ಗೀತೆಗಳು ಸಾಕಷ್ಟು ವೈರಲ್ ಆಗಿದ್ದವು. ಆ ಬಳಿಕ ವೈಕುಂಠ ಕುಂದಾಪುರ ಜನತೆಗೆ ಚಿರಪರಿಚಿತರಾಗಿದ್ದರು. ಕುಂದಾಪುರದ ಹಲವು ಟ್ರೋಲ್ ಪೇಜ್‌ಗಳಲ್ಲಿ ವೈಕುಂಠ ಅವರ ಚಿತ್ರಗಳು, ವಿಡಿಯೋ ತುಣುಕುಗಳು ವೈರಲ್ ಆಗಿದ್ದು, ಕುಂದಾಪುರದ ಆಸುಪಾಸಿನಲ್ಲಿ ವೈಕುಂಠ ಅವರನ್ನು ನೋಡಿದಾಕ್ಷಣ ಎಲ್ಲರೂ ಅವರನ್ನು ಸಲುಗೆಯಿಂದ ಕರೆದು ಮಾತಾಡಿಸುತ್ತಿದ್ದರು. ಕೆಲ ಟ್ರೋಲ್ ಪೇಜ್‌ಗಳಲ್ಲಿ ವೈಕುಂಠ ಅವರಿಗೆ ರಾಕ್‌ಸ್ಟಾರ್ ಎಂಬ ಬಿರುದು ನೀಡಲಾಗಿದ್ದು, ಅವರನ್ನು ಹೀರೋ ಎಂಬಂತೆಯೂ ಬಿಂಬಿಸಲಾಗಿತ್ತು.

ಕುಡಿತದ ಜಟವೇ ಜೀವಕ್ಕೆ ಮುಳುವಾಹಿತು.
ಕಳೆದ ಹಲವು ವರ್ಷಗಳಿಂದ ಮನೆ ಬಿಟ್ಟು ಬೀದಿಯಲ್ಲಿ ಜೀವನ ಸಾಗಿಸುತ್ತಿದ್ದ ವೈಕುಂಠ, ವಿಪರೀತ ಮದ್ಯವ್ಯಸನಿಯಾಗಿದ್ದ, ಕೆಲವರಿಗೆ ಇತ ಹಾಸ್ಯದ ವಸ್ತುವಾಗಿದ್ದ. ಆದರೆ ಸಮಾಜವು ವೈಕುಂಠ ಬದುಕಿದ್ದಾಗ ಯಾವುದೇ ವೇದಿಕೆ ನೀಡದೆ, ಆತನ ಹಾಡಿನ ಕಂಠ ಮಾಧುರ್‍ಯಕ್ಕೆ ಯಾರು ಕೂಡ ಬೆಲೆ ಕೊಡದೇ ಇರುವುದು ವಿಪರ್ಯಸವೇ ಸರಿ ಎನ್ನಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!