ಬ್ರಹತ್ ಮರ ಉರುಳಿ ಬಿದ್ದ ಪರಿಣಾಮ : ಇಬ್ಬರಿಗೆ ಗಾಯ 4 ವಾಹನ ಜಖಂ

ಮಣಿಪಾಲ: ಕೆಎಂಸಿ ಆಸ್ಪತ್ರೆಯ ಆವರಣದಲ್ಲಿನ ಬ್ರಹತ್ ಮರವೊಂದು ಬುಡ ಸಮೇತ ಉರುಳಿ ಬಿದ್ದ ಪರಿಣಾಮ ಇಬ್ಬರಿಗೆ ಗಾಯಗೊಂಡ 4 ವಾಹನ ಜಖಂಗೊಂಡ ಘಟನೆ  ಶುಕ್ರವಾರ ಮಧ್ಯಾಹ್ನ  ನಡೆದಿದೆ.

ಇಂದು ಮುಂಜಾನೆ ಸುರಿದ ವಿಪರೀತ ಮಳೆಗೆ‌  ಕೆಎಂಸಿ ಆಸ್ಪತ್ರೆಯ ತುರ್ತು ನಿಗಾ ಘಟಕದ ದ್ವಾರದ ಬಳಿ ಇರುವ ಬಹಳ ಹಳೆಯ ಮರವು ಉರುಳಿ ಬಿದ್ದಿದೆ.

ಈ ಸಂದರ್ಭದಲ್ಲಿ ಆಸ್ಪತ್ರೆ ಯಿಂದ ಹೊರ ಹೋಗುತ್ತಿದ್ದ 2 ಗಾಯಗೊಂಡಿದ್ದಾರೆ. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಿಸಲಾಗಿದೆ. ಕಾರ್ಯಪ್ರವ್ರತ್ತರಾದ ಸ್ಥಳೀಯರು ,ಮಣಿಪಾಲ ಪೊಲೀಸರು ಜೆಸಿಬಿ‌ ಮೂಲಕ ಮರವನ್ನು  ತೆರವು ಗೊಳಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!