ಬ್ರಹತ್ ಮರ ಉರುಳಿ ಬಿದ್ದ ಪರಿಣಾಮ : ಇಬ್ಬರಿಗೆ ಗಾಯ 4 ವಾಹನ ಜಖಂ
ಮಣಿಪಾಲ: ಕೆಎಂಸಿ ಆಸ್ಪತ್ರೆಯ ಆವರಣದಲ್ಲಿನ ಬ್ರಹತ್ ಮರವೊಂದು ಬುಡ ಸಮೇತ ಉರುಳಿ ಬಿದ್ದ ಪರಿಣಾಮ ಇಬ್ಬರಿಗೆ ಗಾಯಗೊಂಡ 4 ವಾಹನ ಜಖಂಗೊಂಡ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಇಂದು ಮುಂಜಾನೆ ಸುರಿದ ವಿಪರೀತ ಮಳೆಗೆ ಕೆಎಂಸಿ ಆಸ್ಪತ್ರೆಯ ತುರ್ತು ನಿಗಾ ಘಟಕದ ದ್ವಾರದ ಬಳಿ ಇರುವ ಬಹಳ ಹಳೆಯ ಮರವು ಉರುಳಿ ಬಿದ್ದಿದೆ.
ಈ ಸಂದರ್ಭದಲ್ಲಿ ಆಸ್ಪತ್ರೆ ಯಿಂದ ಹೊರ ಹೋಗುತ್ತಿದ್ದ 2 ಗಾಯಗೊಂಡಿದ್ದಾರೆ. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಿಸಲಾಗಿದೆ. ಕಾರ್ಯಪ್ರವ್ರತ್ತರಾದ ಸ್ಥಳೀಯರು ,ಮಣಿಪಾಲ ಪೊಲೀಸರು ಜೆಸಿಬಿ ಮೂಲಕ ಮರವನ್ನು ತೆರವು ಗೊಳಿಸುತ್ತಿದ್ದಾರೆ.