ಒಂದು ನಿಮಿಷದಲ್ಲಿ ಚಿಕ್ಕ ಮಕ್ಕಳ ಅಳು ನಿಲ್ಲಿಸುವುದು ಹೇಗೆ?
ಸಣ್ಣ ಮಕ್ಕಳು ಅಳುವುದು ಸಹಜ. ಹಸಿವಾದಾಗ, ನೋವಾದಾಗ, ಭಯವಾದಾಗ ಅಳುತ್ತಾರೆ. ಈ ವೇಳೆ ಅಳುವ ಮಕ್ಕಳನ್ನು ನೋಡಿ ಅವರ ತಂದೆ ತಾಯಂದಿರಿಗೆ ಏನು ಮಾಡಬೇಕೊ ತಿಳಿಯದು. ಆಗ ಎತ್ತಿಕೊಂಡು ಲಾಲಿ ಹಾಡು ಹಾಡುವುದು ಸೇರಿದಂತೆ ಏನೇನೊ ಮಾಡಿ ಸುಸ್ತಾಗುತ್ತಾರೆ.
ಆದರೂ ಮಕ್ಕಳು ಅಳು ನಿಲ್ಲಿಸುವುದು ಕಡಿಮೆ. ನಿಮಗೆ ಗೊತ್ತೆ? ಜಾಸ್ತಿ ಅಳುವ ಮಕ್ಕಳ ಅಳುವನ್ನು ಕೇವಲ 1 ನಿಮಿಷದಲ್ಲಿ ನಿಲ್ಲಿಸಬಹುದು. ಹೌದು, ನೀವು ಕೇಳಿದ್ದು ಸತ್ಯ. ಅದಷ್ಟೇ ಅಲ್ಲದೆ ಅವರಿಗೆ ತಗಲುವ ಅನಾರೋಗ್ಯ ಸಮಸ್ಯೆಗಳನ್ನು ಕೆಳಗೆ ಸೂಚಿಸಿದ ಟಿಪ್ಸ್ ಫಾಲೊ ಮಾಡುವ ಮೂಲಕ ಹೋಗಲಾಡಿಸಬಹದು. ಅವೇನೆಂದರೆ
ದೇಹದೊಳಗಿನ ಕೆಲ ನಿರ್ದಿಷ್ಟ ಪ್ರದೇಶಗಳಲ್ಲಿ ಸ್ವಲ್ಪ ಹೊತ್ತು ಒತ್ತಡ ಹಾಕಿ, ಅಲ್ಲಿ ಮೆತ್ತಗೆ ಮಸಾಜ್ ಮಾಡುವ ಮೂಲಕ ಕೆಲ ವಿಧದ ಅನಾರೋಗ್ಯ ಸಮಸ್ಯೆಗಳಿಂದ ಪಾರಾಗಬಹುದು ಎಂದು ಕೇಳಿದ್ದೇವೆ, ಹೌದು ಅದನ್ನೇ ರಿಪ್ಲೆಕ್ಸಾಲಜಿ ಎಂದು, ಅಕ್ಯುಪ್ರೆಷರ್ ಎಂದೂ ಕರೆಯುತ್ತಾರೆ. ಆದರೆ ಈ ಪದ್ಧತಿಯಲ್ಲಿ ಮಕ್ಕಳ ಮೇಲಿನ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಬಹುದು. ಅದು ಹೇಗೆಂದರೆ.
ಹಲ್ಲು, ತಲೆ ಸಮಸ್ಯೆಗಳಿಗೆ.ಕಾಲು ಹೆಬ್ಬೆಟ್ಟಿನ ಕೊನೆ ಭಾಗದ ಕೆಲವು ಭಾಗಗಳನ್ನು ಮೆತ್ತಗೆ ಮಸಾಜ್ ಮಾಡಬೇಕು. ಇದರಿಂದ ತಲೆ, ಹಲ್ಲು ಸಮಸ್ಯೆಗಳು ಮಾಯವಾಗುತ್ತವೆ.
ಸೈನಸ್ ಸಮಸ್ಯೆ.ಸಣ್ಣ ಮಕ್ಕಳು ಸೈನಸ್ ಶ್ವಾಸಕೋಶ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಕಾಲು ಹೆಬ್ಬೆರಳಿನ ಮಧ್ಯದ ಭಾಗವನ್ನು ಮೆತ್ತಗೆ ಮಸಾಜ್ ಮಾಡಬೇಕು. ಇದರಿಂದ ಮಕ್ಕಳು ತಮ್ಮ ಸಮಸ್ಯೆಗಳಿಂದ ಪಾರಾಗುತ್ತಾರೆ.
ಶ್ವಾಸಕೊಶ ಸಮಸ್ಯೆ.ಪಾದಗಳ ಮೇಲೆ ಒತ್ತಡ ಹೇರುತ್ತಾ, ಆ ಪ್ರದೇಶಗದಲ್ಲಿ ಸ್ವಲ್ಪ ಹೊತ್ತು ಮಸಾಜ್ ಮಾಡಿದರೆ ಕೆಮ್ಮು, ನೆಗಡಿಯಂತಹ ಸಮಸ್ಯೆಗಳು ದೂರವಾಗುತ್ತವೆ.
ಶ್ವಾಸಕೋಶ,ಹೊಟ್ಟೆ ಮಧ್ಯಭಾಗಕ್ಕೆ.ಕೆಲವು ಮಕ್ಕಳಿಗೆ ಶ್ವಾಸಕೋಶ ಮತ್ತು ಹೊಟ್ಟೆಯ ಮಧ್ಯ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದನ್ನು ಸೋಲಾರ್ ಪ್ಲೆಕ್ಸಸ್ ಎಂದು ಕರೆಯುತ್ತಾರೆ. ಇದನ್ನು ಕಡಿಮೆ ಮಾಡಬೇಕೆಂದರೆ ಕಾಲು ಹೆಬ್ಬೆರಳುಗಳ ಮಧ್ಯ ಬಾಗದಲ್ಲಿ ಮೆತ್ತಗೆ ಮಸಾಜ್ ಮಾಡಬೇಕು.
ಜೀರ್ಣ ಸಮಸ್ಯೆಗಳಿಗೆ.ಪಾದಗಳ ಮೇಲೆ ವಕ್ರವಾಗಿ, ಆರ್ಕ್ ರೂಪದಲ್ಲಿ ಇರುವ ಪ್ರದೇಶದಲ್ಲಿ ಮಸಾಜ್ ಮಾಡಿದರೆ ಜೀರ್ಣಾಂಗ ಸಮಸ್ಯೆಗಳು ದೂರವಾಗುತ್ತವೆ. ಆರ್ಕ್ ಕೆಳಗಿನ ಭಾಗದಲ್ಲಿ ಮಸಾಜ್ ಮಾಡಿದರೆ ಗ್ಯಾಸ್ಟ್ರಿಕ್ ಇಲ್ಲವಾಗುತ್ತದೆ.
ಇತರ ಸಮಸ್ಯೆಗಳು.ಕಾಲು ಹಿಮ್ಮಡಿ ಮೇಲೆ ಮೆತ್ತಗೆ ಮಸಾಜ್ ಮಾಡುವುದರಿಂದ ಮಾಂಸಖಂಡಗಳ ಸಮಸ್ಯೆಗಳು ಕಡಿಮೆಯಾಗುತ್ತವೆ. ಉತ್ತಮ ದೇಹ ಆಕೃತಿ ನಿಮ್ಮದಾಗುತ್ತದೆ.
ಅಳುವಿಗೆ.ಎರಡು ಪಾದಗಳ ಕೆಳಗಿನ ಮಧ್ಯ ಭಾಗದಲ್ಲಿ ಮಸಾಜ್ ಮಾಡಿದರೆ ಮಕ್ಕಳು ತಕ್ಷಣ ಅಳು ನಿಲ್ಲಿಸುತ್ತಾರೆ.
ಹಲ್ಲು, ತಲೆ ಸಮಸ್ಯೆಗಳಿಗೆ.ಕಾಲು ಹೆಬ್ಬೆಟ್ಟಿನ ಕೊನೆ ಭಾಗದ ಕೆಲವು ಭಾಗಗಳನ್ನು ಮೆತ್ತಗೆ ಮಸಾಜ್ ಮಾಡಬೇಕು. ಇದರಿಂದ ತಲೆ, ಹಲ್ಲು ಸಮಸ್ಯೆಗಳು ಮಾಯವಾಗುತ್ತವೆ.
ಸೈನಸ್ ಸಮಸ್ಯೆ.ಸಣ್ಣ ಮಕ್ಕಳು ಸೈನಸ್ ಶ್ವಾಸಕೋಶ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಕಾಲು ಹೆಬ್ಬೆರಳಿನ ಮಧ್ಯದ ಭಾಗವನ್ನು ಮೆತ್ತಗೆ ಮಸಾಜ್ ಮಾಡಬೇಕು. ಇದರಿಂದ ಮಕ್ಕಳು ತಮ್ಮ ಸಮಸ್ಯೆಗಳಿಂದ ಪಾರಾಗುತ್ತಾರೆ.