ಸರ್ಪ ಸುತ್ತು ವೈರಸ್ ಸೋಂಕಿಗೆ ಇಲ್ಲಿದೆ ಮನೆಮದ್ದು
ಸರ್ಪ ಸುತ್ತು (herpes-zoster)ಎನ್ನುವುದು ಅದು ಒಂದು ವೈರಸ್ ಸೋಂಕು. ಇದರಿಂದ ಶರೀರದಲ್ಲಿ ನೋವು ಹಾಗು ಉರಿಯಿಂದ ಕೂಡಿರುವ ಚಿಕ್ಕ ಚಿಕ್ಕ ಗುಳ್ಳೆಗಳು ಏಳುತ್ತವೆ. ಹಾಗೇ ಅದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹರಡುತ್ತದೆ. ಅದನ್ನು ಕೆಲವು ಮನೆಮದ್ದಿನಿಂದ ಹೋಗಲಾಡಿಸಬಹುದು.
- ಬೇವಿನ ಎಲೆಯ ರಸವನ್ನು ಮೈಗೆಲ್ಲಾ ಹಚ್ಚುವುದರಿಂದ ಈ ಸೋಂಕಿನಿಂದ ಮುಕ್ತಿಹೊಂದಬಹುದು.
- ಗರಿಕೆಯನ್ನು ಬೇರು ಸಮೇತ ಕಿತ್ತು ಚೆನ್ನಾಗಿ ನೀರಿನಲ್ಲಿತೊಳೆದು ನುಣ್ಣಗೆ ಅರೆದು ಸರ್ಪ ಸುತ್ತು ಇರುವ ಜಾಗಕ್ಕೆ ಹಚ್ಚಬೇಕು.
- ಗೋಟು ಅಡಿಕೆಯನ್ನು ಅಕ್ಕಿ ತೊಳೆದ ನೀರಿನಲ್ಲಿ ಅರೆದು ಸರ್ಪ ಸುತ್ತುಇರುವ ಜಾಗಕ್ಕೆ ದಿನಕ್ಕೆ ಸರ್ಪ ಸುತ್ತುಜಾಗಕ್ಕೆ 4 ಬಾರಿ ಹಚ್ಚಬೇಕು.
- ಕೆಂಪು ಅಥವಾ ಬಿಳಿ ಅಗಸೆ ಸೊಪ್ಪನ್ನು ತಣ್ಣೀರಿನಲ್ಲಿ ನುಣ್ಣಗೆ ಅರೆದು ಹಚ್ಚಬೇಕು.
- ನೆಲ್ಲಿ ಪುಡಿ , ಲಾವಂಚ , ಸೊಗದೆ ಬೇರು ಪ್ರತಿಯೊಂದನ್ನು 10-15 ಗ್ರಾಂ ನಷ್ಟು ತೆಗೆದುಕೊಂಡು ಬೇರೆ ಬೇರೆಯಾಗಿ ಪುಡಿ ಮಾಡಿ 8ರಷ್ಟು ನೀರು ಬೇರೆಸಿ ಕುದಿಸಿ ಅದು ಅರ್ಧದಷಗಟು ಆದ ಮೇಲೆ ಇಳಿಸಿ ಆರಿಸಿ ದಿನಕ್ಕೆ 2 ಬಾರಿ ಸೇವಿಸಬೇಕು , 2 ಚಮಚಕ್ಕಿಂತ ಜಾಸ್ತಿ ಸೇವಿಸಬಾರದು.
ಇವುಗಳನ್ನು 21ದಿನ ಮಾಡಬೇಕು.
ಈ ಸಮಯದಲ್ಲಿ ಉದ್ದಿನಕಾಳು , ಹುರುಳಿಕಾಳು , ಈರುಳ್ಳಿ , ಬೆಳ್ಳುಳ್ಳಿ , ಜಿಡ್ಡು ಪದಾರ್ಥ , ಬೆಲ್ಲ , ಸಿಹಿ ಪದಾರ್ಥ ಹಾಗು ಹಗಲು ನಿದ್ದೆ ಮಾಡಬಾರದು.