ಮೆಂತ್ಯೆ, ಓಂಕಾಳು, ಜೀರಿಗೆ ಮೂರೂ ಬೆರೆಸಿ 3 ತಿಂಗಳ ಕಾಲ ಸೇವಿಸಿದರೆ ಆಗುವ ಉಪಯೋಗ

ಬಿಸಿ ನೀರಿನಲ್ಲಿ ಮೆಂತ್ಯೆ, ಓಂಕಾಳು, ಜೀರಿಗೆ ಪುಡಿ ಬೆರೆಸಿ ಕುಡಿದರೆ 3 ತಿಂಗಳಲ್ಲಿ ದೇಹದಲ್ಲಿನ ಕೆಟ್ಟ ಕೊಬ್ಬೆಲ್ಲಾ ಕರಗಿ ತೂಕ ಕಡಿಮೆಯಾಗುತ್ತವೆ.. ಕೇವಲ ತೂಕವಷ್ಟೇ ಅಲ್ಲ… ಕೂದಲ ಬೆಳವಣಿಗೆ, ಹೃದಯ ಸಂಬಂಧಿ ಕಾಯಿಲೆಗಳು, ಮಲಬದ್ಧತೆ ಇನ್ನೂ ಅನೇಕ ಸಮಸ್ಯೆಗಳಿಗೆ ಉತ್ತಮ ಪರಿಹಾರವಾಗಿ ಈ ಪುಡಿ ಕೆಲಸ ಮಾಡುತ್ತದೆ. ಆ ಪುಡಿಯನ್ನು ಹೇಗೆ ತಯಾರಿಸಿಕೊಳ್ಳಬೇಕು, ಹೇಗೆ ಬಳಸಬೇಕು… ಅದರಿಂದ ಆಗುವ ಇತರೆ ಉಪಯೋಗಗಳು ಏನು ಎಂದು ತಿಳಿದುಕೊಳ್ಳೋಣ.

ಬೇಕಾದ ಪದಾರ್ಥಗಳು: 250 ಗ್ರಾಂ ಮೆಂತ್ಯೆ, 100 ಗ್ರಾಂ ಓಂಕಾಳು, 50 ಗ್ರಾಂ ಜೀರಿಗೆ
ತಯಾರಿಸುವ ವಿಧಾನ:ಮೊದಲು 3 ಪದಾರ್ಥಗಳನ್ನು ಬೇರೆಬೇರೆ ಹೆಂಚಿನ ಮೇಲೆ ಹಾಕಿ ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು. ಮೆಂತ್ಯೆ, ಓಂಕಾಳು, ಕಪ್ಪು ಜೀರಿಗೆ ಬೆರೆಸಿ ಪುಡಿ ಮಾಡಿಕೊಳ್ಳಬೇಕು. ಆ ಪುಡಿಯನ್ನು ಗಾಳಿಯಾಡದ ಬಾಟಲಿಯಲ್ಲಿಡಬೇಕು.

ಬಳಸುವುದು ಹೇಗೆ?ನಿತ್ಯ ರಾತ್ರಿ ಊಟದ ಬಳಿಕ 1 ಗ್ಲಾಸ್ ಬಿಸಿ ನೀರಿನಲ್ಲಿ 1 ಸ್ಪೂನ್ ಪುಡಿಯನ್ನು ಬೆರೆಸಿ ಕುಡಿಯಬೇಕು. ಕುಡಿದ ಬಳಿಕ ಯಾವುದೇ ಆಹಾರ ತೆಗೆದುಕೊಳ್ಳಬಾರದು.

ನಿತ್ಯ ಈ ಪುಡಿಯನ್ನು ಬಳಸುವುದರಿಂದ ದೇಹದಲ್ಲಿ ಸಂಗ್ರಹವಾಗಿರುವ ವಿಷ ಪದಾರ್ಥಗಳು ಮಲ, ಮೂತ್ರ, ಬೆವರಿನ ಮೂಲಕ ಹೊರಹೋಗುತ್ತವೆ. ನಿಯಮಿತವಾಗಿ 40-45 ದಿನ ಬಳಸಿದರೆ ತುಂಬಾ
ಪ್ರಯೋಜನಕಾರಿಯಾಗುತ್ತದೆ. 3 ತಿಂಗಳು ಬಳಸಿದರೆ ನಿಮ್ಮ ಆರೋಗ್ಯಕ್ಕೆ ಸರಿಸಾಟಿ ಇರಲ್ಲ.

ಈ ಪುಡಿಯನ್ನು ಬಳಸಿದ ಮೇಲೆ ದೇಹದಲ್ಲಿನ ಅಧಿಕ ಕೊಬ್ಬು ಕರಗಿಹೋಗುತ್ತದೆ. ರಕ್ತ ಶುದ್ಧಿಯಾಗುತ್ತದೆ. ದೇಹದಲ್ಲಿ ಉತ್ತಮವಾದ ರಕ್ತ ಪ್ರವಹಿಸುತ್ತದೆ. ದೇಹದ ಮೇಲಿನ ಸುಕ್ಕುಗಳು ನಿವಾರಣೆಯಾಗುತ್ತದೆ. ಯೌವನದಿಂದ ಇರುತ್ತೀರ. ದೇಹ ದೃಢವಾಗಿ, ಚುರುಗಾಗಿ, ಹೊಳಪಿನಿಂದ ಕೂಡಿರುತ್ತದೆ.

ಈ ಪುಡಿಯಿಂದ ಆಗುವ ಇತರೆ ಪ್ರಯೋಜನಗಳು:ಕೀಲು, ಮೊಣಕಾಲು ನೋವು ಕಡಿಮೆಯಾಗುತ್ತದೆ. ಮೂಳೆಗಳು ಬಲಗೊಳ್ಳುತ್ತವೆ.ಕಣ್ಣಿನ ದೃಷ್ಟಿ ಚುರುಕಾಗುತ್ತದೆ ಅಲ್ಲದೆ… ವಸಡುಗಳು ದೃಢವಾಗುತ್ತವೆ, ಆರೋಗ್ಯವಾಗಿ ಬದಲಾಗುತ್ತಾರೆ.

ಈ ಹಿಂದೆ ತೆಗೆದುಕೊಂಡಿದ್ದ ಇಂಗ್ಲಿಷ್ ಮೆಡಿಸಿನ್ ಸೈಡ್ ಎಫೆಕ್ಟ್ಸ್‌ನ್ನು ಇದು ಕ್ಲಿಯರ್ ಮಾಡುತ್ತದೆ. ಕೂದಲ ಬೆಳವಣಿಗೆಯನ್ನು ಇದು ಉತ್ತಮ ಪಡಿಸುತ್ತದೆ.ಮಲಬದ್ಧತೆ ಶಾಶ್ವತವಾಗಿ ದೂರವಾಗುತ್ತದೆ. ಮೋಷನ್ ಸುಲಭವಾಗಿ ಆಗುತ್ತದೆ.ರಕ್ತ ಸಂಚಲನೆ ಉತ್ತಮಗೊಳ್ಳುತ್ತದೆ. ಹೃದಯದ ಕೆಲಸ ಸುಧಾರಿಸುತ್ತದೆ.ದೀರ್ಘಕಾಲದಿಂದ ಕೆಮ್ಮಿನಿಂದ ಬಳಲುತ್ತಿರುವವರಿಗೆ ಇದು ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ. ಇದನ್ನು ನಿತ್ಯ ರಾತ್ರಿ ಹೊತ್ತು ಸೇವಿಸಿದರೆ ಕೆಮ್ಮು ನಿವಾರಣೆಯಾಗುತ್ತದೆ.

ಮಿದುಳು ಚುರುಕಾಗುತ್ತದೆ. ಶ್ರವಣ ಸಾಮರ್ಥ್ಯ ಬೆಳೆಯುತ್ತದೆ. ನಿತ್ಯ ಕೆಲಸಗಳಲ್ಲಿ ಚುರುಕಾಗಿ ಪಾಲ್ಗೊಳ್ಳಬಹುದು.ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ. ಇದರ ಫಲಿತಾಂಶಗಳನ್ನು ಗಮನಿಸಿದವರು ಈ ಪುಡಿಯನ್ನು ಮತ್ತೆ ಬಳಸಬೇಕೆಂದರೆ ಮೂರು ತಿಂಗಳಿಗೊಮ್ಮೆ ಹದಿನೈದು ದಿನ ಗ್ಯಾಪ್ ಬಿಟ್ಟು ಮತ್ತೆ ಕುಡಿಯುವುದನ್ನು ಶುರು ಮಾಡಬೇಕು

Leave a Reply

Your email address will not be published. Required fields are marked *

error: Content is protected !!