ಹೋಟೆಲ್ ಕಾರ್ತಿಕ್ ಎಸ್ಟೇಟ್ : ತುಳುನಾಡಿನ ಸಾಂಪ್ರದಾಯಿಕ ತಿನಿಸುಗಳ “ಆಟಿದ ಅಟ್ಟಿಲ್”
ಆಷಾಢ ಮಾಸದ ಪ್ರಯುಕ್ತ ತುಳುನಾಡಿನ ಪರಂಪರೆಯಿಂದ ನಡೆದುಕೊಂಡು ಬಂದ ವಿಶೇಷ ತಿನಿಸುಗಳ ಮೇಳ “ಆಟಿದ ಅಟ್ಟಿಲ್” ಜುಲೈ 20 ರಿಂದ ಆಗಸ್ಟ್ 11 ರವರೆಗೆ ಅಂಬಲಪಾಡಿ ಹೋಟೆಲ್ ಕಾರ್ತಿಕ್ ಎಸ್ಟೇಟ್ ನಲ್ಲಿ ನಡೆಯಲಿದೆ.
ಆಟಿ ತಿಂಗಳ ಪ್ರತಿ ಶನಿವಾರ ಮತ್ತು ರವಿವಾರ ಗ್ರಾಹಕರಿಗೆ ಘಮಘಮಿಸುವ ಸ್ವಾದಿಷ್ಟ ನಾಟಿ ಕೋಳಿ ಮತ್ತು ಮೀನಿನ ಖಾದ್ಯಗಳು ಸಿಗಲಿವೆ.
ಹೋಟೆಲ್ ಕಾರ್ತಿಕ್ ಎಸ್ಟೇಟ್ ನಲ್ಲಿ ಆಟಿ ತಿಂಗಳಲ್ಲಿ ದೊರಕುವ ವೈವಿಧ್ಯ ಖಾದ್ಯಗಳು
ಜುಲೈ 20 ರಂದು ತಿಮರೆ ಚಟ್ನಿ, ಎಟ್ಟಿ ಚಟ್ನಿ, ತೊಜಂಕ್, ಹೆಸರು, ಉಪ್ಪು ಕರಿ, ಮೂಡೆ, ಪತ್ರೊಡೆ, ಕೊಯ್ಯಲು ಸುಕ್ಕ, ಉಪ್ಪಡ್ ಪಚ್ಚಿಲ್, ಊರುದ ಕೋರಿ, ಮೀನು ಗಸಿ, ಮೆ೦ತ್ತೆ ಗಂಜಿ, ಗೋಯಿ೦ಟ ಪೋಡಿ.
ಜುಲೈ 21 ರಂದು ಹುರುಳಿ ಚಟ್ನಿ, ಎಟ್ಟಿ ಚಟ್ನಿ, ಕಣಿಲೆ, ಹೆಸರು ಉಪ್ಪು ಕರಿ, ನೀರ್ ದೋಸೆ,ನಾಟಿ ಕೋರಿ, ಮಣ್ಣಿ.
ಜುಲೈ 27 ರಂದು ಹುರುಳಿ ಚಟ್ನಿ, ಉಪ್ಪಡ್ ಪಚ್ಚಿರ್, ಗಂಡೆದ ಅಡ್ಡೆ, ನಾಟಿ ಕೋಳಿ ಸುಕ್ಕ, ಗಂಜಿ ಊಟ ಮಣ್ಣಿ, ಮೆಂತೆ ಗಂಜಿ, ಪೋಡಿ.
ಜುಲೈ 28 ರಂದು ಕಡ್ಲೆ, ಬಲ್ಯಾರ್ ಸುಕ್ಕ, ಓಡು ರೊಟ್ಟಿ, ಪತ್ರೋಡೆ, ಕೊಯ್ಯಲು ಸುಕ್ಕ, ಒಣ ಮೀನು ಗಸಿ, ನಾಟಿ ಕೋಳಿ, ಮೆಂತೆ ಗಂಜಿ, ಮಣ್ಣಿ, ಪೋಡಿ ಮೊದಲಾದ ಸಾಂಪ್ರದಾಯಿಕ ವಿವಿಧ ಬಗೆಯ ತಿನಿಸುಗಳು ಹೋಟೆಲ್ ಕಾರ್ತಿಕ್ ಎಸ್ಟೇಟ್ ನಲ್ಲಿ ಲಭ್ಯವಿದೆ.
ರಾಷ್ಟ್ರೀಯ ಹೆದ್ದಾರಿ 66 ಅಂಬಲಪಾಡಿ ಜಂಕ್ಷನ್ ನಲ್ಲಿ ಕೆಲವು ತಿಂಗಳುಗಳ ಹಿಂದೆ ಆರಂಭವಾಗಿರುವ ಹೋಟೆಲ್ ಕಾರ್ತಿಕ್ ಎಸ್ಟೇಟ್ನಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಫ್ಯಾಮಿಲಿ ರೆಸ್ಟೊರೆಂಟ್ ಗಳು ಗ್ರಾಹಕರಿಗೆ ಶುಚಿ ರುಚಿಯಾದ ಖಾದ್ಯಗಳನ್ನು ನೀಡುತ್ತಿದ್ದು, ಪ್ರವಾಸಿಗರಿಗೆ ವಸತಿ ಗೃಹಗಳು ಲಭ್ಯವಿದೆ.