ಜೇಸಿಐ ಪಂಜ ಪಂಚಶ್ರೀ ವತಿಯಿಂದ ಪಂಜ ಪೂರ್ವ ಪ್ರಾಥಮಿಕ ಶಾಲೆಗೆ ಆಟಿಕೆ ಸಾಮಗ್ರಿಗಳ ಕೊಡುಗೆ

ಜೇಸಿಐ ಪಂಜ ಪಂಚಶ್ರೀ ವತಿಯಿಂದ JFP ಮನು.ಯಂ. ತೊಂಡಚ್ಚನ್ ರವರ ಪ್ರಯೋಜಕತ್ವದಲ್ಲಿ ಪಂಜ ಪೂರ್ವ ಪ್ರಾಥಮಿಕ ಆಂಗ್ಲ ಮಾದ್ಯಮ ಶಾಲೆಗೆ ಸುಮಾರು ರೂ.12,000 ಮೌಲ್ಯದ ಮಕ್ಕಳ ಆಟಿಕೆ ಸಾಮಾಗ್ರಿಗಳನ್ನು ವಿದ್ಯಾರ್ಥಿಗಳ ಕಲಿಕಾ ತಯಾರಿಗಾಗಿ ನೀಡಲಾಯಿತು.

 

 

ಘಟಕದ ಸಮಾಜಮುಖಿ ಚಿಂತಕ ಜೇಸಿ ಮನು ಪಂಜ ಇವರು ಇಗಾಗಲೇ ಹಲವು ಜನೋಪಯೋಗಿ ಕೊಡುಗೆಗಳನ್ನು ನೀಡುತ್ತಾ ತನ್ಮೂಲಕ ಜನಪ್ರಿಯತೆಯನ್ನು ಗಳಿಸಿರುತ್ತಾರೆ. ಜೇಸಿಐ ಪಂಜ ಪಂಚಶ್ರೀಯ ಘಟಕಾಧ್ಯಕ್ಷ ವಾಸುದೇವ ಮೇಲ್ಪಾಡಿ ಹಾಗೂ ಜೇಸಿ ಮನು.ಎಂ.ತೊಂಡಚ್ಚನ್ ಚೆಕ್ಕನ್ನು ಶಾಲಾಭಿವೃದ್ದಿ ಅಧ್ಯಕ್ಷರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಯತ್ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್, ಸ್ಥಾಪಕಾಧ್ಯಕ್ಷ ಜೇಸಿ ದೇವಿಪ್ರಸಾದ್ ಜಾಕೆ, ಪೂರ್ವಧ್ಯಕ್ಷ ಜೇಸಿ ಸೋಮಶೇಖರ ನೇರಳ, ಜೇಸಿ ವಾಚ್ಚಣ್ಣ ಕೆರೆಮೂಲೆ ವೇದಿಕೆಯಲ್ಲಿದ್ದರು. ಜೇಸಿ ಉಜ್ವಲ್ ಚಿದ್ಗಲ್, ಜೇಸಿ ದಯಪ್ರಸಾದ್ ಚಿಮುಳ್ಳು, ಎಸ್.ಡಿ.ಎಂ.ಸಿ ಅಧ್ಯಕ್ಷರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಶಾಲಾ ಶಿಕ್ಷಕಿಯರು, ಪೋಷಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!